ಸಮುದಾಯಕ್ಕೆ ನಲವತ್ತು, ವಿವಿಧ ಸಂಗೀತದ ಗಮ್ಮತ್ತು
ಬೆಂಗಳೂರು. ಮೇ. 1: ರಾಜ್ಯದ ಪ್ರಗತಿಪರ ಸಾಂಸ್ಕೃತಿಕ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ 'ಸಮುದಾಯ'ಕ್ಕೆ 40 ವರ್ಷ ತುಂಬಿರುವ ಹಿನ್ನೆಲೆಯಲ್ಲಿ 3 ದಿನಗಳ ಕಾಲ ವಿವಿಧ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
40ರ ಈ ಸಂದರ್ಭದಲ್ಲಿ ಕಲೆಯ ವಿಭಿನ್ನ ಪ್ರಕಾರಗಳಿಗೆ ಸಂಬಂಧಿಸಿದಂತೆ ಇಡೀ ವರ್ಷ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸಾಲಿನಲ್ಲಿ ಸ್ವರ ಸಾಮರಸ್ಯ-ರಾಷ್ಟ್ರೀಯ ಸಂಗೀತೋತ್ಸವ ಮೊದಲ ಕಾರ್ಯಕ್ರಮ ಇದಾಗಿದೆ. ಮೇ. 2 ರಿಂದ 4 ರವೆಗೆ ವಿವಿಧ ಕಾರ್ಯಕ್ರಮಗಳು ಚಿತ್ರಕಲಾ ಪರಿಷತ್ ನಲ್ಲಿ ನಡೆಯಲಿವೆ. ಸಚಿವೆ ಉಮಾಶ್ರೀ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.[ಪಂಡಿತ್ ಪ್ರವೀಣ್ ಗೋಡ್ಖಿಂಡಿಗೆ ಪಿತೃವಿಯೋಗ]

ಇದೊಂದು ವಿಭಿನ್ನ ಬಗೆಯ ವಿಶೇಷ ಸಂಗೀತೋತ್ಸವ. ಶಾಸ್ತ್ರೀಯ ಸಂಗೀತದಲ್ಲಿ ಪ್ರಯೋಗಗಳ ಮೂಲಕ ಯುವಜನರನ್ನು ಸಂಘಟಿಸಿದವರು, ಸೂಫಿ ಮತ್ತು ತತ್ತ್ವ ಪದಗಳ ಮೂಲಕ ಸಂಘರ್ಷ ಮತ್ತು ಸಾಮರಸ್ಯದ ನೆಲೆಗಳನ್ನು ಅರಸಿದವರು, ಪ್ರತಿಭಟನೆಯ ಗೀತೆಗಳ ಮೂಲಕ ವರ್ಣ ಮತ್ತು ವರ್ಗ ಸಂಘರ್ಷವನ್ನು ರೂಪಕವಾಗಿಸಿದವರು, ಫ್ಯೂಜನ್ ಮೂಲಕ ಪೂರ್ವ-ಪಶ್ಚಿಮಗಳ ಗೋಡೆ ಒಡೆದು ಮನುಕುಲವನ್ನು ಒಂದಾಗಿಸಲು ಯತ್ನಿಸಿದವರು- ಹೀಗೆ ಭಿನ್ನ ನೆಲೆಗಳ ಮಹಾನ್ ಸಂಗೀತಗಾರರು ಸ್ವರ ಸಾಮರಸ್ಯದಲ್ಲಿ ಹಾಡಲಿದ್ದಾರೆ. ಅಲ್ಲದೇ ಸಂವಾದ ಕಾರ್ಯಕ್ರಮವೂ ನಡೆಯಲಿದೆ.[ಅಮೆರಿಕನ್ನಡಿಗರನ್ನು ರಂಜಿಸಿದ 'ದೇಸಿ ಬೀಟ್ಸ್']
ಭಾಗವಹಿಸುವ ಕಲಾವಿದರು
* ಎಂಡಿ ಪಲ್ಲವಿ
* ಸುಮಂಗಲಾ ದಾಮೋದರನ್
* ಪ್ರೇಮಲತಾ ದಿವಾಕರ್
* ರಾಮಲಿಂಗಯ್ಯ ಗೌಡಗಾಂವ್
* ಸುಮತಿ
* ಉಡುಪಿಯ ನಿನಾದ ಕಲಾವಿದರು.












Click it and Unblock the Notifications