ಬೆಂಗಳೂರಿನ ನಟೋರಿಯಸ್ ರೌಡಿ ಕೊರಂಗು ಕೃಷ್ಣ ಸಹೋದರ ಶಾಸಕ ಮುನಿರತ್ನಂ ನಾಯ್ಡು ಆಂಧ್ರ ಟು ಬೆಂಗಳೂರು ಜರ್ನಿ!
ದಲಿತರು & ಒಕ್ಕಲಿಗರನ್ನ ಬೈದು, ಒಕ್ಕಲಿಗರ ಮನೆಯ ಹೆಣ್ಣು ಮಕ್ಕಳನ್ನು ಮಂಚಕ್ಕೆ ಕಳಿಸು ಎಂದು ಹೇಳಿದ ಆರೋಪ ಹೊತ್ತಿರುವ ಶಾಸಕ ಮುನಿರತ್ನ ನಾಯ್ಡು ನಿಜವಾದ ಹೆಸರು ಏನು ಗೊತ್ತೆ? ಮುನಿರತ್ನಂ ನಾಯ್ಡು ಅಂತಾ. ಇಂತಿಪ್ಪ ಮಾನ್ಯ ಶಾಸಕ ಮುನಿರತ್ನ ನಾಯ್ಡುಗೆ ಒಬ್ಬ ನಟೋರಿಯಸ್ ತಮ್ಮ ಕೂಡ ಇದ್ದ, ಆತನ ಹೆಸರು ನಿಮಗೆಲ್ಲಾ ಚನ್ನಾಗಿಯೇ ಗೊತ್ತು. ಇಡೀ ಬೆಂಗಳೂರಿನ ಮೂಲೆಗಳನ್ನ ನಡುಗಿಸಿದ್ದ ಕೊರಂಗು ಕೃಷ್ಣ ಇದೇ ಮುನಿರತ್ನಂ ನಾಯ್ಡು ಅವರ ರಕ್ತ ಹಂಚಿಕೊಂಡು ಹುಟ್ಟಿದ ಸ್ವಂತ ಸಹೋದರ. ಇಂತಿಪ್ಪ ಮುನಿರತ್ನಂ ನಾಯ್ಡು ಇತಿಹಾಸ ಬಿಚ್ಚಿಟ್ಟಿದ್ದಾರೆ ವೇಲು ನಾಯ್ಕರ್!
ಮೂಲತಃ ಆಂಧ್ರ ಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯ ಮುನಿರತ್ನಂ ನಾಯ್ಡು ಕುಟುಂಬ ಈ ನಮ್ಮ ಬೆಂಗಳೂರಿಗೆ ಹಲವು ವರ್ಷಗಳ ಹಿಂದೆ ವಲಸೆ ಬಂದಿತ್ತು. ಹೀಗೆ ವಲಸೆ ಬಂದವರಿಗೆ ಬೆಂಗಳೂರು ನೆಲೆ ಕೊಟ್ಟಿತ್ತು. ವಯಾಲಿಕಾವಲ್ ಪ್ರದೇಶದಲ್ಲಿ ಇಡ್ಲಿ ಮಾರಿಕೊಂಡು ತಮ್ಮ ಜೀವನ ಆರಂಭಿಸಿದ್ದ ಮುನಿರತ್ನಂ ನಾಯ್ಡು ಕುಟುಂಬ, ಮುಂದೆ ಬೆಂಗಳೂರಿನಲ್ಲೇ ದೊಡ್ಡ ಹೆಸರು ಮಾಡಿತ್ತು. ಮುನಿರತ್ನಂ ನಾಯ್ಡು ಕುಟುಂಬ ಇಡ್ಲಿ ಮಾರಿಕೊಂಡು ಹೊಟ್ಟೆಪಾಡು ನೋಡಿಕೊಳ್ಳುತ್ತಿದ್ದ ವಿಚಾರನ, ಸ್ವತಃ ಮುನಿರತ್ನಂ ನಾಯ್ಡು ಆಪ್ತನಾಗಿದ್ದ ವೇಲು ನಾಯ್ಕರ್ ತಿಳಿಸಿದ್ದಾರೆ. ಹಾಗಾದ್ರೆ ಇಡ್ಲಿ ಮಾರುತ್ತಿದ್ದ ಮುನಿರತ್ನಂ ನಾಯ್ಡು ಕುಟುಂಬ ಇಂದು ಸಾವಿರ ಸಾವಿರ ಕೋಟಿ ರೂಪಾಯಿ ಆಸ್ತಿ ಮಾಡಿದೆ ಎಂಬ ಆರೋಪ ನಿಜವಾ? ಬನ್ನಿ ತಿಳಿಯೋಣ.

