Munirathna Naidu: ಮುನಿರತ್ನಂ ನಾಯ್ಡು ಆರ್. ಅಶೋಕ್ ಮೇಲೆ ‘ಏಡ್ಸ್ ರಕ್ತ’ ಪ್ರಯೋಗ ಮಾಡಲು ಸ್ಕೆಚ್ ಹಾಕಿದ್ದೇಕೆ?
ಮುನಿರತ್ನಂ ನಾಯ್ಡು ಅಲಿಯಾಸ್ ಕುರುಕ್ಷೇತ್ರ ಮುನಿರತ್ನ ಅವರು ಇದೀಗ ಜೈಲು ಹಕ್ಕಿ ಆಗಿ ಪರದಾಡುತ್ತಿದ್ದಾರೆ. ಮುನಿರತ್ನಂ ನಾಯ್ಡು ವಿರುದ್ಧ ಈಗ ಒಂದಾದ ನಂತರ ಒಂದು ಕೇಸ್ ಬೀಳುತ್ತಿದ್ದು, ಬಿಜೆಪಿ ಶಾಸಕ ಭಯಪಟ್ಟಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ ಮುನಿರತ್ನಂ ನಾಯ್ಡು ವಿರುದ್ಧ ಈಗ 'ಏಡ್ಸ್ ರಕ್ತ' ಆರೋಪ ಕೇಳಿಬಂದಿದೆ. ಹಾಗಾದರೆ ಮುನಿರತ್ನಂ ನಾಯ್ಡು ಆರ್. ಅಶೋಕ್ ಮೇಲೆ 'ಏಡ್ಸ್ ರಕ್ತ' ಪ್ರಯೋಗ ಮಾಡೋಕೆ ಸ್ಕೆಚ್ ಹಾಕಿದ್ದೇಕೆ? ತಮ್ಮದೇ ಪಕ್ಷದ ನಾಯಕನ ವಿರುದ್ಧವು ಮುನಿರತ್ನಂ ನಾಯ್ಡು ಅಲಿಯಾಸ್ ಕುರುಕ್ಷೇತ್ರ ಮುನಿರತ್ನಗೆ ಯಾಕಿಷ್ಟು ಕೋಪ ಇತ್ತು? ಬನ್ನಿ ತಿಳಿಯೋಣ.
ಮುನಿರತ್ನಂ ನಾಯ್ಡು ವಿರುದ್ಧ ಈಗಾಗಲೇ ಜಾತಿ ನಿಂದನೆ ಕೇಸ್, ಲಂಚ ಪ್ರಕರಣ ದಾಖಲು ಆಗಿ ಸಂಚಲನ ಸೃಷ್ಟಿ ಆಗಿತ್ತು. ಇದರ ಜೊತೆಗೆ ರೇಪ್ ಕೇಸ್ ಕೂಡ ದಾಖಲು ಮಾಡಿದ್ದು, 'ಏಡ್ಸ್ ರಕ್ತ' ಬಳಸಿ ಎದುರಾಳಿಗಳ ಮೇಲೆ ದಾಳಿ ಮಾಡಿದ ಆರೋಪ ಕೇಳಿಬಂದಿತ್ತು. ಹೀಗೆ ಮುನಿರತ್ನಂ ನಾಯ್ಡು ವಿರುದ್ಧದ ಏಡ್ಸ್ ರಕ್ತದ ಆರೋಪ ಕೇಳಿಬಂದ ನಂತರ ಸಂಚಲನವೇ ಸೃಷ್ಟಿ ಆಗಿದೆ. ಅದರಲ್ಲೂ ತಮ್ಮದೇ ಪಕ್ಷ ಅಂದ್ರೆ ಬಿಜೆಪಿ ಪಕ್ಷದ ನಾಯಕರ ವಿರುದ್ಧ ಕೂಡ ಇದೇ ರೀತಿಯಾಗಿ ಮುನಿರತ್ನಂ ನಾಯ್ಡು 'ಏಡ್ಸ್ ರಕ್ತ' ಬಳಸಲು ಮುಂದಾಗಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಹಾಗಾದ್ರೆ, ಮುನಿರತ್ನಂ ನಾಯ್ಡು ಆರ್. ಅಶೋಕ್ ಮೇಲೆ 'ಏಡ್ಸ್ ರಕ್ತ' ಪ್ರಯೋಗ ಮಾಡಲು ಸ್ಕೆಚ್ ಹಾಕಿದ್ದೇಕೆ? ಮುಂದೆ ಓದಿ.

