ರೋಮಾಂಚಕ ಅನುಭವ ನೀಡಲಿರುವ ದಸರಾ ಜಲಸಾಹಸ ಕ್ರೀಡೆ
ಮೈಸೂರು, ಸೆಪ್ಟೆಂಬರ್ 21 : 2017ನೇ ಸಾಲಿನ ಮೈಸೂರು ದಸರಾ ಮಹೋತ್ಸವದಕ್ಕೆ ಚಾಲನೆ ಸಿಕ್ಕಿದೆ. ಮೈಸೂರಿನ ವರುಣ ಕೆರೆಯಲ್ಲಿ ದಸರಾ ಜಲಸಾಹಸ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಇಂದು ಈ ಕ್ರೀಡಾಕೂಟಕ್ಕೆ ಚಾಲನೆ ಸಿಗಲಿದೆ.
ಜನರಲ್ ತಿಮ್ಮಯ್ಯ ಸಾಹಸ ಕ್ರೀಡೆಗಳ ಅಕಾಡೆಮಿ ವತಿಯಿಂದ ವರುಣ ಕೆರೆಯಲ್ಲಿ ಜಲಸಾಹಸ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಯುವ ಸಬಲೀಕರಣ ಮತ್ತು ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಅವರು 11 ಗಂಟೆಗೆ ಜಲಸಾಹಸ ಕ್ರೀಡೆಗಳನ್ನು ಉದ್ಘಾಟಿಸಲಿದ್ದಾರೆ.

ಪ್ರತಿ ವರ್ಷದಂತೆ ಈ ಬಾರಿಯೂ ಜೆಟ್ ಸ್ಕೀ ರೈಡ್, ಬನಾನ ಬೊಟ್ ರೈಡ್, ಸ್ಪೀಡ್ ಬೊಟ್, ವಾಟರ್ ರ್ಯಾಫ್ಟಿಂಗ್ ಅನ್ನು ರಿಯಾಯಿತಿ ದರದಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಪಡೆಯಬಹುದಾಗಿದೆ. ಪ್ರತಿದಿನ ಬೆಳಗ್ಗೆ 8.30 ರಿಂದ ಸಂಜೆ ಸಂಜೆ 5.30 ರವರೆಗೂ ಜಲಸಾಹಸ ಕ್ರೀಡೆಗಳು ನಡೆಯಲಿದೆ. ಸ್ಥಳದಲ್ಲಿಯೇ ಟಿಕೇಟ್ ಪಡೆದು ಕ್ರೀಡೆಗಳಲ್ಲಿ ಪಾಲ್ಗೊಳ್ಳಬಹುದು.
ಯುವ ದಸರಾ : 'ಯುವ ದಸರಾ ಸೆ.22ರಿಂದ 29ರ ತನಕ ನಡೆಯಲಿದೆ' ಎಂದು ಉಪಸಮಿತಿಯ ಅಧ್ಯಕ್ಷರಾದ ಮಂಜುನಾಥ್ ಹೇಳಿದ್ದಾರೆ. ಸೆಪ್ಟೆಂಬರ್ 22 ರಂದು ಸಂಜೆ 6 ಗಂಟೆಗೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವರಾದ ಹೆಚ್.ಸಿ. ಮಹದೇವಪ್ಪ ಅವರು ಉದ್ಘಾಟಿಸಲಿದ್ದಾರೆ.
Recommended Video













Click it and Unblock the Notifications