ಮೈಸೂರು ದಸರಾಕ್ಕೆ ಗೋಲ್ಡನ್ ಚಾರಿಯಟ್ ರೈಲಿನಲ್ಲಿ ಹೋಗಿ

ಬೆಂಗಳೂರು, ಅ.14 : ಪ್ರವಾಸೋದ್ಯಮ ಇಲಾಖೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮೈಸೂರು ದಸರಾ ಪ್ರಯುಕ್ತ ಗೋಲ್ಡನ್ ಚಾರಿಯಟ್ ವಿಶೇಷ ರೈಲು ಪ್ರವಾಸದ ಪ್ಯಾಕೇಜ್ ರೂಪಿಸಿದೆ. ಒಟ್ಟು 88 ಪ್ರವಾಸಿಗರಿಗೆ ಅವಕಾಶವಿರುತ್ತದೆ.

ಸೆಪ್ಟೆಂಬರ್ 23ರಿಂದ ಅಕ್ಟೋಬರ್ 1ರ ತನಕ ಈ ವಿಶೇಷ ಪ್ಯಾಕೇಜ್ ಲಭ್ಯವಿರುತ್ತದೆ. ಎರಡು ರಾತ್ರಿ ಮತ್ತು ಒಂದು ದಿನದ ಪ್ಯಾಕೇಜ್‌ಗೆ ಭಾರತೀಯರಿಗೆ 25, ವಿದೇಶಿಯರಿಗೆ 40 ಸಾವಿರ ರೂ. ದರ ನಿಗದಿ ಮಾಡಲಾಗಿದೆ.

Mysuru Dasara 2017 : Golden Chariot to head Mysuru this year too

ಸೆಪ್ಟೆಂಬರ್ 23ಮತ್ತು 29ರಂದು ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ಸುವರ್ಣರಥ ರೈಲು ಹೊರಡಲಿದೆ. ಈ ರೈಲು 44 ಐಷಾರಾಮಿ ಬೋಗಿಗಳನ್ನು ಹೊಂದಿದ್ದು, 88 ಪ್ರವಾಸಿಗರು ಮಾತ್ರ ಪ್ರಯಾಣ ಮಾಡಲು ಅವಕಾಶವಿರುತ್ತದೆ.

ಅಂದಹಾಗೆ ಸೆಪ್ಟೆಂಬರ್ 21ರಿಂದ 30ರ ತನಕ ಈ ಬಾರಿಯ ದಸರಾ ಮಹೋತ್ಸವ ನಡೆಯಲಿದೆ. ದಸರಾಕ್ಕೆ ಹೆಚ್ಚು ಪ್ರವಾಸಿಗರನ್ನು ಸೆಳೆಯಲು ಪ್ರವಾಸೋದ್ಯಮ ಇಲಾಖೆ ಈ ವಿಶೇಷ ಪ್ಯಾಕೇಜ್ ರೂಪಿಸಿದೆ. ಪ್ರತಿ ವರ್ಷ ದಸರಾ ಸಮಯದಲ್ಲಿ ಕೆಎಸ್‌ಆರ್‌ಟಿಸಿ ಸಹ ಮೈಸೂರಿಗೆ ಹೆಚ್ಚುವರಿ ಬಸ್ಸುಗಳನ್ನು ಓಡಿಸುತ್ತದೆ.

ಹೆಚ್ಚಿನ ಮಾಹಿತಿಗಾಗಿ http://www.goldenchariottrain.com/ ವೆಬ್ ಸೈಟ್ ನೋಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+