ನಿಮಗೆ ಟಿಕೆಟ್ ಕೊಡುವುದು ಯಡಿಯೂರಪ್ಪ ಅನ್ನೋದು ಮರಿಯಬೇಡಿ: ಯತ್ನಾಳ್ ವಿರುದ್ದ ಬಿಎಸ್ವೈ ಆಪ್ತ ಕಿಡಿ
ಬೆಂಗಳೂರು, ಡಿಸೆಂಬರ್ 07: ಆಡಳಿತ ಪಕ್ಷ ಅದ ವಿರುದ್ಧ ಸಂಘರ್ಷ ಮಾಡಬೇಕು. ಯಡಿಯೂರಪ್ಪ ಮೇಲೆ, ರಾಜ್ಯಾಧ್ಯಕ್ಷ ಮೇಲೆ ಸಂಘರ್ಷ ಮಾಡಿದ್ರೆ ಪಕ್ಷ ವಿರೋಧಿ ಚಟುವಟಿಕೆ ಆಗುತ್ತೆ, ಹಾಗೆಯೇ ಬಿಜಾಪುರದಲ್ಲಿ ಟಿಕೆಟ್ ಕೊಡುವುದು ಯಡಿಯೂರಪ್ಪನ್ನೋದು ಮರಿಬಾರದು ಎಂದು ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರು ಯತ್ನಾಳ್ ವಿರುದ್ಧ ಟಾಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಎಂ ಪಿ ರೇಣುಕಾಚಾರ್ಯ, ಯತ್ನಾಳ್ ಬಗ್ಗೆ ನನಗೆ ಗೌರವ ಇದೆ. ವಾಜಪೇಯಿ ಸಚಿವ ಸಂಪುಟಗಳಲ್ಲಿ ಸಚಿವರಾಗಿದ್ದೆ ಅಂತ ಪದೇ ಪದೇ ಹೇಳ್ತಾರೆ. ಹಿಂದೆ ಸಚಿವರಾಗಿದ್ದು ಯಡಿಯೂರಪ್ಪ ಅವರ ಕೃಪಾಕಟಾಕ್ಷೆದಿಂದ, ಪಕ್ಷದಿಂದ ಉಚ್ಚಾಟನೆ ಆದಾಗ ಬಿಜೆಪಿಗೆ ಯತ್ನಾಳ್ ಅವರನ್ನು ತೆಗೆದುಕೊಳ್ಳಬೇಕು ಅಂತ ಹೇಳಿದ್ದು ಯಡಿಯೂರಪ್ಪ ಅವರು. ಯಡಿಯೂರಪ್ಪಗೆ ಯತ್ನಾಳ್ ಅವರನ್ನು ತೆಗೆದುಕೊಳ್ಳುವುದು ಬೇಡ ಅಂತ ಸಾಕಷ್ಟು ಜನ ಹೇಳಿದ್ರು.

ಯತ್ನಾಳ್ ಯಾಕೆ ಹೇಳ್ತಾರೆ ಗೊತ್ತಾಗ್ತಿಲ್ಲ. ನಮಗೂ ದೆಹಲಿಗೆ ಹೋಗಲು ಬರುತ್ತೆ, ನಮಗೂ ಮಾತಾಡೋಕೆ ಚನ್ನಾಗಿ ಬರುತ್ತೆ. ಯಾರ ವಿರುದ್ಧ ಸಂಘರ್ಷ? ಕಾಂಗ್ರೆಸ್ ವಿರುದ್ಧ ಸಂಘರ್ಷ ಮಾಡಬೇಕು, ಆಡಳಿತ ಪಕ್ಷದ ವಿರುದ್ಧ ಸಂಘರ್ಷ ಮಾಡಬೇಕು. ಯಡಿಯೂರಪ್ಪ ಮೇಲೆ, ರಾಜ್ಯಾಧ್ಯಕ್ಷ ಮೇಲೆ ಸಂಘರ್ಷ ಮಾಡಿದ್ರೆ ಪಕ್ಷ ವಿರೋಧಿ ಚಟುವಟಿಕೆ ಆಗುತ್ತೆ, ಪಕ್ಷಕ್ಕೆ ಬಿಟ್ಟವರನ್ನ ವಾಪಸ್ ಕರೆತಂದಿದ್ದು ಯಡಿಯೂರಪ್ಪ ಅವರು ಎಂದು ಯತ್ನಾಳ್ ವಿರುದ್ಧ ಕುಟುಕಿದರು.
ಅಲ್ಪಸಂಖ್ಯಾತರಿಗೆ ಸರ್ಕಾರ 10 ಸಾವಿರ ಕೋಟಿ ಘೋಷಣೆ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯ ಬಗ್ಗೆ ಬಹಳಷ್ಟು ಗೌರವ ಇದೆ. ಸಿಎಂ ಆದವರು ಎಲ್ಲಾ ಧರ್ಮದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಬಗ್ಗೆ ವಿಶೇಷ ಒಲವು ಹೊಂದಿದ್ದಾರೆ, ನಮಗೆ ಸಂಘರ್ಷ ಅವಶ್ಯಕತೆ ಇಲ್ಲ. ಸಿದ್ದರಾಮಯ್ಯ ಸಂಘರ್ಷಕ್ಕೆ ದಾರಿ ಮಾಡಿಕೊಡ್ತಿದ್ದಾರೆ, ಸಿದ್ದರಾಮಯ್ಯ ಅವರು ನಾನು ಕುಂಕುಮ ಹಚ್ಚಲ್ಲ, ಕೇಸರಿ ಟವಲ್,ಕೇಸರಿ ಪೇಟ ಹಾಕಲ್ಲ ಅಂತ ಹೇಳ್ತಾರೆ.

