Muslim Reservation: ಚುನಾವಣೆಯಲ್ಲಿ ಮುಸ್ಲಿಂ ಮೀಸಲಾತಿ, ಹಿಜಾಬ್‌ ಬೆಂಕಿ ಬಿಜೆಪಿಗೆ ಹಿನ್ನಡೆಯಾಗಲಿದೆಯೇ?

ಮಂಗಳೂರು, ಏಪ್ರಿಲ್‌ 26: ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವಾರು ವಿಷಯಗಳು ಮುನ್ನೆಲೆಗೆ ಬರುತ್ತಿವೆ. ಕರಾವಳಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಿರುವ ಹಿಜಾಬ್‌ ವಿವಾದ, ಈಗ ಮೀಸಲಾತಿ ರದ್ದತಿ ಕೂಡ ಚುನಾವಣಾ ಸಮಯವಾದ್ದರಿಂದ ಮುಸ್ಲಿಂ ಸಮುದಾಯವು ಬಿಜೆಪಿಗೆ ಮುಳುವಾಗಲಿದೆಯೇ ಎಂದು ನೋಡುವುದು ಅಗತ್ಯ.

ಕಳೆದ ವರ್ಷ ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತರಗತಿಯೊಳಗೆ ನಿಷೇಧ ಹೇರುವ ಮೂಲಕ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಮುಸ್ಲಿಂ ಹುಡುಗಿಯರು ಶಿಕ್ಷಣ ಸಂಸ್ಥೆಗಳಲ್ಲಿ 'ಹಿಜಾಬ್' ಧರಿಸಿದ ವಿವಾದಾತ್ಮಕ ವಿಷಯವು ಮೇ 10ರ ವಿಧಾನಸಭಾ ಚುನಾವಣೆಯ ಗಂಭೀರ ಪ್ರಚಾರದ ವಿಷಯವಾಗಿ ಕಾಣಿಸುತ್ತಿಲ್ಲ.

Muslim reservation, hijab row will be a setback for BJP in elections?

ವಿವಾದ ಭುಗಿಲೆದ್ದ ನಂತರ ರಾಜ್ಯದಲ್ಲಿನ ಬಿಜೆಪಿ ಸರ್ಕಾರವು ಕಳೆದ ವರ್ಷ ಆದೇಶದಲ್ಲಿ ಕ್ಯಾಂಪಸ್‌ಗಳಲ್ಲಿ ಹಿಜಾಬ್‌ಗಳನ್ನು ಧರಿಸುವುದನ್ನು ನಿಷೇಧಿಸಿತ್ತು. ಇದಕ್ಕೆ ಸಮಾನತೆ, ಸಮಗ್ರತೆ ಮತ್ತು ಸಾರ್ವಜನಿಕ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ಬಟ್ಟೆಗಳನ್ನು ಅನುಮತಿಸಲಾಗುವುದಿಲ್ಲ ಎಂದು ಹೇಳಿತ್ತು. ಶಾಲಾ ಮತ್ತು ಪಿಯು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ನಿಗದಿಪಡಿಸಿದ ಸಮವಸ್ತ್ರವನ್ನು ಮಾತ್ರ ಧರಿಸುವಂತೆ ಸೂಚಿಸಲಾಗಿದೆ. ರಾಜ್ಯದಲ್ಲಿ ಹಿಜಾಬ್ ಧರಿಸಿದ ಹಲವಾರು ಹುಡುಗಿಯರು ಹಿಜಾಬ್ ಧರಿಸಿ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶವನ್ನು ನಿರಾಕರಿಸಿದ ನಂತರ ಈ ಆದೇಶವನ್ನು ಜಾರಿಗೊಳಿಸಲಾಗಿತ್ತು.

