ದೇವೇಗೌಡರ ಕುಟುಂಬ ವಿರುದ್ಧ ಮುಸ್ಲಿಮರು ಗರಂ
ಹಾಸನ, ಡಿ.26: ಜೆಡಿಎಸ್ ಮುಖಂಡ ದೇವೇಗೌಡ ಕುಟುಂಬ ಮುಸ್ಲಿಮರನ್ನು ನಿರ್ಲಕ್ಷಿಸುತ್ತಿದೆ ಎಂದು ಇಲ್ಲಿನ ಮುಸ್ಲಿಮ್ ಹಿತರಕ್ಷಣಾ ವೇದಿಕೆ ಆರೋಪಿಸಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಜೆಡಿಎಸ್ ಸ್ವಯಂ ಘೋಷಿತ ಅಲ್ಪಸಂಖ್ಯಾತ ಬುದ್ಧಿ ಜೀವಿಗಳ ಸಭೆಯಲ್ಲಿ ಕಾಂಗ್ರೆಸ್ ಅಲ್ಪ ಸಂಖ್ಯಾತರ ವಿರೋಧಿ, ಈ ಪಕ್ಷದಿಂದ ಮುಸ್ಲಿಮರಿಗೆ ದ್ರೋಹವಾಗುತ್ತಿದ್ದು, ಇವರನ್ನು ಕೇವಲ ಮತ ಬ್ಯಾಂಕ್ ಗಾಗಿ ಮಾತ್ರ ಬಳಸಿಕೊಳ್ಳಲಾಗುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರ ಸ್ವಾಮಿ ಅವರು ವ್ಯಂಗ್ಯವಾಗಿ ಮಾತನಾಡಿದ್ದನ್ನು ವೇದಿಕೆ ಖಂಡಿಸಿದೆ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಜೆಡಿಎಸ್ ಪಕ್ಷ ಅಧಿಕಾರದಲ್ಲಿದ್ದಾಗ ಮುಸ್ಲಿಮರು ಬಹು ಸಂಖ್ಯಾತರಾಗಿರುವ ನಗರದ ಹಲವು ಬಡಾವಣೆಗಳಿಗೆ ಕನಿಷ್ಠಪಕ್ಷ ಮೂಲ ಭೂತ ಸೌಲಭ್ಯಗಳನ್ನೂ ಕಲ್ಪಿಸಿಲ್ಲ ಎಂದು ಮುಸ್ಲಿಮ್ ಹಿತರಕ್ಷಣಾ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
ದೇವೇಗೌಡರು ಹಾಗೂ ಅವರ ಮಕ್ಕಳಲ್ಲಿ ಅಧಿಕಾರ ವಿದ್ದಾಗಲೂ ಮುಸ್ಲಿಮ್ ಸಮಾಜಕ್ಕೆ ಯಾವ ಕೊಡುಗೆ ನೀಡಿದ್ದಾರೆ. ಈಗ ಜನಾಂಗ ಜಾಗ್ರತೆಗೊಂಡಿದ್ದು, ಮುಂದಾದರೂ ನಮ್ಮ ಜನಾಂಗಕ್ಕೆ ಮೋಸ ಮಾಡುವುದನ್ನು ನಿಲ್ಲಿಸಬೇಕು ಎಂದು ವೇದಿಕೆ ಹೇಳಿದೆ.

ದೇವೇಗೌಡರು ದಡ್ಡರು ಮತ್ತು ಅನಕ್ಷರಸ್ತರಿಗೆ ಅಧಿಕಾರ ನೀಡಿದ್ದಾರೆ. ಅವರು ಮನಸ್ಸು ಮಾಡಿದ್ದರೆ ಒಬ್ಬ ಮುಸ್ಲಿಮ್ ಮುಖಂಡನನ್ನು ರಾಜ್ಯ ಮಟ್ಟದಲ್ಲಿ ಬೆಳೆಸಬಹುದಿತ್ತು ಎಂದು ವೇದಿಕೆ ಸದಸ್ಯ ಮುಬ್ಬ ಶೀರ್ ಅಹ್ಮದ್ ಕಿವಿಮಾತು ಹೇಳಿದ್ದಾರೆ.[ಮುಸ್ಲಿಮರಿಗೆ ದೇವೇಗೌಡರು ನೀಡಿದ ಸಲಹೆ ಏನು?]
ಹಾಸನದಲ್ಲಿ ಮುಸ್ಲಿಮರ ಮೇಲೆ ಹಲ್ಲೆ ನಡೆದಾಗ, ಸುಳ್ಳು ಕೇಸು ಹಾಕಿದಾಗ, ಸಮಾಜ ಸೇವಕರನ್ನು ಗೂಂಡಾ ಪಟ್ಟಿಗೆ ಸೇರಿಸಿ ಗಡಿಪಾರು ಮಾಡುವಂತಹ ನೀಚ ಕೃತ್ಯಕ್ಕೆ ಅಧಿಕಾರಿಗಳು ಕೈ ಹಾಕಿದಾಗ ದೇವೇಗೌಡರು ಮೌನಕ್ಕೆ ಶರಣಾಗಿದ್ದು ಏಕೆ ಎಂದು ಪ್ರಶ್ನಿಸಿದ ವೇದಿಕೆ, ಸಚಾರ್, ರಂಗನಾಥ್ ಮಿಶ್ರ , ಮಂಡಲ್ ವರದಿ ಮತ್ತು ಟಿಪ್ಪುವಿಶ್ವ ವಿದ್ಯಾನಿಲಯದ ಬಗ್ಗೆ ದೇವೇಗೌಡರ ನಿಲುವೇನು ಎಂಬುವುದನ್ನು ಸ್ವಷ್ಟಪಡಿಸ ಬೇಕು ಎಂದು ಗ್ರಹಿಸಿದರು.












Click it and Unblock the Notifications