ನೀವು ಅರಕಲಗೂಡಿನಲ್ಲಿ ಸ್ಪರ್ಧೆ ಮಾಡಿದರೆ ಸೋಲುತ್ತಿರಾ ಅದಕ್ಕೆ Siddaramaiah ಅನೌನ್ಸ್ ಮಾಡಿಲ್ಲ: ಪ್ರಜ್ವಲ್ ರೇವಣ್ಣ
ಶಾಸಕ ಎ.ಟಿ ರಾಮಸ್ವಾಮಿ ವಿರುದ್ದ ಸಂಸದ ಪ್ರಜ್ವಲ್ ರೇವಣ್ಣ ತೀವ್ರ ವಾಗ್ದಾಳಿ ನಡೆಸಿದರು.
ಹಾಸನ, ಮಾರ್ಚ್ 18: ರಾಜ್ಯ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಪಕ್ಷದ ಅಬ್ಬರದ ಪ್ರಚಾರ ಒಂದು ಕಡೆಯಾದ್ರೆ ಇತ್ತ ಪ್ರಾದೇಶಿಕ ಪಕ್ಷ ಜೆಡಿಎಸ್ ನಿಂದ ಹಲವು ಜನ ಶಾಸಕರು ಈಗಾಗಲೇ ಅನ್ಯ ಪಕ್ಷಗಳತ್ತ ಮುಖ ಮಾಡಿದ್ದಾರೆ. ಹಾಸನ ಜಿಲ್ಲೆಯ ಅರಕಲುಗೂಡು ಶಾಸಕ ಎ ಟಿ ರಾಮಸ್ವಾಮಿ ಕಾಂಗ್ರೆಸ್ ಸೇರ್ಪಡೆಗೆ ಸಜ್ಜಾಗಿದ್ದು, ಸಂಸದ ಪ್ರಜ್ವಲ್ ರೇವಣ್ಣ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಹಾಸನ ಜಿಲ್ಲೆಯ ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಶುಕ್ರವಾರ ನಡೆದ ಪಂಚರತ್ನ ರಥಯಾತ್ರೆ ವೇಳೆ ಅರಕಲಗೂಡು ಹಾಲಿ ಶಾಸಕ ಎಟಿ ರಾಮಸ್ವಾಮಿ ವಿರುದ್ಧ ಕೆಂಡಮಂಡಲ ಸಂಸದ ಪ್ರಜ್ವಲ್ ರೇವಣ್ಣ, ನೀವು ಅರಕಲಗೂಡಿನಲ್ಲಿ ಸ್ಪರ್ಧೆ ಮಾಡಿದರೆ ಸೋಲ್ತಿರ ಅಂತ ಹಾಗಾಗಿ ಸಿದ್ದರಾಮಯ್ಯ ನಿಮ್ಮ ಹೆಸರನ್ನ ಅನೌನ್ಸ್ ಮಾಡಿಲ್ಲ.ಹಾಗಾಗಿ ಮತ್ತೆ ಜೆಡಿಎಸ್ ಪಕ್ಷವನ್ನ ಹತ್ತಿರಕ್ಕೆ ತೆಗೆದುಕೊಳ್ಳಬೇಕು ಅಂತ ದೇವೇಗೌಡರನ್ನ ಕರಿಸುವ ಕೆಲಸ ಮಾಡಿದ್ರಿ. ಆದರೆ ದೇವೇಗೌಡ್ರು ಎರಡು ವರ್ಷದಿಂದ ನಿಮಗೆ ಯಾಕೆ ನೆನಪಾಗಲಿಲ್ಲ ಸ್ವಾಮಿ ಎಂದು ವಾಗ್ದಾಳಿ ನಡೆಸಿದರು.
ಇನ್ನು ನಮ್ಮ ಪಕ್ಷ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಹೊರಟಾಗ ಎಲ್ಲಾ ನಾಯಕರನ್ನು ಭೇಟಿ ಮಾಡಿದ್ರಿ ಆದ್ರೂ ನಿಮಗೆ ಅರಕಲಗೂಡು ಕ್ಷೇತ್ರದಲ್ಲಿ ಟಿಕೆಟ್ ಅನೌನ್ಸ್ ಮಾಡಿಲ್ಲ ಯಾಕ್ ಗೊತ್ತಾ? ಕಾಂಗ್ರೆಸ್ ಪಕ್ಷದ ರಿಪೋರ್ಟ್ ಹೇಳುತ್ತಿದೆಯಂತೆ ನೀವು ಅರಕಲಗೂಡಿನಲ್ಲಿ ಸ್ಪರ್ಧೆ ಮಾಡಿದರೆ ಸೋಲ್ತಿರ ಅಂತ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ದೇವಸ್ಥಾನದ ಉದ್ಘಾಟನೆಗೆ ಬಂದಾಗ ನೀವು ಆ ವೇದಿಕೆಯನ್ನು ಹಂಚಿಕೊಳ್ಳದೆ ಯಾಕೆ ದೂರ ಉಳಿದಿರಿ ಎಂಬ ಪ್ರಶ್ನೆ ಮಾಡಿದ ಅವರು, ಎರಡು ವರ್ಷದ ಹಿಂದೆಯೇ ಪಕ್ಷ ಬಿಟ್ಟು ಕಾಂಗ್ರೆಸ್ ಹೋಗ್ತೀನಿ ಅಂತ ಇಡೀ ಅರಕಲಗೂಡು ಜನತೆಗೆ ಗೊತ್ತು. ಆದರೆ ನಾವು ಈ ಮಾತಿಗೆ ಕಿವಿಗೊಡದೆ ಸುಮ್ನಿದ್ದು, ಯಾಕೆಂದರೆ ಎ ಟಿ ರಾಮಸ್ವಾಮಿ ಅಂದ್ರೆ ನಂಬಿಕೆ ಅಂತ. ನಂಬಿಕೆಯನ್ನು ಕಳೆದುಕೊಂಡು ಇವತ್ತು ಪಕ್ಷ ಬಿಟ್ಟಿದ್ದೀರಿ ಸಂತೋಷವಾಗಿ ಹೋಗಿ ಬನ್ನಿ ಎಂದು ಬಹಳ ಖಾರವಾಗಿಯೇ ನುಡಿದರು.
