ದೇವಸ್ಥಾನಗಳಿಗೂ ಗೃಹ ಜ್ಯೋತಿ ನೀಡುವಂತೆ ಸಚಿವರ ಮನವಿ: ಯಾವ್ಯಾವ ದೇವಾಲಯಗಳಿಗೆ ಈ ಭಾಗ್ಯ..?

ಬೆಂಗಳೂರು, ಅಕ್ಟೋಬರ್‌ 26: ಬಡ ಮಧ್ಯಮ ಎಲ್ಲಾ ವರ್ಗದ ಜನರ ಬದುಕಿಗೆ ಬೆಳಕು ತಂದಿರುವ ಸರ್ಕಾರದ ಗೃಹ ಜ್ಯೋತಿ ಯೋಜನೆ ಈಗ ದೇವಸ್ಥಾನಕ್ಕೂ ಸಿಗುವುದು ಬಹುತೇಕ ಖಚಿತವಾಗಿದೆ. ರಾಜ್ಯದ ಆದಾಯ ಕಡಿಮೆ ಇರುವ ಮುಜರಾಯಿ ಇಲಾಖೆ ವ್ಯಾಪ್ತಿಯ ಸಿ ಗ್ರೇಡ್ ದೇವಸ್ಥಾನಗಳಿಗೆ ಸರ್ಕಾರದ ಗ್ಯಾರಂಟಿ ಯೋಜನೆ ಅಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ಫಲಾನುಭವಿ ಮಾಡಿ ಕೊಳ್ಳುವಂತೆ ಮುಜರಾಯಿ ಸಚಿವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸಿ ಗ್ರೇಡ್ ದೇವಸ್ಥಾನಕ್ಕೆ ಮಾತ್ರ ಯಾಕೆ ಗೃಹ ಜ್ಯೋತಿ ಲಾಭ ಪಡೆಯಬೇಕು? A ಮತ್ತು B ದೇವಸ್ಥಾನ ಗಳಿಗಿಂತ C ಗ್ರೇಡ್ ದೇವಸ್ಥಾನ ಹೇಗೆ ಭಿನ್ನ ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಮುಜರಾಯಿ ಇಲಾಖೆಯು ದೇವಾಲಯಗಳನ್ನು ವಾರ್ಷಿಕ ಆದಾಯದ ಆಧಾರದ ಮೇಲೆ ಮೂರು ವರ್ಗವಾಗಿ ವಿಂಗಡಣೆ ಮಾಡಲಾಗಿದೆ.

give-gruha-jyothi-to-temples

ವಾರ್ಷಿಕವಾಗಿ 25 ಲಕ್ಷ ರೂ. ಆದಾಯ ಹೊಂದಿರುವ ದೇವಸ್ಥಾನಗಳನ್ನು A ಗ್ರೇಡ್ ಎನ್ನುತ್ತಾರೆ. ಈ ವ್ಯಾಪ್ತಿಗೆ ರಾಜ್ಯದ ಸುಮಾರು 205 ದೇವಾಲಯಗಳು ಬರುತ್ತದೆ. ವಾರ್ಷಿಕವಾಗಿ 5 ರಿಂದ 10 ಲಕ್ಷ ರೂ ಆದಾಯ ಹೊಂದಿರುವ ದೇವಸ್ಥಾನಗಳನ್ನು ಗ್ರೇಡ್ ಬಿ ಗ್ರೇಡ್‌ ದೇವಸ್ಥಾನಗಳನ್ನು ಎನ್ನಲಾಗುತ್ತದೆ. ರಾಜ್ಯದ 139 ದೇವಸ್ಥಾನಗಳು ಈ ವ್ಯಾಪ್ತಿಗೆ ಬರುತ್ತದೆ. ವಾರ್ಷಿಕ 5 ಲಕ್ಷಕ್ಕಿಂತ ಕಡಿಮೆ ಆದಾಯವನ್ನು ಹೊಂದಿದ ದೇವಸ್ಥಾನಗಳು ಗ್ರೇಡ್ ಸಿನಲ್ಲಿ ಬರುತ್ತದೆ.

