MUDA-Valmiki: ಕನ್ನಡಿಗರ ಈ ಸಾಲು ಸಾಲು ಪ್ರಶ್ನೆಗಳಿಗೆ ಸಿದ್ದರಾಮಯ್ಯ ಉತ್ತರಿಸಬೇಕು
ಬೆಂಗಳೂರು, ಆಗಸ್ಟ್ 04: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಗದಗೆಟ್ಟಿದೆ ಎಂಬ ಆರೋಪ ಹೊತ್ತಿದ್ದ ರಾಜ್ಯ ಸರ್ಕಾರ ಇದೀಗ ಸಾಲು ಸಾಲು ಭ್ರಷ್ಟಾಚಾರ, ಹಗರಣಗಳ ಆರೋಪ ಎದುರಿಸುತ್ತಿದೆ. ಅಧಿಕಾರಿ ಆತ್ಮಹತ್ಯೆಗೆ ಕಾರಣವಾದ ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ, ಮುಡಾ ಹಗರಣ ಕುರಿತು ರಾಜ್ಯ ಸರ್ಕಾರಕ್ಕೆ ಕನ್ನಡಿಗರ ಬಳಿಕ ಹಲವು ಪ್ರಶ್ನೆಗಳು ಮೂಡಿದ್ದು, ಇದಕ್ಕೆ ಸರ್ಕಾರ ಉತ್ತರಿಸಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಮುಡಾ ಹಾಗೂ ವಾಲ್ಮೀಕಿ ಹಗರಣ ಸಂಬಂಧಿಸಿದಂತೆ ಆರ್. ಅಶೋಕ್ ಅವರು ಭಾನುವಾರ ಟ್ವೀಟ್ ಮೂಲಕ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ದೂರಿದ್ದಾರೆ. ಕನ್ನಡಿಗರ ಈ ಪ್ರಶ್ನೆಗಳಿಗೆ ಉತ್ತರಿಸಿ ಎಂದು #AnswerMadiSiddaramaiah ಹ್ಯಾಷ್‌ಟ್ಯಾಗ್ ಹಾಕಿ ಒತ್ತಾಯಿಸಿದ್ದಾರೆ.

ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದ್ದು ,₹187 ಕೋಟಿ ಮೊತ್ತ ಲೂಟಿಗೆ ಪ್ಲಾನ್ ನಡೆದಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರಿಂದ ಉತ್ತರ ನಿರೀಕ್ಷೆಯಲ್ಲಿ ಈ ಪ್ರಶ್ನೆಗಳನ್ನು ರಾಜ್ಯದ ಜನರು ಕೇಳುತ್ತಿದ್ದಾರೆ.
* ವಾಲ್ಮೀಕಿ ನಿಗಮಕ್ಕೆ ಸೇರಿದ ವಸಂತ ನಗರದ ಯೂನಿಯನ್ ಬ್ಯಾಂಕ್ ಶಾಖೆಯಿಂದ ಎಂಜಿ ರಸ್ತೆ ಶಾಖೆಗೆ ಅಕ್ರಮವಾಗಿ ದೊಡ್ಡ ಮೊತ್ತ ವರ್ಗಾವಣೆಯಾಯದಾಗ ಅದು ಇಲಾಖೆಯ ಗಮನಕ್ಕೆ ಬರಲಿಲ್ಲವೇಕೆ?
* ದೊಡ್ಡ ಮೊತ್ತ ವರ್ಗಾವಣೆ ಆದರೂ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಪರಿಶೀಲನೆ ನಡೆಸಿರಲಿಲ್ಲವೇ? ಅಥವಾ ತಮ್ಮ ನಿರ್ದೇಶನದಂತೆ ಸುಮ್ಮನಿದ್ದರೆ? ಎಂಬ ಪ್ರಶ್ನೆ ಎದ್ದಿದೆ.
