SWR: ಇಂದಿನಿಂದ ಈ ಮಾರ್ಗದ ರೈಲುಗಳು ಭಾಗಶಃ ರದ್ದು: SMVT ಬೆಂಗಳೂರಿನಿಂದ ಓಣಂ ವಿಶೇಷ ರೈಲು ಸೇವೆ

ಬೆಂಗಳೂರು: ಹಾಸನ ಮತ್ತು ಹೊಳೆನರಸೀಪುರ ನಿಲ್ದಾಣದ ಯಾರ್ಡ್ ಗಳಲ್ಲಿ ಅತ್ಯಗತ್ಯ ನಿರ್ವಹಣಾ ಕಾಮಗಾರಿಗಳ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಈ ಮಾರ್ಗದ ವಿವಿಧ ರೈಲುಗಳ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಕೆಲವು ರೈಲುಗಳ ಸಂಚಾರ ಭಾಗಶಃ ರದ್ದಾಗಿದ್ದು, ನಿಯಂತ್ರಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ಓಣಂ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ತೆರಳುವವರಿಗೆ ಅನುಕೂಲವಾಗುವಂತೆ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ ನಿಂದ ಒಂದು ಟ್ರಿಪ್ ವಿಶೇಷ ರೈಲು ಸಂಚಾರ ಮಾಡಲಿದೆ. ಈ ರೈಲಿನ ಸಂಚಾರ, ದಿನಾಂಕ, ವೇಳಾಪಟ್ಟಿ ಮುಂದಿದೆ.

Mysuru-Arasikere Trains

ಸಂಚಾರ ರದ್ದಾಗಿರುವ ರೈಲುಗಳ ಪಟ್ಟಿ

* 2026 ಆಗಸ್ಟ್ 19 ರಂದು ಅರಸೀಕೆರೆ-ಮೈಸೂರು ಡೈಲಿ ಪ್ಯಾಸೆಂಜರ್ ರೈಲು (56267) ರದ್ದುಗೊಳಿಸಲಾಗಿದೆ.

* 2026 ಆಗಸ್ಟ್ 25 ಮತ್ತು 2026 ಸೆಪ್ಟಂಬರ್ 01 ರಂದು ಮೈಸೂರು-ಅರಸೀಕೆರೆ ಡೈಲಿ ಪ್ಯಾಸೆಂಜರ್ ರೈಲು (56268) ರದ್ದುಗೊಳ್ಳಲಿದೆ.

ಭಾಗಶಃ ರದ್ದುಗಳ ರೈಲು ವಿವರ

* 2026 ಆಗಸ್ಟ್ 19ರಂದು ಮೈಸೂರು-ಶಿವಮೊಗ್ಗ ಟೌನ್ ಡೈಲಿ ಎಕ್ಸ್'ಪ್ರೆಸ್ ರೈಲು (16225) ಮೈಸೂರು ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದುಗೊಂಡಿದೆ.

* 2026 ಆಗಸ್ಟ್ 25 ಮತ್ತು ಸೆಪ್ಟಂಬರ್ 01ರಂದು ಶಿವಮೊಗ್ಗ ಟೌನ್-ಮೈಸೂರು ಡೈಲಿ ಎಕ್ಸ್'ಪ್ರೆಸ್ ರೈಲು (16226) ಅರಸೀಕೆರೆ ಮತ್ತು ಮೈಸೂರು ನಡುವೆ ಭಾಗಶಃ ರದ್ದಾಗಲಿದೆ.

ರೈಲು ಸಂಚಾರ ನಿಯಂತ್ರಣ

2026 ಸೆಪ್ಟಂಬರ್ 19 ರಂದು ತಾಳಗುಪ್ಪ-ಮೈಸೂರು ಕುವೆಂಪು ಎಕ್ಸ್'ಪ್ರೆಸ್ ರೈಲು (16221) ಮಾರ್ಗಮಧ್ಯೆ 90 ನಿಮಿಷಗಳ ಕಾಲ ನಿಯಂತ್ರಣಕ್ಕೆ ಒಳಪಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೆಂಗಳೂರು SMVT- ತಿರುವನಂತಪುರಂ ವಿಶೇಷ ರೈಲು

ಓಣಂ ಹಬ್ಬದ ಪ್ರಯುಕ್ತ ಕೇರಳದ ರಾಜ್ಯದತ್ತ ಬೆಂಗಳೂರಿನಿಂದ ತೆರಳುವವರ ಸಂಖ್ಯೆ ಹೆಚ್ಚಿರುತ್ತದೆ. ಪ್ರತಿ ವರ್ಷದಂತೆ ಈ ವರ್ಷವು ವಿಶೇಷ ರೈಲುಗಳ ಸೇವೆ ಒದಗಿಸಲಾಗಿದೆ. ಅದರಲ್ಲಿ ಬೆಂಗಳೂರು ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ ನಿಂದ ತಿರುವನಂತಪುರಂ (ಉತ್ತರ) ವಿಶೇಷ ರೈಲು (06569/06570) ಇದೇ ಆಗಸ್ಟ್ 20ರಂದು ಗುರುವಾರ ಸಂಚಾರ ಮಾಡಲಿದೆ.

SMVT ನಿಲ್ದಾಣದಿಂದ ಈ ರೈಲು ಸಂಜೆ 5.10 ಗಂಟೆಗೆ ಹೊರಡುತ್ತದೆ. ಮಾರನೇ ದಿನ ತಿರುವನಂತಪುರಂ ಉತ್ತರ ನಿಲ್ದಾಣವನ್ನು ಬೆಳಗ್ಗೆ 10ಗಂಟೆಗೆ ತಲುಪುತ್ತದೆ. ಮರಳಿ ಅಲ್ಲಿಂದ ಆಗಸ್ಟ್ 22ರಂದು ಶನಿವಾರ ಮಧ್ಯಾಹ್ನ 12.40ಕ್ಕೆ ಹೊರಟು ಮಾರನೇ ದಿನ ಭಾನುವಾರ ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಎಸ್‌ಎಂವಿಟಿ ನಿಲ್ದಾಣಕ್ಕೆ ಬಂದು ಸೇರುತ್ತದೆ.

ರೈಲು ನಿಲುಗಡೆ ನಿಲ್ದಾಣಗಳು

ಒಂದು ಟ್ರಿಪ್ ಸೇವೆ ನೀಡಲಿರುವ ಓಣಂ ವಿಶೇಷ ರೈಲು ಎರಡು ದಿಕ್ಕಿನಲ್ಲಿ ಕೆ.ಆರ್.ಪುರಂ, ಬಂಗಾರಪೇಟೆ, ಕುಪ್ಪಂ, ಜೋಲಾರ್‌ಪೆಟ್ಟೈ ಜಂಕ್ಷನ್, ಸೇಲಂ, ಈರೋಡ್, ತಿರುಪ್ಪೂರ್, ಪೊದನೂರ್ ಜೂ., ಪಾಲಕ್ಕಾಡ್, ತ್ರಿಶೂರ್, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಾಸ್ಸೆರಿ, ತಿರುವಲ್ಲಾ, ಚೆಂಗನ್ನೂರ್, ಮಾವೇಲಿಕರ, ಕಾಯಂಕುಲಂ, ಕರುನಾಗಪ್ಪಲ್ಲಿ ಸ್ಟೇಷನ್, ಕೊಂಕಣೂ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಎಸಿ, ನಾನ್ ಎಸಿ, ಜನರಲ್ ಸೇರಿ ಈ ರೈಲು ಒಟ್ಟು 20 ಬೋಗಿಗಳನ್ನು ಹೊಂದಿರಲಿದೆ ಎಂದು ನೈಋತ್ಯ ರೈಲ್ವೆ ವಲಯದ ಪ್ರಕಟಣೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+