ಕೆಲವು ದೇವಾಲಯದಲ್ಲಿ 1 ರೂಪಾಯಿ ಲಕ್ಷ ಆದಾಯ ಕೂಡ ಬರುವುದಿಲ್ಲ. ಅಂತಹ ದೇವಾಲಯಗಳಿಗೆ ನೆರವಾಗುವ ನಿಟ್ಟಿನಲ್ಲಿ ಗೃಹ ಜ್ಯೋತಿ ಯೋಜನೆ C ಗ್ರೇಡ್ ದೇವಸ್ಥಾನ ವಿಸ್ತರಣೆ ಮಾಡುವ ಹಾಗೆ ಒಕ್ಕೊರಲಿನ ಒತ್ತಾಯ ಮಾಡಲಾಗಿದೆ. ಇಪ್ಪತೈದು ಸಾವಿರಕ್ಕೂ ಹೆಚ್ಚು ದೇವಸ್ಥಾನ ಈ ಗ್ರೇಡ್‌ನಲ್ಲೇ ಬರುತ್ತದೆ.

give-gruha-jyothi-to-temples

ದೇವಸ್ಥಾನಗಳ ಹೆಸರು

*ದತ್ತಾತ್ರೇಯ ದೇವಸ್ಥಾನ - ಶೇಷಾದ್ರಿಪುರಂ

*ಕೋಡಿ ಆಂಜನೇಯ ಸ್ವಾಮಿ ದೇವಸ್ಥಾನ - ಶೇಷಾದ್ರಿಪುರಂ

*ಬಸವಣ್ಣ ದೇವಸ್ಥಾನ - ಅವಿನ್ಯೂ ರಸ್ತೆ

*ಕೊಮಿಟಿ ಪೇಟೆ ವೆಂಕಟ ರಮಣ ದೇವಸ್ಥಾನ - ಅವಿನ್ಯೂ ರಸ್ತೆ

*ಮುನೇಶ್ವರ ಸ್ವಾಮಿ ದೇವಸ್ಥಾನ - ಶಾಸಕರ ಭವನ

*ರಾಮಾಜನೇಯ ಸ್ವಾಮಿ ದೇವಸ್ಥಾನ - ಕೆ.ಆರ್.ವೃತ್ತ

*ಶ್ರೀ ವೀರಭದ್ರಸ್ವಾಮಿ ದೇವಸ್ಥಾನ - ಕಗ್ಗಲಿ

*ಮಹಾಭಲೇಶ್ವರಸ್ವಾಮಿ ದೇವಸ್ಥಾನ - ಕೆ.ಆರ್.ಪುರಂ

ಶ್ರೀ ಕಂಬದ ನರಸಿಂಹಸ್ವಾಮಿ ದೇವಸ್ಥಾನ - ಕಮ್ಮಸಂದ್ರ ಸೇರಿ ಇನ್ನು ಮುಂತಾದ ದೆವಸ್ಥಾನಗಳು C ಗ್ರೇಡ್ ವ್ಯಾಪ್ತಿಗೆ ಬರುತ್ತದೆ.

ಇಂತಹ ದೇವಾಲಯಗಳಿಗೆ ಆದಾಯ ಅತೀ ಕಡಿಮೆ ಇರುವ ಹಿನ್ನಲೆಯಲ್ಲಿ ಕರೆಂಟ್ ಬಿಲ್ ಕಟ್ಟುವುದು ಹೊರೆಯಾಗುತ್ತದೆ. ಇದೇ ಕಾರಣಕ್ಕೆ ಅರ್ಚಕರಿಗೆ ನೆರವಾಗುವ ನಿಟ್ಟಿನಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ C ಗ್ರೇಡ್ ದೇವಾಲಯಕ್ಕೆ ಗೃಹ ಜ್ಯೋತಿ ವಿಸ್ತರಣೆ ಮಾಡುವ ಯೋಜನೆ ಮಾಡಲಾಗಿದೆ.

ರಾಜ್ಯದ ಕೋಟಿ ಜನರಿಗೆ ಗೃಹ ಜ್ಯೋತಿ ಯೋಜನೆ ಕೊಟ್ಟಿರುವಾಗ 35 ಸಾವಿರ ದೇವಸ್ಥಾನ ಕೂಡ ಹೋರೆಯಾಗದಿರಲಿ ಎನ್ನುವುದು ಹಲವರ ಅಭಿಪ್ರಾಯ. ಹೀಗಾಗಿ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟ ತಕ್ಷಣ ಗೃಹ ಜ್ಯೋತಿ ದೇವಸ್ಥಾನಗಳಿಗೂ ವಿಸ್ತರಣೆ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+