ಬೆಂಗಳೂರಲ್ಲಿ ಮುನಿರತ್ನಂ ನಾಯ್ಡು ಹವಾ
ಮುನಿರತ್ನಂ ನಾಯ್ಡು ಮೊದಲಿನಿಂದ ಕೂಡ ತಮ್ಮ ಕೆಟ್ಟ ಕೆಟ್ಟ ಭಾಷೆಗೆ ಫೇಮಸ್, ಹೀಗೆ ಅವರ ಮನೆ ಮುಂದೆ ಒಕ್ಕಲಿಗರು & ದಲಿತರು ಹೋದ್ರೆ ಅವರನ್ನ ಶಾಸಕ ಮುನಿರತ್ನಂ ನಾಯ್ಡು ಕೆಟ್ಟದಾಗಿ ಬೈಯುತ್ತಾರೆ ಅನ್ನೋದು ಮಾಜಿ ಕಾರ್ಪೋರೇಟರ್ & ಸ್ವತಃ ಮುನಿರತ್ನ ಅವರ ಆಪ್ತನಾಗಿದ್ದ ವೇಲು ನಾಯ್ಕರ್ ಆರೋಪ. ಹೀಗಿರುವ ಮುನಿರತ್ನಂ ನಾಯ್ಡು ಕುಟುಂಬ ಆಂಧ್ರ ರಾಜ್ಯದಿಂದ ವಲಸೆ ಬಂದು, ಬೆಂಗಳೂರು & ಕರ್ನಾಟಕದಲ್ಲಿ ಹವಾ ಎಬ್ಬಿಸಲು ಮೊದಲನೇ ಕಾರಣ ಆಗಿದ್ದು ಶಾಸಕ ಮುನಿರತ್ನಂ ನಾಯ್ಡು ಸಹೋದರ ರೌಡಿ ಕೊರಂಗು ಕೃಷ್ಣ. ಆಂಧ್ರ ಮೂಲದ ಸುಬ್ರಹ್ಮಣ್ಯ ನಾಯ್ಡುರ ಮಕ್ಕಳಾದ ಶಾಸಕ ಮುನಿರತ್ನಂ ನಾಯ್ಡು ಹಾಗೂ ರೌಡಿ ಕೊರಂಗು ಕೃಷ್ಣ ಇಡೀ ಬೆಂಗಳೂರನ್ನೇ ನಡುಗಿಸಿದ್ದರು ಎಂಬ ಆರೋಪ ಇದೆ.
ರೌಡಿ ತಮ್ಮ, ಎಂಎಲ್‌ಎ ಅಣ್ಣ!
ಡಾನ್ ಜಯರಾಜ್ ನಿಮಗೆ ಗೊತ್ತಿರಬಹುದು, ಬೆಂಗಳೂರು ನಗರದ ಬಹುದೊಡ್ಡ ರೌಡಿಯ ಪಟ್ಟ ಪಡೆದ ನಟೋರಿಯಸ್ ಈತ. ಇದೇ ಡಾನ್ ಜಯರಾಜ್ ಬೆಂಗಳೂರಿನಲ್ಲಿ ಹಲವಾರು ರೌಡಿಗಳ ಹುಟ್ಟಿಗೂ ಕಾರಣವಾಗಿದ್ದ. ಅದೇ ರೀತಿ ಡಾನ್ ಜಯರಾಜ್ ಗ್ಯಾಂಗ್ ಜೊತೆಯಲ್ಲಿ ಇದೇ ಮಾನ್ಯ ಶಾಸಕರಾದ ಮುನಿರತ್ನಂ ನಾಯ್ಡು ಅವರ ತಮ್ಮನಾದ ಕೊರಂಗು ಕೃಷ್ಣ ಕೂಡ ಗುರುತಿಸಿಕೊಂಡಿದ್ದ. ಡಾನ್ ಜಯರಾಜ್ ಕಥೆಯನ್ನ ಬಾಂಬೆ ರೌಡಿಗಳು ಮುಗಿಸಿದ ನಂತರ, ಬೆಂಗಳೂರು ಭೂಗತ ಲೋಕ ಛಿದ್ರವಾಗಿ ಹೋಗಿತ್ತು. ಆಗಲೇ ನೋಡಿ ಶಾಸಕ ಮುನಿರತ್ನಂ ನಾಯ್ಡು ಅವರ ತಮ್ಮ ಕೊರಂಗು ಕೃಷ್ಣ ತನ್ನದೇ ಪಟಾಲಂ ಕಟ್ಟಿಕೊಂಡಿದ್ದು.
