ನನ್ನ ಟಿಕೆಟ್ಟೇ ಇನ್ನೂ ಕನ್‌ಫರ್ಮ್ ಆಗಿಲ್ಲ: ಪರಮೇಶ್ವರ್
Recommended Video

ಹುಬ್ಬಳ್ಳಿ, ಏಪ್ರಿಲ್ 03: ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರ ಎಲೆಕ್ಷನ್ ಟಿಕೆಟ್ ಇನ್ನೂ ಖಾತ್ರ ಆಗಿಲ್ಲವಂತೆ ಹೀಗೆಂದು ಅವರೇ ಹೇಳಿದ್ದಾರೆ.
ರಾಹುಲ್ ಗಾಂಧಿ ಗಾಂಧಿ ಅವರನ್ನು ಸ್ವಾಗತಿಸಲೆಂದು ಹುಬ್ಬಳ್ಳಿಗೆ ಬಂದಿಳಿದಿದ್ದ ಪರಮೇಶ್ವರ್ ಅನ್ನು ಸುದ್ದಿಮಾಧ್ಯಮದವರು ಅಶೋಕ್ ಖೇಣಿ ಟಿಕೆಟ್ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಉತ್ತರಿಸಿದ ಅವರು 'ಇನ್ನೂ ನನ್ನ ಟಿಕೆಟ್ಟೇ ಕನ್‌ಫರ್ಮ್ ಆಗಿಲ್ಲ, ಬೇರೆಯವರ ಟಿಕೆಟ್ ಬಗ್ಗೆ ಹೇಗೆ ಹೇಳಲಿ' ಎಂದರು.
ಸಿದ್ದರಾಮಯ್ಯ ಅವರ ಕ್ಷೇತ್ರ ಬದಲಾವಣೆ ಬಗ್ಗೆ ತೂರಿ ಬಂದ ಪ್ರಶ್ನೆಗೆ ಸಿಡುಕುತ್ತಾ ಉತ್ತರಿಸಿದ ಪರಮೇಶ್ವರ್, ಇನ್ನೂ ಯಾರದ್ದೂ ಟಿಕೆಟ್ಟೇ ಖಾತ್ರಿ ಆಗಿಲ್ಲ ಈಗಲೇ ಕ್ಷೇತ್ರ ಹೇಗೆ ನಿರ್ಧಾರ ಮಾಡೋದು, ಅವೆಲ್ಲಾ ಯಾವುದೂ ಇಲ್ಲ, ಟಿಕೆಟ್ ಬಗ್ಗೆ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವುದು ಬೇಡ' ಎಂದರು.

ಕಾಂಗ್ರೆಸ್‌ನ ಸಿಎಂ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಚುನಾವಣೆಯಲ್ಲಿ ಗೆಲ್ಲುವುದಷ್ಟೆ ಈಗ ನಮ್ಮ ಮುಂದಿರುವ ಗುರಿ, ಅದರೆಡೆಗೆ ಮಾತ್ರವೇ ನಾವು ಗಮನ ವಹಿಸಿದ್ದೇವೆ, ಗೆದ್ದ ನಂತರ ಸಿಎಂ ಅಭ್ಯರ್ಥಿಯ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದರು.
'ರಾಜ್ಯದ ಚುನಾವಣೆಯಲ್ಲಿ ಅಮಿತ್ ಶಾ ಅವರ ತಂತ್ರಗಳು ಫಲಿಸುವುದಿಲ್ಲ ಎಂದ ಅವರು ಕಾಂಗ್ರೆಸ್ ಪಕ್ಷವು ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications