ಬಿಜೆಪಿ ಎರಡನೇ ಪಟ್ಟಿ ರಿಲೀಸ್;‌ ಹಾಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಕೈತಪ್ಪಿದ ಟಿಕೆಟ್:‌ ಕಾರಣವೇನು?

ಬೆಂಗಳೂರು, ಏಪ್ರಿಲ್12:‌ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಮತ್ತೆ ಅಧಿಕಾರಕ್ಕೆ ಬರಲು ಪಣ ತೊಟ್ಟಿರುವ ಬಿಜೆಪಿ ಹೈಕಮಾಂಡ್‌ ಮಂಗಳವಾರ ರಾತ್ರಿ 224 ಕ್ಷೇತ್ರಗಳ ಪೈಕಿ 189 ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿತ್ತು.

ಹಾಲಿ ಶಾಸಕರಾದ ರಘುಪತಿ ಭಟ್, ಗೂಳಿಹಟ್ಟಿ ಶೇಖರ್, ಲಕ್ಷ್ಮಣ ಸವದಿ, ಆರ್.ಶಂಕರ್ ಸೇರಿದಂತೆ ಹಲವರು ರಾಜ್ಯ ಬಿಜೆಪಿ ನಾಯಕರಿಗೆ ಬಂಡಾಯದ ಬಿಸಿ ಮುಟ್ಟಿಸಿದ್ದಾರೆ. ಯಾವ ಕ್ಷಣದಲ್ಲೂ ಬೇಕಾದರೂ ಬಿಜೆಪಿ ತೊರೆಯೋ ಎಚ್ಚರಿಕೆ ನೀಡಿದ್ದಾರೆ. ಇದರ ಮಧ್ಯೆ ಉಳಿದ 23 ಕ್ಷೇತ್ರಗಳ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಜೆಪಿ ಹೈಕಮಾಂಡ್‌ ರಿಲೀಸ್ ಮಾಡಿದೆ.

MP Kumaraswamy Missed Mudigere BJP Ticket

ಇಂದು(ಬುಧವಾರ) ಬಾಕಿ ಉಳಿಸಿಕೊಂಡ 35 ಕ್ಷೇತ್ರಗಳಲ್ಲಿ 23 ಕ್ಷೇತ್ರಗಳ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಈಗಾಗಲೇ ಮೊದಲ ಪಟ್ಟಿಯಲ್ಲಿ 52 ಹೊಸ ಮುಖಗಳಿಗೆ ಟಿಕೆಟ್‌ ಕೊಟ್ಟಿರುವ ಬಿಜೆಪಿ ಹೈಕಮಾಂಡ್‌ ಮೊದಲ ಪಟ್ಟಿಯಲ್ಲಿ ಹಲವು ಹಾಲಿ ಶಾಸಕರಿಗೆ ಟಿಕೆಟ್‌ ನೀಡದೆ ಹೊಸ ಮುಖಗಳನ್ನ ಚುನಾವಣಾ ಕಣಕ್ಕಿಳಿಸಿದ್ದು, ಎರಡನೇ ಪಟ್ಟಿಯಲ್ಲಿ ಮೂಡಿಗೆರೆ ಕ್ಷೇತ್ರದಿಂದ ದೀಪಕ್ ದೊಡ್ಡಯ್ಯ ಅವರನ್ನ ಕಣಕ್ಕಿಳಿಸಿದ್ದು, ಹಾಲಿ ಶಾಸಕರಾದ ಹೆಚ್‌ ಕೆ ಕುಮಾರಸ್ವಾಮಿ ಅವರಿಗೆ ಟಿಕೆಟ್‌ ಕೈ ತಪ್ಪಿದೆ.

ಟಿಕೆಟ್‌ ಕೈ ತಪ್ಪಲು ಕಾರಣವೇನು?

ಮೂಡಗಿರಿಯ ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ ಅವರ ವಿರುದ್ದ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಹೆಚ್ಚಾಗಿದೆ ಎನ್ನಲಾಗಿದ್ದು, ಸ್ಥಳೀಯ ಬಿಜೆಪಿ ನಾಯಕರಿಂದಲೇ ಸಾಕಷ್ಟು ವಿರೋಧಗಳು ಕೇಳಿ ಬಂದಿದ್ದು, ಮುಂದಿನ ದಿನಗಳಲ್ಲಿ ಕ್ಷೇತ್ರ ಉಳಿಸಿಕೊಳ್ಳಬೇಕಾದರೇ ಮೊದಲ ಅಭ್ಯರ್ಥಿಯನ್ನ ಬದಲಾವಣೆ ಮಾಡಿ ಎಂದು ಬಿಜೆಪಿ ಸ್ಥಳೀಯ ನಾಯಕರು ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.

ಇನ್ನೂ ಚೆಕ್ ಗಳು ಬೌನ್ಸ್ ಪ್ರಕರಣದಲ್ಲಿ ಸಾಕಷ್ಟು ಡ್ಯಾಮೇಜ್‌ ಆಗಿದ್ದು, ಮೂಡಗಿರಿಯ ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ ಅವರು ಹೂವಪ್ಪ ಗೌಡ ಎಂಬುವವರಿಂದ 1.35 ಕೋಟಿ ರೂ ಸಾಲ ಪಡೆದಿದ್ದರು. ಈ ಹಣವನ್ನ ಪಾವತಿ ಮಾಡುವ ಸಂಬಂಧ ಎಂ.ಪಿ ಕುಮಾರಸ್ವಾಮಿ ಅವರು 8 ಚೆಕ್ ಗಳನ್ನ ನೀಡಿದ್ದರು. ಆದರೆ ಈ ಚೆಕ್ ಗಳು ಬೌನ್ಸ್ ಆಗಿತ್ತು. ಈ ಹಿಂದೆ ಕೊಡಬೇಕಾದ ಹಣವನ್ನ ಬಾಕಿ ಉಳಿಸಿಕೊಂಡು ಕಿರಿಕಿರಿ ಮಾಡುತ್ತಿದ್ದರು ಎನ್ನಲಾಗಿದ್ದು, ಇದರಿಂದ ಬೇಸತ್ತ ಹೂವಪ್ಪ ಗೌವಡ ಅವರು ಕೋರ್ಟ್ ಮೆಟ್ಟಿಲೇರಿದ್ದರು. ಇದು ಸಹ ಒಂದು ಕಾರಣ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+