MSIL Chit Fund: ಆರ್ಥಿಕ ಉಳಿತಾಯಕ್ಕಾಗಿ ರಾಜ್ಯ ಸರ್ಕಾರದಿಂದ 'ಮೈಕ್ರೋ ಚಿಟ್‌ಫಂಡ್' ಶುರು..
ಬೆಂಗಳೂರು, ಏಪ್ರಿಲ್ 02: ಕರ್ನಾಟಕದಲ್ಲಿ ಇತ್ತೀಚೆಗೆ ವಿಶೇಷ ಟೂರ್ ಪ್ಯಾಕೇಜ್ ಘೋಷಿಸಿದ್ದ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (MSIL) ಇದೀಗ ತಕ್ಷಣಕ್ಕೆ ಜನರಿಗೆ ಆರ್ಥಿಕ ನೆರವಿಗೆ ಬರುವಂತೆ ಸುರಕ್ಷಿತ ಹೂಡಿಕೆಗೆ ಮಹತ್ವದ ಹೆಜ್ಜೆ ಇಟ್ಟಿದೆ. ಗ್ರಾಮೀಣ ಆರ್ಥಿಕತೆಗೆ ಹೊಸ ಭಾಷ್ಯ ಬರೆಯಲು ಮುಂದಾಗಿದ್ದು, ಈ ಉಪಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ತಿಳಿಸಿದರು.
ನಮ್ಮ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (MSIL) ಸಂಸ್ಥೆಯು 'ಮೈಕ್ರೊ ಚಿಟ್ಸ್' ಆರಂಭಿಸುತ್ತಿದೆ. ಇದರಿಂದ ಗ್ರಾಮೀಣ ಜನತೆ, ಅದರಲ್ಲೂ ವಿಶೇಷವಾಗಿ ಸ್ವಸಹಾಯ ಗುಂಪಿನ ಮಹಿಳೆಯರು, ಗೃಹಲಕ್ಷ್ಮಿ ಫಲಾನುಭವಿಗಳು, ಹಾಲು ಉತ್ಪಾದಕರು, ಹಣಕಾಸು ಉಳಿತಾಯಕ್ಕೆ ಮೈಕ್ರೊ ಚಿಟ್ಸ್ ಆಸರೆಯಾಗಲಿದೆ. ಸರ್ಕಾರಿ ನೌಕರರು, ಸಣ್ಣ ಉದ್ದಿಮೆದಾರರ ಉಳಿತಾಯವನ್ನು ಗಮನದಲ್ಲಿರಿಸಿಕೊಂಡು ಶೀಘ್ರದಲ್ಲೇ 'ಮೈಕ್ರೊ ಚಿಟ್ಸ್' ಆರಂಭಿಸಲಿದೆ. ಈ ವಿನೂತನ ಯೋಜನೆಗೆ ಏಪ್ರಿಲ್ 2ನೇ ವಾರ ಅಧಿಕೃತ ಚಾಲನೆ ನೀಡಲಿದ್ದಾರೆ.

ಈ 'ಮೈಕ್ರೋ ಚಿಟ್ಸ್' ಆರಂಭಿಸುವ ಉದ್ದೇಶದಿಂದ MSIL ಸಂಸ್ಥೆಯು ಸಕಲ ಪೂರ್ವ ತಯಾರಿ ನಡೆಸಿದೆ. ಸರಳ ಮತ್ತು ಸುರಕ್ಷಿತ ವ್ಯವಹಾರ, ಹಣಕಾಸು ನಿರ್ವಹಣೆಗಾಗಿ ಎಲ್ಲಾ ತಾಂತ್ರಿಕತೆ. ಆಪ್ ಆಧಾರಿತ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ. ಈ ನೂತನ ಹಣಕಾಸು ಸೇವೆಯಿಂದ ಗ್ರಾಮೀಣ ಭಾಗದ ಆರ್ಥಿಕತೆಗೆ ಹೊಸ ವೇಗ ದೊರಕಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಗ್ರಾಮೀಣ ಆರ್ಥಿಕ ಅಭಿವೃದ್ಧಿಗೆ ಇದು ಕಾಂಗ್ರೆಸ್ ಸರ್ಕಾರದ ಹೊಸ ಗ್ಯಾರಂಟಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದರಿಂದ ಜನರಿಗೆ ಸಣ್ಣ ಪ್ರಯಾಣದ ಉಳಿತಾಯದ ಜೊತೆಗೆ ತಕ್ಷಣಕ್ಕೆ MSILChits ಆರ್ಥಿಕ ನೆರವಿಗೆ ಬರಲಿದೆ.

ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (MSIL) ಸಂಸ್ಥೆ ಭಾರತದಲ್ಲಿ ಪ್ರಮುಖ ಚಿಟ್ ಫಂಡ್ ಮಾಡುವ ಮೂಲಕ ಚಿಟ್ ಫಂಡ್ ವಲಯವನ್ನು ಉನ್ನತ ಸ್ಥಾನಕ್ಕೆ ಒಯ್ಯಲು, ಈ ವಲಯ ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕವು ಮಹತ್ತರ ಹೆಜ್ಜೆ ಇಡುತ್ತಿದೆ.
ಮುಂದಿನ ಕೆಲವೇ ವರ್ಷಗಳಲ್ಲಿ ರೂಪಾಯಿ 300 ಕೋಟಿಯಿಂದ 10,000 ಕೋಟಿ ವಹಿವಾಟು ತಲುಪುವ ಗುರಿ ಹೊಂದಿರುವ ಈ MSIL ಚಿಟ್ಸ್‌ನಲ್ಲಿ ವಿಶ್ವಾಸಾರ್ಹ ಬ್ರ್ಯಾಂಡ್ಗಳಿವೆ, ಸುಭದ್ರ, ಸುರಕ್ಷಿತ ಮತ್ತು ಪ್ರಗತಿ ವರ್ಧಕವಾಗಿದ್ದ, ಯಾವುದೇ ಅನುಮಾನ ಬೇಡ. ಆರ್ಟಿಫಿಷಿಯಲ್ ಇಂಟಲಿಜೆನ್ಸ್ (AI) ಪ್ಲಾಟ್ ಫಾರ್ಮ್ ನಲ್ಲಿ ಇರಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಏಪ್ರಿಲ್ ಎರಡನೇ ವಾರ ರಾಜ್ಯ ಸರ್ಕಾರದಿಂದಲೇ ಈ ಚಿಟ್ಸ್ ಫಂಡ್ ಉಪಕ್ರಮ ಆರಂಭವಾಗುತ್ತದೆ. ಸರ್ಕಾರದ್ದೇ ಆಗಿರುವ ಕಾರಣ ಇದನ್ನು ಸುರಕ್ಷಿತ ಎನ್ನಬಹುದಾಗಿದೆ. ಬೇರೆ ಬೇರೆ ಖಾಸಗಿ ವ್ಯಕ್ತಿಗಳು, ಸಂಸ್ಥೆಗಳ ಕೈಗೆ ಹಂತ ಹಂತವಾಗಿ ಹಣ ಕಟ್ಟಿ ಮೋಸ ಹೋದವರು ಈ ಎಂಎಸ್‌ಐಎಲ್ ಚಿಟ್ಸ್ ನತ್ತ ಮುಖ ಮಾಡುವ ಸಾಧ್ಯತೆ ಇದೆ.











Click it and Unblock the Notifications