SWR: ಮೈಸೂರು-ಚೆನ್ನೈ ಶತಾಭ್ದಿ ರೈಲು: ವಾರದಲ್ಲಿ 6 ದಿನ ಓಡಾಟ, ಪರಿಷ್ಕೃತ ವೇಳಾಪಟ್ಟಿ
ಬೆಂಗಳೂರು, ಆಗಸ್ಟ್ 24; ರಾಜಧಾನಿ ಬೆಂಗಳೂರು ಮಾರ್ಗವಾಗಿ ಸಂಚರಿಸುವ ಚೆನ್ನೈ- ಮೈಸೂರು ಶತಾಬ್ಧಿ ಎಕ್ಸ್‌ಪ್ರೆಸ್ ರೈಲು ಪ್ರಯಾಣಿಕರಿಗೆ ನೈಋತ್ಯ ರೈಲ್ವೆ (SWR) ಸಿಹಿ ಸುದ್ದಿಯೊಂದನ್ನು ನೀಡಿದೆ. ವಾರದಲ್ಲಿ ಆರು ದಿನ ಈ ಮಾರ್ಗದಲ್ಲಿ ಶತಾಬ್ಧಿ ಮತ್ತು ವಂದೇ ಭಾರತ ಎಕ್ಸ್‌ಪ್ರೆಸ್ ರೈಲು ಸಂಚರಿಸಲಿದ್ದು, ವೇಳಾಪಟ್ಟಿ ಬಿಡುಗಡೆಗೊಳ್ಳಲಿದೆ.
ಕರ್ನಾಟಕದ ಮೈಸೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚೆನ್ನೈ ಎಕ್ಸ್‌ಪ್ರೆಸ್ (Shatabdi Express) ಮತ್ತು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಬುಧವಾರ ಸಿಗದ ಹಿನ್ನೆಲೆ ಪ್ರಯಾಣಿಕರ ತೊಂದರೆ ಅನುಭಿಸಿದ್ದರು. ಇದೀಗ ವಾರದ ಆರು ದಿನಗಳು ಶತಾಬ್ಧಿ ರೈಲು ಓಡಾಡಲಿದೆ.

ರೈಲು ವೇಳಾಪಟ್ಟಿಯನ್ನು ನೈಋತ್ಯ ರೈಲ್ವೆ (SWR)ಯ ಮೈಸೂರು ವಿಭಾಗ ಪರಿಷ್ಕರಣೆ ಮಾಡಿದೆ. ಈ ಕುರಿತು ವೇಳಾಪಟ್ಟಿಯನ್ನು ಇದೇ ವರ್ಷಾಂತ್ಯ ಡಿಸೆಂಬರ್ 20ರಂದು ಬಿಡುಗಡೆ ಮಾಡುವುದಾಗಿ SWR ತಿಳಿಸಿದೆ. ನಿಗದಿಯಂತೆ ಶತಾಬ್ಧಿ ರೈಲು ಗುರುವಾರ ಒಂದು ದಿನ ಹೊರತುಪಡಿಸಿ ಪ್ರಯಾಣ ಸೇವೆ ನೀಡಲಿದೆ.
ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಯಾವಾಗ?
ಚೆನ್ನೈ-ಮೈಸೂರು-ಚೆನ್ನೈ ಶತಾಬ್ಧಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12007/12008) ಗುರುವಾರ ಹೊರತುಪಡಿಸಿ ಬುಧವಾರ ಸೇರಿದಂತೆ ವಾರದಲ್ಲಿ ಆರು ದಿನಗಳು ಸಂಚರಿಸಲಿದೆ ಎಂದು ತಿಳಿಸಿದೆ. ಹೊಸ ವೇಳಾಪಟ್ಟಿ 2023 ರ ಡಿಸೆಂಬರ್ 20 ರಿಂದ ಜಾರಿಗೆ ಬರಲಿದೆ. ಈ ಹಿಂದೆ ಶತಾಬ್ಧಿ ರೈಲು ಬುಧವಾರದಂದು ಲಭ್ಯವಿರಲಿಲ್ಲ. ಪರಿಷ್ಕೃತ ವೇಳಾಪಟ್ಟಿಯೊಂದಿಗೆ, ಪ್ರಯಾಣಿಕರು ಗುರುವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಶತಾಬ್ಧಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸಬಹುದಾಗಿದೆ. ಇದರಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ.

ಚೆನ್ನೈ-ಮೈಸೂರು-ಚೆನ್ನೈ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯು ಬುಧವಾರ ಹೊರತುಪಡಿಸಿ ವಾರದಲ್ಲಿ ಆರು ದಿನಗಳು ಲಭ್ಯವಾಗಲಿದೆ ಎಂದು ತಿಳಿಸಲಾಗಿದೆ. ಇದು ಪ್ರಯಾಣೀಕಣಿಕರಿಗೆ ಪ್ರೀಮಿಯಂ ಪ್ರಯಾಣದ ಅನುಭವ ನೀಡಲಿದೆ. ರೈಲು ವೇಳಾಪಟ್ಟಿ ಅನುಗುಣವಾಗಿ ಜನರು ಪ್ರಯಾಣ ಉದ್ದೇಶ ರೂಪಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಡಿಸೆಂಬರ್ ವರೆಗೆ ಈಗಿರುವ ಅವಧಿಯಲ್ಲಿಯೇ ಶತಾಬ್ಧಿ ರೈಲು ಸಂಚರಿಸಲಿವೆ. ಹೆಚ್ಚುವರಿಯಾಗಿ ವಂದೇ ಭಾರತ್ ರೈಲು ಸಹ ಓಡಾಡಲಿವೆ.
ಮೈಸೂರು-ಚೆನ್ನೈ ಎಕ್ಸ್‌ಪ್ರೆಸ್ ರೈಲು ಮತ್ತು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಪರಿಷ್ಕೃತ ವೇಳಾಪಟ್ಟಿದೆ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ನೈಋತ್ಯ ರೈಲ್ವೆ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications