ಸೋಲಿಲ್ಲದ ಸೋಲಿಗ ಕೆಎಎಸ್ ಆದ ಕಥೆ!

Mysore Nagarahole Soliga Ravi Ramaiah becomes first KAS officer
ಮೈಸೂರು, ನ.28: ಕರ್ನಾಟಕದ ಅತಿ ಪುರಾತನ ಸಮುದಾಯವಾದ ಕಾಡುವಾಸಿ ಸೋಲಿಗರು ನಿಜಕ್ಕೂ ಹೆಮ್ಮೆ ಪಡುವಂತಾಗಿದೆ. ನಾಗರಹೊಳೆಯ ನಿವಾಸಿಯೊಬ್ಬರು ಸೀದಾ ಕಾಡಿನಿಂದ ಎದ್ದುಬಂದು ರಾಜ್ಯದ ಆಡಳಿತ ನಿರ್ವಹಿಸುವ ಶ್ರೇಯಸ್ಸಿಗೆ ಪಾತ್ರರಾಗಿದ್ದಾರೆ.

ಹೌದು ರವಿ ರಾಮಯ್ಯ ಎಂಬ 28 ವರ್ಷದ ಕಾಡುಜೀವಿ 2011ರಲ್ಲಿ ಕೆಎಎಸ್ ಪಾಸು ಮಾಡಿದ್ದು, ಕೆಎಎಸ್ ಆದ ಮೊದಲ ಸೋಲಿಗ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಆದರೆ ಯಾರದೂ ಮಾಡಿದ ತಪ್ಪಿಗೆ ಮತ್ಯಾರಿಗೋ ಶಿಕ್ಷೆ ಎಂಬಂತಾಗಿ ಇನ್ನೂ ಅಧಿಕಾರ ಹಿಡಿಯುವ ಭಾಗ್ಯ ಬಂದಿಲ್ಲ.

ಯಾಕಪ್ಪಾ ಅಂದರೆ 2011ರಲ್ಲಿ ಪರೀಕ್ಷೆ ಬರೆದಿದ್ದ 362ರ ಮಂದಿಯ ಪೈಕಿ 25 ಮಂದಿ ಪರೀಕ್ಷಾ ಅಕ್ರಮ ನಡೆಸಿದ್ದಾರೆ ಎಂದು ಆಯ್ಕೆ ಪ್ರಕ್ರಿಯೆಯನ್ನು ತಡೆಹಿಡಿಯಲಾಗಿದೆ. ಹಾಗಾಗಿ ರವಿ ರಾಮಯ್ಯ ಅವರು ತಾವು ಮಾಡದ ತಪ್ಪಿಗೆ ತಾತ್ಕಾಲಿವಾಗಿ ಶಿಕ್ಷೆ ಅನುಭವಿಸುವಂತಾಗಿದೆ.

ಈ ಮಧ್ಯೆ ಸೋಲಿಗ ರವಿ ರಾಮಯ್ಯ ಅವರು ಮೈಸೂರು ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಉದ್ಯೋಗದಲ್ಲಿದ್ದಾರೆ. ರವಿ ಪೊಲೀಸ್ ಪೇದೆಯಾಗಿದ್ದಾಗಲೇ ತಾನೂ KAS ಅಧಿಕಾರಿ ಆಗಬೇಕು ಎಂದು ಕನಸು ಕಂಡಿದ್ದು. ಮತ್ತು ಅದಕ್ಕೆ ನೀರೆರೆದವರು ಅವರ ಪ್ರಾಥಮಿಕ ಶಾಲಾ ಗುರುಗಳಾದ ಸುರೇಶ್ ಮತ್ತು ಲೆಕ್ಚರರ್ ರುದ್ರಪ್ಪ ಅವರುಗಳು.

ಅವರಿಬ್ಬರೂ ರವಿ ರಾಮಯ್ಯ ಅವರಲ್ಲಿದ್ದ ಕುಶಾಗ್ರಮತಿಯನ್ನು ಗಮನಿಸಿ KSPC ಪರೀಕ್ಷೆ ಬರೆಯುವಂತೆ ಪ್ರೇರೇಪಿಸಿದರು. ಅಷ್ಟು ಪ್ರೇರೇಪಣೆ ಸಿಕ್ಕಿದ್ದೇ ತಡ ಪುಣ್ಯಾತ್ಮ ರವಿ ರಾಮಯ್ಯ ಮೊದಲ attemptನಲ್ಲೇ KAS ಕ್ಲಿಯರ್ ಮಾಡಿಬಿಟ್ಟರು. Mains examನಲ್ಲಿ 1,800ಕ್ಕೆ 956 ಅಂಕ ಗಳಿಸಿದರೆ Interviewನಲ್ಲಿ 200ಕ್ಕೆ 150 ಗಳಿಸುವ ಮೂಲಕ ಜಯಭೇರಿಯಾದರು.

ನಾನು ವಾಸವಾಗಿದ್ದ ಕಾಡಿನಿಂದ 3 ಕಿಮೀ ದೂರದಲ್ಲಿರುವ ಬೀರನಹಳ್ಳಿಯಲ್ಲಿರುವ ಸರಕಾರಿ ಶಾಲೆಗೆ ದಿನಾ ನಡೆದುಹೋಗುತ್ತಿದ್ದೆ. ಕಾಡಿನಲ್ಲಿ ಒಬ್ನೇ ನಡೆದು ಹೋಗುತ್ತಿದ್ದಾಗ ನಾನು ಮತ್ಯಾವುದೋ ಲೋಕದಲ್ಲಿ ಸಂಚರಿಸುವವನಂತೆ ಭಾಸವಾಗುತ್ತಿತ್ತು. ಕಾಡಿನ ನೀರವ ಮೌನ ನನ್ನನ್ನು ಸದೃಢಗೊಳಿಸಿತು ಎನ್ನುತ್ತಾರೆ ರವಿ ರಾಮಯ್ಯ.

ರವಿ ಅವರ ತಂದೆ ರಾಮಯ್ಯ ಅವರು 3ನೇ ಕ್ಲಾಸ್ ಪಾಸು ಮಾಡಿದ್ದಾರೆ. ಆದರೆ ಅವರ ತಾಯಿ ಜಯಮ್ಮ ಶಾಲೆಯತ್ತ ಹೆಜ್ಜೆ ಹಾಕಿದವರೇ ಅಲ್ಲ. ಇನ್ನು ರವಿಯ ತಮ್ಮ ಎಸ್ಸೆಸ್ಸೆಲ್ಸಿ ಫೇಲ್. ಮತ್ತೊಬ್ಬ ಸೋದರ ದ್ವಿತೀಯ ಪಿಯುಸಿ ಪಾಸು. ಗುರುಗಳಾದ ಸುರೇಶ್ ಅವರ ಒತ್ತಾಸೆಯಂತೆ ರವಿ ಹುಣಸೂರಿನಲ್ಲಿ ಹೈಸ್ಕೂಲು ಪಾಸು ಮಾಡಿದರು.
(ಒನ್ಇಂಡಿಯಾದಿಂದ ಉದ್ಯೋಗ ಹುಡುಕಾಟ ಸೇವೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+