ನಿಮ್ಮ ಸಿದ್ದರಾಮಯ್ಯ ಹೆಸರಲ್ಲಿ ಸಿದ್ದರಾಮ ಎಂದು ಭಗವಂತನ ಹೆಸರಿಟ್ಟಿದ್ದಾರೆ. ಅಷ್ಟೊಂದು ಕಾಳಜಿ ಪ್ರೀತಿ ಇದ್ರೆ ನಿಮ್ಮ ಮನೆಯಿಂದ ಕೊಡಿ, ನೀವೇನ್ ದೇಶದ ಪ್ರಧಾನ ಮಂತ್ರಿನಾ..? ಸಿದ್ದರಾಮಯ್ಯ ಇದು ನಿಮ್ಮ ಆಸ್ತಿನಾ..? ಇಲ್ಲಿ ಪಾಕಿಸ್ತಾನ ಆಡಳಿತ ಮಾಡುತ್ತಾ..? ಇದನ್ನು ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಬೇಕು, ತಕ್ಷಣವೇ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು ಎಂದು ಎಂ ಪಿ ರೇಣುಕಾಚಾರ್ಯ ಅವರು ಆಗ್ರಹಿಸಿದರು.
ಸಿದ್ದರಾಮಯ್ಯ ಅವರೇ ರಾಜ್ಯದಲ್ಲಿ ಭೀಕರ ಬರಗಾಲ ಇದೆ. 30 ಸಾವಿರ ಕೋಟಿ ಹಣ ಬೇಕು, ನೀವು ಎಷ್ಟು ದುಡ್ಡು ಕೊಟ್ರಿ..? 2 ಸಾವಿರ ಕೊಡ್ತಿರಾ ಅಂತ ಹೇಳಿ ಹದಿನೈದು ಆಯ್ತು, ಇದುವರೆಗೆ ಬಿಡುಗಡೆ ಮಾಡಿಲ್ಲ. ಸಿದ್ದರಾಮಯ್ಯ ಅವರೇ ನೀವು ಹಣ ಕೊಡಲೇ ಬೇಕಾದರೇ ನಿಮ್ಮ ಆಸ್ತಿ ಮಾರಿ ಹಣ ಕೊಡಿ, ಬಹುಸಂಖ್ಯಾತ ಹಿಂದೂಗಳು ನಿಮ್ಮ ವಿರುದ್ಧ ತಿರುಗಿ ಬೀಳ್ತಾರೆ. ಈ ದೇಶದಲ್ಲಿ ಕೇವಲ ಮೂರು ರಾಜ್ಯದಲ್ಲಿ ಮಾತ್ರವೇ ಅಧಿಕಾರದಲ್ಲಿ ಇದೀರಾ. ಹೀಗೆ ಮಾಡಿದ್ರೆ ಮುಂದಿನ ಲೋಕಸಭಾ ಚುನಾವಣೆ ಮತ್ತೆ ತಿರಸ್ಕಾರ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಜಮೀರ್ ಏನ್ ಹೇಳ್ತಾರೆ, ಸಾಬಿಗೆ ತಲೆಬಾಗಬೇಕು ಅಂತಾರೆ. ಅದು ಪೀಠಕ್ಕೆ ತಲೆ ಬಾಗಬೇಕು, ನಿಮಗೆ ಪ್ರತಿಪಕ್ಷದ ಸ್ಥಾನಕ್ಕೆ ಅವಕಾಶ ಇಲ್ಲ. ಕೆಲವರು ವೋಟ್ ಗಾಗಿ ಸಿದ್ದರಾಮಯ್ಯ ಬೆಂಬಲ ನಿಲ್ತಾರೆ ನಾವು ಮುಸ್ಲಿಂ ವಿರೋಧಿಗಳ ಅಲ್ಲ. ಸಿದ್ದರಾಮಯ್ಯ ಅಕ್ಕಪಕ್ಕದಲ್ಲಿ ಭಯೋತ್ಪಾದಕರು ಕುಳಿತುಕೊಳ್ತಾರೆ, ಇದೊಂದು ತಾಜ ಉದಾಹರಣೆ. ದೇಶ ಬಿಟ್ಟು ಹೋಗ್ತಾರೆ ಅಂತಾರೆ, ಇದು ಭಯೋತ್ಪಾದಕರ ರಾಜ್ಯ ಮಾಡಲು ಯಾವುದೇ ಸಾಧ್ಯವಿಲ್ಲ. ಕರ್ನಾಟಕ ಶಾಂತಿ ಸುವ್ಯವಸ್ಥೆಗೆ ಹೆಸರಾಗಿದೆ, ಹೀಗೆ ಮಾಡಿದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನ ಆಗುತ್ತೆ ಎಂದು ಹೇಳಿದರು.












Click it and Unblock the Notifications