ಸಿದ್ದು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಅಸ್ತು ಅನ್ನುವಿರಾ?

multi-specialty-hospital-tobe-built-belgaum-minister-satish-jarkiholi
ಬೆಳಗಾವಿ, ನ.23: ಕುಂದ ನಾಡಿನ ಜನ ಸುಸಜ್ಜಿತ ಸರಕಾರಿ ಆಸ್ಪತ್ರೆಗೆ ಕಾದುಕುಳಿತಿದ್ದಾರೆ. ಈಗಾಗಲೇ ನಗರದಲ್ಲಿರುವ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಂದ ಸದಾ ಗಿಜುಗುಡುತ್ತಿರುತ್ತದೆ. ಒಂದೆಡೆ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಆಸ್ಪತ್ರೆ ಸುಸಜ್ಜಿತವಾಗಿಲ್ಲದಿರುವುದೂ ಈ ಭಾಗದ ಜನರನ್ನು ಬಹುವಾಗಿ ಕಾಡುತ್ತಿದೆ.

ಹಾಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿ ಅಧಿವೇಶನದಲ್ಲಿ ಜಿಲ್ಲೆಗೆ ಸಿಹಿಸುದ್ದಿ ನೀಡುತ್ತಾರಾ? ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅಧಿವೇಶನದಲ್ಲಿ ಅಸ್ತು ಅನ್ನುತ್ತಾರಾ?

ಈ ಬಗ್ಗೆ ಮಾತನಾಡಿರುವ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಪ್ರಕಾರ 500 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಿಂದ ಅನುಮೋದನೆ ಪಡೆಯುವುದು ಖಚಿತವಾಗಿದೆ. ಡಾ ರಾಮಯ್ಯ ಅವರು 500 ಹಾಸಿಗೆ ಸಾಮರ್ಥ್ಯದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಪ್ರಸ್ತಾವನೆಯೊಂದನ್ನು ಈಗಾಗಲೇ ಸರಕಾರಕ್ಕೆ ಕಳುಹಿಸಿಕೊಟ್ಟಿದ್ದಾರೆ.

ಈಗಿರುವ ಜಿಲ್ಲಾಸ್ಪತ್ರೆಗೆ ದಿನನಿತ್ಯ 1,500 ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆಗೆಂದು ಬರುತ್ತಾರೆ. ತುರ್ತು ಸಂದರ್ಭದ ಎದುರಾದರೆ ಬೇರೆ ಆಸ್ಪತ್ರೆಗಳಿಗೆ ಕಳುಹಿಸಿಬೇಕಾದ ಅನಿವಾರ್ಯತೆಯಿದೆ. ಆದರೆ ಹೊಸ ಸುಸಜ್ಜಿತ ಆಸ್ಪತ್ರೆ ಬಂದರೆ ಇಲ್ಲಿಯೇ ಚಿಕಿತ್ಸೆ ಕಲ್ಪಿಸಬಹುದು. ಇದರಿಂದ ಬಡವರು ಮತ್ತು ಮಧ್ಯಮವರ್ಗದವರಿಗೆ ತುಂಬಾ ಪ್ರಯೋಜಕನಕಾರಿಯಾಗಲಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ ರಾಮಯ್ಯ ಆಶಿಸಿದ್ದಾರೆ.

ಪ್ರಸ್ತಾವಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯು ಐದು ಅಂಸತ್ತಿನ ಕಟ್ಟಡದಲ್ಲಿ cardiology, urology, nephrology ಮತ್ತಿತರ ವಿಶೇಷ ವಿಭಾಗಗಳನ್ನು ತೆರೆದರೆ ಜನರಿಗೆ ಉಪಯೋಗವಾದೀತು ಎಂದು ಡಾ ರಾಮಯ್ಯ ಕಳಕಳಿ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಈಗಿರುವ Belgaum Institute of Medical Science ಆವರಣದಲ್ಲೇ ಹೊಸ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಲಿದೆ.

ಕಳೆದ ವರ್ಷವೇ ಈ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಸರಕಾರ ಅತಂತ್ರವಾಗಿದ್ದರಿಂದ ಬೇಡಿಕೆ ನೆರವೇರದೆ ಹೋಯಿತು. ಪ್ರಸ್ತುತ ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರ ಹೊಸ ಆಸ್ಪತ್ರೆಗೆ ಅನುಮೋದನೆ ದೊರಕುತ್ತದಾ? ಎಂಬುದಕ್ಕೆ ಮುಂದಿನ ವಾರ ಉತ್ತರ ಸಿಗಲಿದೆ. ಎರಡು ತಿಂಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೆಚ್ಚು ಆಸ್ಥೆ ವಹಿಸಿ, ಈಗಾಗಲೇ ಮುಖ್ಯಮಂತ್ರಿ ಜತೆ ಚರ್ಚಿಸಿರುವುದು ಪೂರಕ ವಾತಾವರಣ ಸೃಷ್ಟಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+