ಜೆಡಿಎಸ್ ಪಕ್ಷವನ್ನ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಹೊರಟಿದ್ದೀರಿ ನೀವು ಕಾಂಗ್ರೆಸ್ ಪಕ್ಷಕ್ಕೆ ಹೋಗಿ ನಮಗೇನು ಬೇಸರ ಇಲ್ಲ ಆದರೆ ವೈಯಕ್ತಿಕವಾಗಿ ನಾವು ಮಾತನಾಡುವ ಹಾಗೆ ಮಾಡಿಕೊಳ್ಳಬೇಡಿ. ಇಷ್ಟು ಮಾತಾಡಬೇಕಾದ್ರೆ ನೀವು ನನ್ನ ಬಗ್ಗೆ ಮಾತಾಡಿದ್ದಕ್ಕೆ ನಾನು ಮಾತನಾಡಿದ್ದೇನೆ ನಾನು ಯಾರಿಗೂ ಹೆದರುವ ಅವಶ್ಯಕತೆ ಇಲ್ಲ ಇವತ್ತು ನನ್ನನ್ನು ಯಾರಾದ್ರೂ ಗೆಲ್ಸಿದ್ರೆ ಅದು ಅರಕಲಗೂಡು ಕ್ಷೇತ್ರ ಮತ್ತು ಹಾಸನ ಜಿಲ್ಲೆಯ ಜನರು ಎಂದು ಎ.ಟಿ ರಾಮಸ್ವಾಮಿ ವಿರುದ್ದ ಕಿಡಿಕಾರಿದರು.
ಯಾವ ಪಕ್ಷವನ್ನ ಬಿಡುತ್ತಿರುವ ನಿಮಗೆ ನಾವು ಯಾವುದೇ ಕಾರಣಕ್ಕೂ ನಿಮ್ಮನ್ನ ಉಳಿಸಿಕೊಳ್ಳುವ ಸಾಹಸ ಮಾಡೋಲ್ಲ ಎರಡು ವರ್ಷದಿಂದ ನಮ್ಮ ಪಕ್ಷದ ಮೇಲೆ ನಿಮಗೆ ಯಾವ ಪ್ರೀತಿಯು ಇಲ್ಲ ಜೊತೆಗೆ ನಮ್ಮ ಕಾರ್ಯ ಕರ್ತರು ಮೇಲು ನಿಮಗೆ ಪ್ರೀತಿ ಇಲ್ಲ. ನಮ್ಮ ಪಕ್ಷ ಶಾಸಕರಾಗಿ ನಮ್ಮ ಪಕ್ಷದ ಕಾರ್ಯಕರ್ತರಿಗೆ ಮೋಸ ಮಾಡಿದ್ದೀರಾ. ನೀವು ಕಾಮಗಾರಿಯನ್ನು ಹಂಚಿಕೆ ಮಾಡುವಾಗ ನಮ್ಮ ಕಾರ್ಯಕರ್ತರನ್ನ ಹೊರತುಪಡಿಸಿ ಕಾಂಗ್ರೆಸ್ ಕಾರ್ಯಕರ್ತರಿಗೆ ಹಂಚುವ ಕೆಲಸ ಮಾಡಿದ್ದೀರಾ ಎಂದು ಆರೋಪಿಸಿದರು.
ನೀವು ಚುನಾವಣೆ ಸಂದರ್ಭದಲ್ಲಿ ಸಾಕಷ್ಟು ಕಷ್ಟದಲ್ಲಿದಾಗ ನಮ್ಮ ಕಾರ್ಯಕರ್ತರು ನಿಮಗೆ ಆರ್ಥಿಕವಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಸಹಾಯದಿಂದಲೇ ನೀವು ಗೆದ್ದು ಶಾಸಕರಾದ್ರಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅರಕಲಗೂಡಿಗೆ ಬಂದು ಎರಡು ಅದ್ಭುತ ಕಾರ್ಯಕ್ರಮಗಳನ್ನು ಕೊಟ್ಟರು. ನೀವು ಇವತ್ತ ಪಕ್ಷ ನಿಟ್ಟು ಹೋಗಿ ನಾವು ಬೇಡ ಎನ್ನುವುದಿಲ್ಲ. ಆದರೆ ಯಾವುದೇ ಕಾರಣಕ್ಕೂ ಕಾರ್ಯಕರ್ತರ ಮೇಲೆ ಗೂಬೆ ಕುರಿಸುವ ಕೆಲಸ ಮಾಡಬೇಡಿ ಎಂದು ಕಿಡಿಕಾರಿದರು.












Click it and Unblock the Notifications