ಆಂಧ್ರದಿಂದ ವಲಸೆ, 8ನೇ ಕ್ಲಾಸ್ ಫೇಲ್!
ಕೊರಂಗು ಕೃಷ್ಣ ನಟೋರಿಯಸ್ ರೌಡಿಶೀಟರ್ ಆಗಿ ಬೆಳೆದು, 1990ರ ನಂತರ ಹವಾ ಸೃಷ್ಟಿ ಮಾಡಿದ್ದರಂತೆ. ಆಗಲೇ ನೋಡಿ ಮುನಿರತ್ನಂ ನಾಯ್ಡುಗೆ ಕೂಡ ಬಲ ಬಂದಿತ್ತು ಅನ್ನೋದು ವೇಲು ನಾಯ್ಕರ್ ಆರೋಪ. ಹೀಗೆ ತನ್ನ ತಮ್ಮನ ಬೆಂಬಲ ಪಡೆದು ಮುನಿರತ್ನಂ ನಾಯ್ಡು ಕೂಡ ಸಣ್ಣಪುಟ್ಟ ರೌಡಿಸಂ ಮಾಡಿಕೊಂಡು, ಇಂದು ಈ ಹಂತಕ್ಕೆ ಬಂದಿದ್ದಾರೆ. ಹಾಗಾದ್ರೆ ಮುನಿರತ್ನಂ ನಾಯ್ಡು ಬಳಿ ಹೀಗೆ ಸಾವಿರಾರು ಕೋಟಿ ರೂಪಾಯಿ ಆಸ್ತಿ ಬರಲು ಕಾರಣ ಏನು? ಎಂಬ ಪ್ರಶ್ನೆಯನ್ನ ಕೂಡ ವೇಲು ನಾಯ್ಕರ್ ಕೇಳುತ್ತಾರೆ.
ವೇಲು ನಾಯ್ಕರ್ ಆರೋಪದಂತೆ, ಶಾಸಕ ಮುನಿರತ್ನಂ ನಾಯ್ಡು ಓದಿದ್ದು ಕೇವಲ 8ನೇ ಕ್ಲಾಸ್ ಅಂತೆ. ಮುನಿರತ್ನಂ ನಾಯ್ಡು ಕುಟುಂಬ ಆಂಧ್ರದಿಂದ ವಲಸೆ ಬಂದು, ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡುತ್ತಿದ್ದರು. ಹೀಗಿದ್ದಾಗ ಮುನಿರತ್ನಂ ನಾಯ್ಡು ಸಹೋದರರು ಸಣ್ಣಪುಟ್ಟ ರೌಡಿಸಂ ಮಾಡಿಕೊಂಡು ಈ ಹಂತವನ್ನ ತಲುಪಿದ್ದಾರೆ ಎಂದು ಆರೋಪಿಸಿದ್ದಾರೆ ವೇಲು ನಾಯ್ಕರ್. ಹೀಗಾಗಿ ಬೆಂಗಳೂರು ಪೊಲೀಸರು ಈಗ ಮುನಿರತ್ನಂ ನಾಯ್ಡು ಆಸ್ತಿ ಹಿನ್ನೆಲೆ & ಬೇರೆ ಯಾರು ಯಾರಿಗೆಲ್ಲಾ ತೊಂದರೆ ಕೊಟ್ಟಿದ್ದಾರೆ ಎಂಬುದನ್ನ ಪರಿಶೀಲನೆ ಮಾಡಬೇಕು ಅಂತ ಆಗ್ರಹವನ್ನ ವೇಲು ನಾಯ್ಕರ್ ಮಾಡಿದ್ದಾರೆ.
ಜಾತಿ ನಿಂದನೆ ಕೇಸ್ ಸಂಕಷ್ಟ?