ಈ ನಡೆ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು. ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ನ್ಯಾಯಾಲಯದ ಮೊರೆ ಹೋದ ನಂತರ ಕರ್ನಾಟಕ ಹೈಕೋರ್ಟ್ ಸರ್ಕಾರದ ಆದೇಶವನ್ನು ಎತ್ತಿಹಿಡಿದಿದೆ. ನಂತರ ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು, ಅದು ಅಕ್ಟೋಬರ್‌ನಲ್ಲಿ ವಿಭಜನೆಯ ತೀರ್ಪನ್ನು ನೀಡಿತು.

Muslim reservation, hijab row will be a setback for BJP in elections?

ಈಗ ಮುಸ್ಲಿಮರ ಕೆಂಗಣ್ಣಿಗೆ ಗುರಿಯಾಗುವಂತೆ ಅವರಿಗೆ ನೀಡಿದ್ದ ಶೇಕಡ 4ರಷ್ಟು ಮೀಸಲಾತಿಯನ್ನು ರದ್ದು ಮಾಡಿರುವ ಬಿಜೆಪಿ ಸರ್ಕಾರ ಅದನ್ನು ಒಕ್ಕಲಿಗರಿಗೆ ಹಾಗೂ ಲಿಂಗಾಯತರಿಗೆ ನೀಡಿದೆ. ಅಲ್ಲದೆ ಮುಸ್ಲಿಮರನ್ನು ಆರ್ಥಿಕ ಹಿಂದುಳಿದವರ ಪಟ್ಟಿಗೆ ಸೇರಿಸಿ ಆದೇಶ ಹೊರಡಿಸಿತ್ತು. ಆದರೆ ಇದಕ್ಕೆ ಈಗ ತಡೆ ನೀಡಲಾಗಿದೆ. ಇಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಬಳಿ ಧರ್ಮದ ಆಧಾರದ ಮೇಲೆ ನೀಡಿರುವ ಮೀಸಲಾತಿ ಅಸಂವಿಧಾನಿಕ ಎಂದು ಹೇಳಿದೆ.

ಕರ್ನಾಟಕದಲ್ಲಿ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಯಕ ಮತದಾರರಾಗಿರುವ ಮುಸ್ಲಿಮರು ಸಹಜವಾಗಿ ಇದರಿಂದ ಪಕ್ಷುಬ್ಧಗೊಂಡಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಬಿಜೆಪಿ ನಮಗೆ ಮುಸ್ಲಿಂ ಸಮುದಾಯದವರ ಮತಗಳು ಬೇಡ ಎಂದು ಬಹಿರಂಗವಾಗಿ ಹೇಳುತ್ತಿದೆ. ಆದರೆ ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ ಮತ್ತು ರಾಜಕೀಯ ಪಕ್ಷಗಳು ಮುಸ್ಲಿಂ ಮತದಾರರನ್ನು ಓಲೈಸಲು ಯಾವುದೇ ಕಲ್ಲನ್ನು ಬೀಸುತ್ತಿಲ್ಲ.

ಲಿಂಗಾಯತರು, ಕುರುಬರು ಮತ್ತು ಒಕ್ಕಲಿಗರು ಎಂಬ ಮೂರು ಪ್ರಮುಖ ಸಮುದಾಯಗಳ ಬೆಂಬಲವನ್ನು ಪಡೆಯಲು ರಾಜಕೀಯ ಪಕ್ಷಗಳು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದರೂ, ಈ ಚುನಾವಣಾ ಕದನದಲ್ಲಿ ಮತಗಳು ಪ್ರಮುಖವಾಗಬಹುದಾದ ಮುಸ್ಲಿಂ ಮತದಾರರ ಪ್ರಾಮುಖ್ಯತೆಯನ್ನು ನಿರ್ಲಕ್ಷಿಸುವುದು ಕಷ್ಟವಿದೆ. ಆದರೂ ಕಾಂಗ್ರೆಸ್‌, ಬಿಜೆಪಿ ಎರಡೂ ಮುಸ್ಲಿಂ ಮತದಾರರ ಬಗ್ಗೆ ಮಾತನಾಡುತ್ತಿಲ್ಲ.