* ಅಕ್ರಮ ಹಣ ವರ್ಗಾವಣೆಯ ಮಾಹಿತಿ ಎನ್ ಟಿಟಿ ಮಾಡ್ಯೂಲ್ ಗೆ ಸಿಗದೆ ಇರಲಿ ಎನ್ನುವ ದುರುದ್ದೇಶದಿಂದ ಎಂಜಿ ರಸ್ತೆ ಖಾತೆಗೆ ಹಣ ವರ್ಗಾವಣೆ ಮಾಡಿದ್ದು ನಿಜವಲ್ಲವೇ? ಎಂದು ಜನ ಕೇಳುತ್ತಿದ್ದಾರೆ.
* ಎನ್ ಟಿಟಿ ಮಾಡ್ಯೂಲ್ ಬಗ್ಗೆ ಸಂಪೂರ್ಣ ಮಾಹಿತಿ ಇದ್ದವರಿಂದ ಮಾತ್ರ ಇಷ್ಟು ಪೂರ್ವ ನಿಯೋಜಿತವಾಗಿ ಅಕ್ರಮ ಮಾಡಲು ಸಾಧ್ಯ. ಅಂದಮೇಲೆ ಹಣಕಾಸು ಇಲಾಖೆಯ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿರುವುದು ಸತ್ಯವಲ್ಲವೇ?
* ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನಡೆಸುವ ಸಭೆಯಲ್ಲಿ ಈ ಅಕ್ರಮ ಕಣ್ಣಿಗೆ ಬೀಳಲಿಲ್ಲವೇ? ಅಥವಾ ಕಂಡೂ ಕಾಣದ ಹಾಗೆ ಜಾಣ ಕುರುಡುತನ ಪ್ರದರ್ಶನ ಮಾಡಲಾಯಿತೋ? ಎಂಬುದಕ್ಕೆ ಸಿಎಂ ಉತ್ತರಿಸಬೇಕಿದೆ.

ಮುಡಾ ಹಗರಣ: ಅನೇಕ ಅನುಮಾನ
ಇನ್ನೂ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಮೂಡಾದಿಂದ ಪಡೆದಿರುವ ಸೈಟುಗಳ ಅವರ ತವರು ಮನೆಯಿಂದ ಪಡೆದ ಜಮೀನಿನ ಬದಲಾಗಿ ಪಡೆಸಿರುವ ನಿವೇಶನಗಳು ಎಂದು ಸಿದ್ದರಾಮಯ್ಯನವರು ಸಮರ್ಥನೆ ಮಾಡಿಕೊಳ್ಳುತ್ತಾರೆ. ಆದರೆ ಮುಖ್ಯಮಂತ್ರಿಗಳು ಬಾಮೈದ ಬಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಅವರು ಆ ಭೂಮಿ ಖರೀದಿಸಿದ್ದರ ಕುರಿತು ಅನೇಕ ಅನುಮಾನಗಳು ವ್ಯಕ್ತವಾಗಿದೆ ಎಂದು ಆರ್.ಅಶೋಕ್ ಸಂಶಯ ವ್ಯಕ್ತಪಡಿಸಿದ್ದಾರೆ.
* ಸಿಎಂ ಸಿದ್ದರಾಮಯ್ಯನವರೇ, ತಮ್ಮ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಅವರು ಸದರಿ ಜಮೀನು ಖರೀದಿಸಿದ್ದು ದೇವರಾಜ ಅವರಿಂದ ಹೇಳುತ್ತಾರೆ. ಆದರೆ ಮಲ್ಲಿಕಾರ್ಜುನ ಸ್ವಾಮಿ ಅವರು ಭೂಮಿ ಖರೀದಿಸಿದಾಗ ದೇವರಾಜ ಅವರ ಹೆಸರಿನಲ್ಲಿ encumebrance certificate ಇರಲಿಲ್ಲ ಎನ್ನುವುದು ಸತ್ಯವಲ್ಲವೇ?
* 1968ರಲ್ಲೇ ದೇವರಾಜ ಅವರು ಆ ಜಮೀನನ್ನು ಮೈಲಾರಯ್ಯ ಮತ್ತು ಕುಟುಂಬದವರಿಗೆ ಮಾರಾಟ ಮಾಡಲಾಗಿದೆ. ಬಳಿಕ ನಕಲಿ ದಾಖಲೆ ಸೃಷ್ಟಿಸಿ, ತಮ್ಮ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಮಾರಿದ್ದು ಸತ್ಯವಲ್ಲವೇ ಸಿಎಂ ಸಿದ್ದರಾಮಯ್ಯನವರೇ? ಇದಕ್ಕೆ ನಿಮ್ಮ ಉತ್ತರವೇನು?
ವಾಲ್ಮೀಕಿ ನಿಗಮದಲ್ಲಿ ನಡೆದಿರುವ ₹187 ಕೋಟಿ ಮೊತ್ತದ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ @siddaramaiah ಅವರಿಂದ ಕನ್ನಡಿಗರು ನಿರೀಕ್ಷಿಸುತ್ತಿರುವ ಉತ್ತರಗಳು:
— R. Ashoka (@RAshokaBJP) August 4, 2024
1.) ವಾಲ್ಮೀಕಿ ನಿಗಮಕ್ಕೆ ಸೇರಿದ ವಸಂತ ನಗರದ ಯೂನಿಯನ್ ಬ್ಯಾಂಕ್ ಶಾಖೆಯಿಂದ ಎಂಜಿ ರಸ್ತೆ ಶಾಖೆಗೆ ಅಕ್ರಮವಾಗಿ ದೊಡ್ಡ ಮೊತ್ತ ವರ್ಗಾವಣೆಯಾಯದಾಗ ಅದು ಇಲಾಖೆಯ ಗಮನಕ್ಕೆ…
* ಜಮೀನಿನ ಮಾಲೀಕತ್ವದ ಬಗ್ಗೆ ಇಷ್ಟು ಗೊಂದಲವಿದ್ದರೂ ತಮ್ಮ ಬಾಮೈದ ಜಮೀನು ಖರೀದಿಸಿದ್ದು ಯಾಕೆ? ಜಮೀನು ಖರೀದಿಸುವಾಗ ಸ್ಥಳವನ್ನ ಪರಿಶೀಲನೆ ಮಾಡದೆಯೇ ಖರೀದಿ ಮಾಡಿದರಾ? ಅಥವಾ ಆ ವೇಳೆಗೆ ಅಲ್ಲಿ ಆಗಾಗಲೇ ಬಡಾವಣೆ ಅಭಿವೃದ್ಧಿ ಆಗಿತ್ತು ಅಂತ ಜಮೀನು ನೋಡದೆಯೇ ಖರೀದಿ ಮಾಡಿದರಾ?
* 2003ರಲ್ಲೆ ಮೂಡಾ ನಿವೇಶನ ಮಾಡಿ ಕ್ರಯಕ್ಕೆ ಹಂಚಿಕೆ ಮಾಡಿದ ಮೇಲೆ 2005ರಲ್ಲಿ ಅದೇ ಜಾಗವನ್ನ ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಿ ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆ ಮಾಡಲು ವರದಿ ನೀಡಲು ಹೇಗೆ ಸಾಧ್ಯ?
* 2010 ರಲ್ಲಿ ಅರಿಶಿನ-ಕುಂಕುಮ ರೂಪದಲ್ಲಿ ತಮ್ಮ ಪತ್ನಿ ಪಾರ್ವತಿ ಅವರಿಗೆ ಜಮೀನು ಸಿಕ್ಕಾಗ ಅವರು ಸ್ಥಳಕ್ಕೆ ಭೇಟಿ ನೀಡಿರಲಿಲ್ಲವೇ? ಎಂದು ಸಾಲು ಸಾಲು ಪ್ರಶ್ನೆಗಳನ್ನು ಬಿಜೆಪಿ ಸಿಎಂ ಮುಂದಿಟ್ಟಿದೆ.












Click it and Unblock the Notifications