ಮುನಿರತ್ನಂ ನಾಯ್ಡು VS ಆರ್. ಅಶೋಕ್?
ಕರ್ನಾಟಕದ ರಾಜಕೀಯದಲ್ಲಿ ಇದೀಗ ಬಿರುಗಾಳಿ ಎದ್ದಿದೆ, ಅದರಲ್ಲೂ ಮುನಿರತ್ನಂ ನಾಯ್ಡು ವಿರುದ್ಧದ ಹನಿಟ್ರ್ಯಾಪ್ ಆರೋಪ ಸಂಚಲನ ಸೃಷ್ಟಿ ಮಾಡುತ್ತಿದೆ. ಇದರ ಜೊತೆಗೆ ಮುನಿರತ್ನಂ ನಾಯ್ಡು ತಮ್ಮದೇ ಪಕ್ಷದ ಅಂದ್ರೆ ಬಿಜೆಪಿ ಪಕ್ಷದ ನಾಯಕರನ್ನ ಕೂಡ ಟಾರ್ಗೆಟ್ ಮಾಡಿದ್ರು ಎಂಬ ಆರೋಪ ಕೇಳಿಬಂದಿದೆ. ಹೀಗೆ ಬಿಜೆಪಿ ಪಕ್ಷದಲ್ಲಿ, ಮುನಿರತ್ನಂ ನಾಯ್ಡು ಟಾರ್ಗೆಟ್ ಮಾಡಿದ್ದ ನಾಯಕರನ್ನ 'ಏಡ್ಸ್ ರಕ್ತ' ಬಳಸಿ ಎಚ್‌ಐವಿ ಹಬ್ಬಿಸಲು ಪ್ರಯತ್ನಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಹಾಗಾದ್ರೆ ಮುನಿರತ್ನಂ ನಾಯ್ಡುಗೆ ಇದೇ ಆರ್. ಅಶೋಕ್ ವಿರುದ್ಧ ಯಾವ ಕಾರಣಕ್ಕೆ ಇಂತಹ ಕೋಪ ಇತ್ತು? ಮುಂದೆ ಓದಿ.
ಆರ್. ಅಶೋಕ್ ಜಸ್ಟ್ ಮಿಸ್?
ಮುನಿರತ್ನಂ ನಾಯ್ಡು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರ್ಪಡೆ ಆದ ನಂತರ ಹಲವು ನಾಯಕರು ಅವರಿಗೆ ಅಡ್ಡಿ ಆಗಿದ್ದರಂತೆ. ಅದರಲ್ಲೂ ಮುನಿರತ್ನಂ ನಾಯ್ಡು ಸಚಿವ ಸ್ಥಾನ ಪಡೆಯೋಕೆ ಆರ್. ಅಶೋಕ್ ಸೇರಿದಂತೆ ಹಲವರು ಅಡ್ಡಿ ಆಗಿದ್ದರಂತೆ. ಅದರಲ್ಲೂ ಆರ್. ಅಶೋಕ್‌ಗೆ ಇದೇ ಮುನಿರತ್ನಂ ನಾಯ್ಡುಗೆ ಸಚಿವ ಸ್ಥಾನ ಕೊಡಿಸಲು ಇಷ್ಟ ಇರಲಿಲ್ಲ ಎಂಬ ಆರೋಪವು ಇದೆ. ಹೀಗಾಗಿಯೇ, ಆರ್. ಅಶೋಕ್ ಅವರಿಗೆ ಎಚ್‌ಐವಿ ರಕ್ತದ ಇಂಜಕ್ಷನ್ ಚುಚ್ಚಿ ಏಡ್ಸ್ ರೋಗ ಬರಿಸಲು ಮುನಿರತ್ನಂ ನಾಯ್ಡು ಕುತಂತ್ರ ಮಾಡಿದ್ದರು ಎಂದು ಇದೀಗ ಮುನಿರತ್ನಂ ನಾಯ್ಡು ಸಹಚರರು ಆರೋಪ ಮಾಡಿದ್ದಾರೆ. ಹೀಗಾಗಿ ಈ ಬಗ್ಗೆ ತನಿಖೆಗೆ ಮುಂದಾಗಿದ್ದಾರೆ ಪೊಲೀಸರು.












Click it and Unblock the Notifications