PM Modi Mandya Visit: ಪ್ರಧಾನಿ ಮೋದಿಗೆ ಸುಮಲತಾ ಬೆಲ್ಲದ ಉಡುಗೊರೆ
ಬೆಂಗಳೂರು, ಮಾರ್ಚ್ 12: ಭಾನುವಾರ ಮಾರ್ಚ್ 12 ರಂದು ಸಕ್ಕರೆ ನಾಡಿಗೆ ಆಗಮಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮಂಡ್ಯದ ಸಂಸದೇ ಸುಮಲತಾ ಅಂಬರೀಶ್ ಅವರು ವಿಶೇಷ ಉಡುಗೊರೆಯೊಂದನ್ನು ನೀಡಿದರು.
ಹೆಸರೇ ಹೇಳುವಂತೆ ಮಂಡ್ಯ ಸಕ್ಕರೆನಾಡು. ಇಲ್ಲಿ ಕಬ್ಬನ್ನು ಹೆಚ್ಚು ಬೆಳೆಯಲಾಗುತ್ತದೆ. ಆ ಕಬ್ಬಿನಿಂದ ಸಂಸ್ಕರಿಸಿ ತೆಗೆದ ಉತ್ತಮ ಗುಣಮಟ್ಟದ 'ಬೆಲ್ಲ'ವನ್ನು ಪ್ರಧಾನಿ ಮೋದಿಯವರಿಗೆ ಉಡುಗೊರೆಯಾಗಿ ನೀಡಲೆಂದು ವಿಶೇಷವಾಗಿ ಪ್ಯಾಕ್ ಬೆಳಗ್ಗೆಯೇ ಮಾಡಿಸಿದ್ದರು. ಬಿದರಿನ ಸಣ್ಣ ಬುಟ್ಟಿಯಲ್ಲಿ ಅಲಂಕೃತ ಕವರಿನಲ್ಲಿ ಸಣ್ಣ ಸಣ್ಣ ಬೆಲ್ಲದ ತುಣಕುಗಳ ಸಹಿತ ಸಂಸದೇ ಸುಮಲತಾ ಮಂಡ್ಯ ತಲುಪಿದರು.

ಬೆಂಗಳೂರಿನಿಂದ ಆರಂಭವಾದ ಅವರ ಪ್ರಯಾಣ, ಮದ್ದೂರು ಮಾರ್ಗವಾಗಿ ಮಂಡ್ಯ ತಲುಪಿದರು. ವೇದಿಕೆ ಕಾರ್ಯಕ್ರಮದಲ್ಲಿ ಸಂಸದೆ ಪ್ರಧಾನಮಂತ್ರಿಗಳಿಗೆ ಮಂಡ್ಯದ ದೇಶಿಯ ಉತ್ಪನ್ನವನ್ನು ಗಿಫ್ಟ್ ನೀಡಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಅಭ್ಯರ್ಥಿಗಳನ್ನು ಹಾಕದೇ ಬಿಜೆಪಿ ಸುಮಲತಾರನ್ನು ಬೆಂಬಲಿಸಿತ್ತು. ಇದಾದ ಬಳಿಕ ಅವರು ಬಿಜೆಪಿ ಸೇರುವ ಬಗ್ಗೆಯು ಮಾತುಗಳು ಕೇಳಿ ಬಂದಿದ್ದವು. ಈ ನಡುವೆ ಮೊನ್ನೆಯಷ್ಟೇ ಸ್ವಕ್ಷೇತ್ರ ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಸಂಸದೇ ಸುಮಲತಾ ತಾವು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಬೆಂಬಲಿಸುವುದಾಗಿ ಬಹಿರಂಗವಾಗಿ ಹೇಳಿದ್ದರು. ಇದೇ ವೇಳೆ ಜೆಡಿಎಸ್ ನ ಎಚ್.ಡಿ ಕುಮಾರಸ್ವಾಮಿ ಅವರ ವಿರುದ್ಧವು ವಾಗ್ದಾಳಿ ನಡೆಸಿದ್ದರು.
ಜೆಡಿಎಸ್‌ಗೆ ಆತಂಕ
ಇದಾದ ಬೆನ್ನಲ್ಲೇ ಈಗ ಮೋದಿ ಕರ್ನಾಟಕದ ಮಂಡ್ಯ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಪ್ರಧಾನಿಗಳಿಗೆ ಉಡುಗೊರೆಯಾಗಿ ಬೆಲ್ಲ ನೀಡಲಾಗುತ್ತಿದೆ. ಚುನಾವಣೆ ವೇಳೆ ಸಂಸದೇ ಜೊತೆಗೆ ಜೆಡಿಎಸ್ ನಾಯಕರು ತೆರಳದಂತೆ ರಣತಂತ್ರ ರೂಪಿಸಿರುವ ಜೆಡಿಎಸ್ ಗೆ ಜಿಲ್ಲೆಯಲ್ಲಿ ತಮ್ಮ ಪ್ರಾಬಲ್ಯ ದಿನೇ ದಿನೆ ಕುಸಿಯುವ ಆತಂಕ ಎದುರಾಗಿದೆ.

ಮಂಡ್ಯಕ್ಕೆ ಭೇಟಿ ನೀಡಿರುವ ಪ್ರಧಾನಮಂತ್ರಿಗಳು ಬೆಂಗಳೂರು ಮೈಸೂರು ದಶಪಥ ರಸ್ತೆಯನ್ನು ಉದ್ಘಾಟಿಸಲಿದ್ದಾರೆ. ಇದರೊಂದಿಗೆ ಹಲವು ಯೋಜನೆಗಳಿಗೆ ಅವರು ಶಂಕು ಸ್ಥಾಪನೆ ನೆರವೇರಿಸಿದರು. ಮಂಡ್ಯ ಜಿಲ್ಲೆಯು ಭಾನುವಾರು ಹೂಗಳು, ಕೇಸರಿ ಭಾವುಟಗಳಿಂದ ಸಿಂಗಾರಗೊಂಡಿತ್ತು.












Click it and Unblock the Notifications