ಮೈಸೂರು: ಈ ಬಾರಿ ದಸರಾ ಗೋಲ್ಡ್ ಕಾರ್ಡ್ 7500 ರೂ
ಮೈಸೂರು, ಸೆ 27: ಈ ಬಾರಿ ದಸರಾ ಕಾರ್ಯಕ್ರಮಗಳು ಹಾಗೂ ಜಂಜೂ ಸವಾರಿ ವೀಕ್ಷಣೆಗಾಗಿ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಗೋಲ್ಡ್ ಕಾರ್ಡ್ ಬೆಲೆ 7500 ರೂ.ಗೆ ನಿಗದಿ ಯಾಗಿದೆ.
'ಈ ಬಾರಿ 1,000 Dasara gold cardಗಳನ್ನು ಮುದ್ರಿಸಲಾಗುವುದು. ಇದರ ಮುಖ ಬೆಲೆ 7500 ರೂ.ಗೆ ನಿಗದಿಯಾಗಿದೆ. ಕಳೆದ ವರ್ಷ gold card ಬೆಲೆ ತಲಾ 6,000 ರೂ.ಗೆ ನಿಗದಿಯಾಗಿತ್ತು. ಒಂದು ಗೋಲ್ಡ್ ಕಾರ್ಡ್ ಗೆ ಇಬ್ಬರು ಹಿರಿಯರು ಮತ್ತು ಒಂದು ಮಗುವಿಗೆ ಪ್ರವೇಶಾವಕಾಶವಿರುತ್ತದೆ' ಎಂದು ದಸರಾ ವಿಶೇಷಾಧಿಕಾರಿಯೂ ಆದ ಜಿಲ್ಲಾಧಿಕಾರಿ ಶಿಖಾ ಅವರು ಹೇಳಿದ್ದಾರೆ.

ದಸರಾ ವೆಬ್ ಸೈಟ್‌ನಲ್ಲಿ ಗೋಲ್ಡ್ ಕಾರ್ಡ್ ಲಭ್ಯವಾಗಲಿದ್ದು, ಆನ್ ಲೈನ್ ಮೂಲಕವೂ (ಇಲ್ಲಿ ಕ್ಲಿಕ್ಕಿಸಿ) ಗೋಲ್ಡ್ ಕಾರ್ಡ್ ಖರೀದಿಸಬಹುದಾಗಿದೆ. ವಿದೇಶಿ ಹಾಗೂ ಉದ್ಯಮಿಗಳಿಗೆ ಅನುಕೂಲವಾಗುವಂತೆ ಬಿಡುಗಡೆ ಮಾಡಿರುವ ಗೋಲ್ಡ್ ಕಾರ್ಡ್ ಖರೀದಿ ಮಾಡಿದವರಿಗೆ ಕೇವಲ ಇಬ್ಬರಿಗೆ ಮಾತ್ರ ಪ್ರವೇಶಾವಕಾಶ ಇದೆ.
ದಸರಾ ಗೋಲ್ಡ್ ಕಾರ್ಡ್ ಇಲ್ಲಿಯೂ ಲಭ್ಯ: ಜಿಲ್ಲಾಧಿಕಾರಿ ಕಚೇರಿಯಲ್ಲಿ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಸರಾ ವಿಶೇಷಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ಡಿಡಿ ಅಥವಾ 7500 ರೂ ನಗದು ನೀಡಿ ಗೋಲ್ಡ್ ಕಾರ್ಡ್ ಖರೀದಿಸಬಹುದಾಗಿದೆ.
ಜಿಲ್ಲಾಧಿಕಾರಿ ಮೈಸೂರು ಇವರ ಕಚೇರಿಯಲ್ಲಿ ಅ. 13ರಂದು ಗೋಲ್ಡ್ ಟಿಕೆಟ್ ಕೊಳ್ಳಲು ಕೊನೆ ದಿನಾಂಕ. ಚಾಮುಂಡಿಬೆಟ್ಟ, ರಂಗನತಿಟ್ಟು, ಕೆ.ಆರ್.ಎಸ್, ಪ್ರಾಣಿ ಸಂಗ್ರಹಾಲಯ ಗಳಿಗೂ ಗೋಲ್ಡ್ ಕಾರ್ಡ್ ಹೊಂದಿರುವವರಿಗೆ ಉಚಿತ ಪ್ರವೇಶವಿರುತ್ತದೆ. ಹೆಚ್ಚಿನ ಮಾಹಿತಿಗೆ ದೂ: 0821- 2423800 ಸಂಪರ್ಕಿಸಬಹುದು.












Click it and Unblock the Notifications