'ರವಿ ಅವರ 2ನೇ ಪತ್ನಿಗೂ ಸುನೀಲ್ ಗೂ ಸಂಬಂಧವಿಲ್ಲ'
ಚಿಕ್ಕಮಗಳೂರು, ಡಿಸೆಂಬರ್ 10: 'ನನ್ನ ಪತಿ ಸುನೀಲ್ ಹೆಗ್ಗರವಳ್ಳಿ ಅವರ ಜೀವಕ್ಕೆ ಅಪಾಯವಿದೆ, ಅವರಿಗೆ ಪೊಲೀಸ್ ರಕ್ಷಣೆ ನೀಡಬೇಕು, ನಮ್ಮ ಕುಟುಂಬಕ್ಕೂ ರಕ್ಷಣೆ ಬೇಕು' ಎಂದು ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಅವರ ಪತ್ನಿ ಸುಚಿತಾ ಅವರು ಮಾಧ್ಯಮ ಪ್ರತಿನಿಧಿಗಳ ಮುಂದೆ ಹೇಳಿಕೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿ ಗ್ರಾಮದಲ್ಲಿ ಸುನೀಲ್ ಅವರ ಮನೆಗೆ ಭೇಟಿ ನೀಡಿದ ಮಾಧ್ಯಮ ಪ್ರತಿನಿಧಿಗಳ ಜತೆ ಸುನಿಲ್ ಅವರ ತಂದೆ ನಂಜೇಗೌಡ ಮತ್ತು ಪತ್ನಿ ಸುಚಿತಾ ಅವರು ಮಾತನಾಡಿದರು.
ರಕ್ಷಣೆ ಕೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರುಗೆ ಮನವಿ ಸಲ್ಲಿಸುವುದಾಗಿ ಹೇಳಿದರು.

ಯಾವುದೇ ಸಂಬಂಧವಿಲ್ಲ: ನನ್ನ ಪತಿ ಸುನೀಲ್ ನಮ್ಮ ಕುಟುಂಬದ ಸದಸ್ಯರ ಜತೆ ಚೆನ್ನಾಗಿದ್ದಾರೆ. ಅವರಿಗೆ ಯಾವುದೇ ಅಕ್ರಮ ಸಂಬಂಧವಿಲ್ಲ. ರವಿ ಬೆಳಗೆರೆಯ ಅವರ 2ನೇ ಪತ್ನಿಗೂ ನನ್ನ ಗಂಡನಿಗೂ ಯಾವುದೇ ಸಂಬಂಧವಿಲ್ಲ ಎಂದು ಸುನೀಲ್ ಅವರ ಪತ್ನಿ ಸುಚಿತಾ ಸ್ಪಷ್ಟಪಡಿಸಿದ್ದಾರೆ.
ಸೋದರನಂತೆ ಕಾಣುತ್ತಿದ್ದರು: ರವಿ ಬೆಳಗೆರೆ ಅವರು ನಮ್ಮ ಮನೆಗೂ ಬಂದಿದ್ದರು. ಇಲ್ಲೇ ಅವರ ಫಾರ್ಮ್ ಹೌಸ್ ಕೂಡಾ ಇದೆ. ನನ್ನ ಗಂಡನನ್ನು ಮನೆ ಮಗನಂತೆ ಕಾಣುತ್ತಿದ್ದರು.
ಈಗ ಅವರನ್ನು ಕೊಲ್ಲಲು ಸುಪಾರಿ ಕೊಟ್ಟಿದ್ದರು ಎಂದು ಕೇಳಿ ನಿಜಕ್ಕೂ ನಮಗೆಲ್ಲರಿಗೂ ಆಘಾತವಾಗಿದೆ. ಯಾರನ್ನು ನಂಬುವುದು ಯಾರನ್ನು ಬಿಡುವುದು ತಿಳಿಯುತ್ತಿಲ್ಲ. ನಮ್ಮ ಕುಟುಂಬಕ್ಕೆ ರಕ್ಷಣೆ ಬೇಕಿದೆ ಎಂದು ಸುಚಿತಾ ತಮ್ಮ ನೋವು ತೋಡಿಕೊಂಡರು.












Click it and Unblock the Notifications