ಕರ್ನಾಟಕದಲ್ಲಿ ಮುಸ್ಲಿಮರು 13% ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದಾರೆ. ರಾಜ್ಯದ 224 ಕ್ಷೇತ್ರಗಳ ಪೈಕಿ 40ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸಮುದಾಯ ನಿರ್ಣಯಕವಾಗಿದ್ದಾರೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ 17 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಆದರೆ ಬಿಜೆಪಿ 2018ರಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲಿಲ್ಲ. ಈ ಬಾರಿಯೂ ಒಬ್ಬರಿಗೂ ಕೊಟ್ಟಿಲ್ಲ.

ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಮುಸ್ಲಿಮರು ಕಂಡುಬಂದರೆ, ಉತ್ತರ ಕರ್ನಾಟಕದಲ್ಲಿ ವಿಶೇಷವಾಗಿ ಗುಲ್ಬರ್ಗ, ಬೀದರ್, ಬಿಜಾಪುರ, ರಾಯಚೂರು ಮತ್ತು ಧಾರವಾಡದಲ್ಲಿ ಮುಸ್ಲಿಮರು ಪ್ರಬಲವಾದ ಅಸ್ತಿತ್ವವನ್ನು ಹೊಂದಿದ್ದಾರೆ. ಅಲ್ಲದೆ ಕಲಬುರಗಿ ಉತ್ತರ, ಪುಲಕೇಶಿನಗರ, ಶಿವಾಜಿನಗರ, ಜಯನಗರ ಮತ್ತು ಪದ್ಮನಾಭನಗರ ತುಮಕೂರು, ಚಾಮರಾಜಪೇಟೆ ರಾಜ್ಯದ ಇತರ ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರಗಳಾಗಿವೆ.

ಹೀಗಿದ್ದು ಆಡಳಿತರೂಢ ಬಿಜೆಪಿ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದ್ದರೂ ಮುಸ್ಲಿಮರನ್ನು ಓಲೈಸುವ ಕೆಲಸ ಮಾಡುತ್ತಿಲ್ಲ. ಇದಕ್ಕೆ ಮುಸ್ಲಿಮರನ್ನು ಎರಡನೇ ದರ್ಜೆ ನಾಗರಿಕರನ್ನಾಗಿಸುವ ಆರ್‌ಎಸ್ಎಸ್‌ನ ಅಜೆಂಡಾವೂ ಕಾರವಾಗಿರಬಹುದು, ಆದರೂ ಇಲ್ಲಿ ಬಿಜೆಪಿ ಮುಸ್ಲಿ ಮತಗಳು ಸಾಕಷ್ಟು ಹೊಡೆತ ನೀಡುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ.

ಕಾರಣ ಕಾಂಗ್ರೆಸ್‌ ಹಾಗೂ ಜೆಡಿಎಸ್ ಹಾಗೂ ಎಸ್‌ಡಿಪಿಐ ಈ ಮೂವರು ಪಕ್ಷಗಳ ನಡುವೆ ಮುಸ್ಲಿಂ ಮತಗಳು ವಿಂಗಡಣೆಯಾಗುವ ಸಾಧ್ಯತೆ ಇದೆ. ಹೀಗಾಗಿ ಬಿಜೆಪಿ ಈ ಬಾರಿ ಮುಸ್ಲಿಂ ಮತಗಳ ಮೇಲೆ ತಲೆಕಡಿಸಿಕೊಂಡಿಲ್ಲ. ಮುಸ್ಲಿಮರು ಈಗಾಗಲೇ ಬಿಜೆಪಿ ವಿರುದ್ಧ ನಿಂತಿರುವುದು ಪಕ್ಕ. ಏನೇ ಆಗಲಿ, ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯ ಒಂದೇ ಪಕ್ಷವನ್ನು ಬೆಂಬಲಿಸುತ್ತದೆಯೇ ಅಥವಾ ಅದರ ಮತಗಳು ವಿಭಜನೆಯಾಗುತ್ತದೆಯೇ, ಮತ ಹಂಚಿಕೆಯನ್ನು ವಿಭಜಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+