ಮುನಿರತ್ನಂ ನಾಯ್ಡು ಹಾಗೂ ಚಲುವರಾಜು ನಡುವೆ ನಡೆದ ಸಂಭಾಷಣೆ ಒಂದರಲ್ಲಿ, ಈ ಪ್ರಕರಣದ ಪ್ರಮುಖ ಆರೋಪಿ ಮುನಿರತ್ನಂ ನಾಯ್ಡು ದಲಿತರ ಬಗ್ಗೆ ಕೆಟ್ಟ ಕೆಟ್ಟ ಪದಗಳನ್ನ ಬಳಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರ ಜೊತೆಗೆ ಒಕ್ಕಲಿಗರ ಮನೆ ಮಹಿಳೆ & ತಾಯಿ ಬಗ್ಗೆ ಕೂಡ ಕೆಟ್ಟದಾಗಿ ಮಾತನಾಡಿದ್ದಾರೆ ಮುನಿರತ್ನಂ ನಾಯ್ಡು, ಎಂಬ ಆರೋಪ ಕೂಡ ಕೇಳಿ ಬಂದಿದೆ. ಕರ್ನಾಟಕದ ಮೂಲೆ ಮೂಲೆಯಲ್ಲೂ ಮುನಿರತ್ನಂ ನಾಯ್ಡು ಬಗ್ಗೆ ಆಕ್ರೋಶ ಮೊಳಗಿ, ಪ್ರತಿಭಟನೆ ಆರಂಭ ಆಗಿವೆ.
ಪರಿಸ್ಥಿತಿ ಹೀಗಿದ್ದಾಗ ಇದೀಗ ಎಫ್‌ಎಸ್‌ಎಲ್ (FSL) ಪರೀಕ್ಷೆ ನಂತರ ಮುನಿರತ್ನಂ ನಾಯ್ಡು ದಲಿತ ಸಮುದಾಯದ ಬಗ್ಗೆ ಜಾತಿ ನಿಂದನೆ ಮಾಡಿರುವುದು ಸತ್ಯ & ಈ ಆಡಿಯೋ ಅಸಲಿ ಎಂಬುದು ಸಾಬೀತು ಆದರೆ ಸಂಕಷ್ಟ ಗ್ಯಾರಂಟಿ. ಹೀಗೆ ಮುನಿರತ್ನಂ ನಾಯ್ಡುಗೆ ಜೈಲು ಶಿಕ್ಷೆ ಆಗುವುದು ಕೂಡ ಗ್ಯಾರಂಟಿ ಎನ್ನಲಾಗಿದೆ. ಮತ್ತೊಂದು ಕಡೆಯಲ್ಲಿ ಮುನಿರತ್ನಂ ನಾಯ್ಡು ಶಾಸಕ ಸ್ಥಾನ ಕೂಡ ತೂಗುಯ್ಯಾಲೆ ಆಗಿದ್ದು, ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡುತ್ತಾರಾ? ಎಂಬ ಪ್ರಶ್ನೆ ಮೂಡಿದೆ.
ಒಕ್ಕಲಿಗ ಸಮುದಾಯ VS ಮುನಿರತ್ನಂ?
ಒಟ್ನಲ್ಲಿ ಶಾಸಕ ಮುನಿರತ್ನಂ ನಾಯ್ಡು ಮೇಲೆ ಒಂದಾದ ನಂತರ ಒಂದು ಸಂಕಷ್ಟ ಇದೀಗ ಎದುರಾಗುತ್ತಿದೆ. ಅದರಲ್ಲೂ ಮುನಿರತ್ನಂ ನಾಯ್ಡು ಅಶ್ಲೀಲವಾಗಿ ಮಾತನಾಡಿದ್ದಾರೆ ಎಂಬ ಆರೋಪ ಇರುವ, ಆಡಿಯೋ ಒಂದು ಸಂಚಲನ ಸೃಷ್ಟಿ ಮಾಡಿದೆ. ಹೀಗಾಗಿ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ? ದಲಿತರನ್ನು ನಿಂದಿಸಿರುವ ಆರೋಪ ಹೊತ್ತಿರುವ ಮುನಿರತ್ನಂ ನಾಯ್ಡು ಜೈಲಿಗೆ ಶಿಫ್ಟ್ ಆಗುತ್ತಾರಾ? ಅನ್ನೋದನ್ನ ಕಾದು ನೋಡಬೇಕಿದೆ. ಮತ್ತೊಂದು ಕಡೆ ಶಾಸಕ ಮುನಿರತ್ನಂ ನಾಯ್ಡು ವಿರುದ್ಧ ಒಕ್ಕಲಿಗ ಸಮುದಾಯ ಕೂಡ ಆಕ್ರೋಶ ಹೊರ ಹಾಕಿದ್ದು, ತೀವ್ರ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದೆ.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications