MSIL Chit Fund: ಸುರಕ್ಷಿತ 'ಮೈಕ್ರೋ ಚಿಟ್ ಫಂಡ್' ಪರಿಚಯ, ಹೊಸ ಆಪ್ ರಚನೆ: ಮಹತ್ವದ ಅಪ್ಡೇಟ್ಸ್
ಬೆಂಗಳೂರು, ಜುಲೈ 09: ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ (MSIL) ನಡೆಸುವ ಚಿಟ್ ಫಂಡ್ ಯೋಜನೆಯಲ್ಲಿ ಮಹತ್ವದ ಹಾಗೂ ಪಾರದರ್ಶಕ ಬದಲಾವಣೆಗಲೂ ಆಗುತ್ತಿವೆ. ರಾಜ್ಯ ಸರ್ಕಾರ ಹೊಸದಾಗಿ ಗುರಿ ಹಾಕಿಕೊಂಡಿದೆ. ಮೊಬೈಲ್ ಆಬ್ ಸಹ ಹೊರ ತರುತ್ತಿದೆ. ಈ ಕುರಿತು ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ಹೈ ಓಲ್ಟೇಜ್ ಸಭೆ ಮಾಡಿದ್ದಾರೆ. ಉಳಿತಾಯ, ವ್ಯವಹಾರ ಕುರಿತು ಮಹತ್ವದ ಅಪ್ಡೇಟ್ ನೀಡಿದ್ದಾರೆ.
ಎಂಎಸ್‌ಐಎಲ್ ಚಿಟ್ ಫಂಡ್ ಕರ್ನಾಟಕ ರಾಜ್ಯದ ಸರ್ಕಾರದ ಒಂದು ಉದ್ಯಮ ಎನ್ನಬಹುದು. ಚಿಟ್ ಫಂಡ್ ಎಲ್ಲಾ ಆದಾಯ ಗುಂಪುಗಳ ಅಗತ್ಯತೆ ಪೂರೈಕೆಗೆ ವಿನ್ಯಾಸ ಮಾಡಿದ್ದು, ಸಣ್ಣ ಉಳಿತಾಯ ಪ್ರೋತ್ಸಾಹಿಸಲಾಗುತ್ತದೆ. ಸಾರ್ವಜನಿಕರಿಗೆ ಅನುಕೂಲ ಒದಗಿಸುವ ಆರ್ಥಿಕ ವ್ಯವಹಾರ ಇದಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿರುವ ಸಚಿವ ಎಂಬಿ ಪಾಟೀಲ್ ಅವರು MSIL ಚಿಟ್ ಫಂಡ್ ಯೋಜನೆಯಲ್ಲಿ ಉಳಿತಾಯ ಹೆಚ್ಚಿಸುವುದು, ಸಬಲೀಕರಣಗೊಳಿಸುವುದು, ಹಣಕಾಸು ಸೇರ್ಪಡೆಗೆ ಚಾಲನೆ ನೀಡುವ ಕೆಲಸವಾಗಿದೆ. ಅನೌಪಚಾರಿಕ ಉಳಿತಾಯದಲ್ಲಿ ರಾಜ್ಯದ ಸಾಮರ್ಥ್ಯ ಬಹಿರಂಗಗೊಳಿಸಲು (ಅನ್ಲಾಕ್) MSIL ನ ಚಿಟ್ ಫಂಡ್ ಕಾರ್ಯಾಚರಣೆಗಳನ್ನು ಪರಿವರ್ತಿಸಲಿದ್ದೇವೆ. ಪಾರದರ್ಶಕತೆ, ನಂಬಿಕೆ ಮತ್ತು ತಂತ್ರಜ್ಞಾನದ ಮೇಲೆ ಸ್ಥಾಪಿತವಾದ ಈ ಮಾರುಕಟ್ಟೆಯನ್ನು ವಾರ್ಷಿಕವಾಗಿ ₹10,000 ಕೋಟಿಗೆ ಬೆಳೆಸುವುದು ಗುರಿ ಸರ್ಕಾರ ಹೊಂದಿದೆ ಎಂದರು.
ರಾಜ್ಯದ ಗ್ರಾಮೀಣ ಭಾಗಗಳು, ಸೂಕ್ಷ್ಮ ಪ್ರದೇಶಗಳ ಜನರು ಸೇರಿದಂತೆ ಎಲ್ಲ ಜಿಲ್ಲೆಗಳು ಮತ್ತು ತಾಲ್ಲೂಕುಗಳ ಸಾರ್ವಜನಿಕರನ್ನು ತಲುಪಲು ಸುರಕ್ಷಿತ, ಬಳಕೆದಾರ ಸ್ನೇಹಿ ಮೊಬೈಲ್ ಅಪ್ಲಿಕೇಶನ್ ಹೊರ ತರಲಿದ್ದೇವೆ. ನಿವೃತ್ತ ಬ್ಯಾಂಕರ್‌ಗಳನ್ನು ಒಳಗೊಂಡಂತೆ ಮೀಸಲಾದ ಏಜೆಂಟ್ ನೆಟ್‌ವರ್ಕ್ ಅನ್ನು ನಿರ್ಮಿಸುತ್ತಿದ್ದೇವೆ. ಒಟ್ಟಾರೆ ಈ ಉಳಿತಾಯ ಯೋಜನೆಯಲ್ಲಿ ತಂತ್ರಜ್ಞಾನದ ಬಳಕೆಗೆ ಹೆಚ್ಚಿನ ಆದ್ಯತೆ ನೀಡಿದ್ದರ ಎಂದು ಮಹತ್ವದ ಅಪ್ಡೇಟ್ ನೀಡಿದರು.
ಮೈಕ್ರೋ ಚಿಟ್‌ಗಳಿಂದ ದೊಡ್ಡ ಪ್ರಮಾಣದ ಉಳಿತಾಯ, ವ್ಯವಹಾರಗಳ (₹1 ಲಕ್ಷ-₹1 ಕೋಟಿ) ಸುಧಾರಣೆಗಳು, ಸುರಕ್ಷಿತತೆ ಅಗತ್ಯವಾಗಿರುತ್ತದೆ. ಉಳಿತಾಯವನ್ನು ಉತ್ತಮವಾಗಿ ಯೋಜಿಸಲು ಮತ್ತು ಔಪಚಾರಿಕ ಬ್ಯಾಂಕಿಂಗ್‌ನ ಹೊರಗೆ ಹೆಚ್ಚು ಅಗತ್ಯವಿರುವ ಹಣಕಾಸು ಆಯ್ಕೆಗಳನ್ನು ಪ್ರವೇಶಿಸಲು ಜನರಿಗೆ ಅನುಕೂಲಕರ ವಾತಾವರಣ ನಿರ್ಮಿಸಲಾಗುತ್ತದೆ.
ಎಂಎಸ್‌ಐಎಲ್ ಎಂಬ ಮದ್ಯ ಕೇಂದ್ರಿತ ಸಂಸ್ಥೆಯಿಂದ ವಿಶ್ವಾಸಾರ್ಹ, ಡಿಜಿಟಲ್-ಮೊದಲ ಹಣಕಾಸು ವೇದಿಕೆ ಪರಂಪರೆ ಮರುರೂಪಿಸುವಲ್ಲಿ ಕೈಗೊಂಡ ನಿರ್ಧಾರಗಳು ಚಿಟ್‌ಫಂಡ್ ಪಾಲಿಗೆ ಮಹತ್ವದ ಹೆಜ್ಜೆಯಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications