ರಾಮಮಂದಿರ ಚುನಾವಣಾ ಗಿಮಿಕ್: ಅಶ್ವತ್ಥ ನಾರಾಯಣ ಗೆ ತಿರುಗೇಟು ಕೊಟ್ಟ ಡಿ ಕೆ ಸುರೇಶ್
ರಾಮಮಂದಿರದ ಜೊತೆಗೆ ಅವರ ಕನಸ್ಸಿನಲ್ಲಿ ಬರೋ ಎಲ್ಲಾ ದೇವರುಗಳ ಮಂದಿರ ಕಟ್ಟಲಿ ಎಂದು ಸಚಿವ ಅಶ್ವತ್ಥ ನಾರಾಯಣ್ ಗೆ ಸಂಸದ ಡಿ.ಕೆ.ಸುರೇಶ್ ತಿರುಗೇಟು ನೀಡಿದ್ದಾರೆ.
ರಾಮನಗರ,ಫೆಬ್ರವರಿ21: ಬಿಜೆಪಿಯವರಿಗೆ ಚುನಾವಣೆಗೋಸ್ಕರ ರಾಮ ಇವತ್ತಿನಿಂದ ಪರಿಚಯ. ಇದು ಕೇವಲ ಚುನಾವಣೆ ಗಿಮಿಕ್ ಎಂದು ಬಿಜೆಪಿ ವಿರುದ್ದ ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಬಜೆಟ್‌ನಲ್ಲಿ ರಾಮನಗರದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಘೋಷಣೆಯಾಗಿದೆ. ಅಶ್ವತ್ಥ ನಾರಾಯಣ್ ಬಂದು ರಾಮಮಂದಿರ ಕಟ್ಟಲಿ. ಬಿಜೆಪಿಯವರಿಗೆ ಚುನಾವಣೆಗೋಸ್ಕರ ರಾಮ ಇವತ್ತಿನಿಂದ ಪರಿಚಯ. ನಮ್ಮ ತಂದೆ ಕಾಲದಿಂದಲೂ ನಾವು ರಾಮನನ್ನ ಪೂಜಿಸುತ್ತೇವೆ, ಕಸಗುಡಿಸೋಕೆ ಬಂದವರ ಹತ್ತಿರ ನಾವು ಮಾತಮಾಡಲ್ಲ. ರಾಮನ ಪೂಜೆ ಮಾಡುವವರು ಪಬ್ಲಿಕ್ ನಲ್ಲಿ ಹೇಳ್ಕೊಂಡು ತಿರುಗಲ್ಲ.ದೇವರು ಪೂಜೆ ಮಾಡೋದನ್ನ ವೈಭವೀಕರಿಸಿಕೊಳ್ಳಲ್ಲ. ಚುನಾವಣೆ ಹತ್ತಿರ ಬಂದಾಗ ಹೀಗೆ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.
ರಾಮಮಂದಿರಕ್ಕೆ ಜಾಗ ಗುರುತಿಸಿದ್ದಾರಾ ? ವಿನ್ಯಾಸ ಆಗಿದ್ಯಾ, ಬಜೆಟ್‌ನಲ್ಲಿ ಹಣ ಇಟ್ಟಿದ್ದಾರಾ.? ಸುಮ್ಮನೆ ಮಾತನಾಡುತ್ತಾರೆ. ರಾಮನ ದೇವಸ್ಥಾನನಾದ್ರೂ ಕಟ್ಟಲಿ, ಹನುಮಂತನ ದೇವಸ್ಥಾನ ಕಟ್ಟಲಿ, ಲಕ್ಷ್ಮಿ ದೇವಸ್ಥಾನ ಕಟ್ಟಲಿ. ಜಿಲ್ಲೆಯಲ್ಲಿ ಹಲವು ಕಡೆ ಬೆಟ್ಟ, ದೇವಾಲಯ ಇದೆ. ಎಲ್ಲಕಡೆನೂ ಬಂದು ದೇವಾಲಯ ಕಟ್ಟಲಿ, ನಾವೂ ಬೆಂಬಲ ಕೊಡ್ತಿವಿ. ಅವರು ದೇವಸ್ಥಾನ ಕಟ್ಟುತ್ತೇವೆ ಅಂದ್ರೆ ನಾವು ಬೇಡ ಅನ್ನೋಕಾಗುತ್ತಾ? ಎಂದು ಪ್ರಶ್ನಿಸಿದ್ದಾರೆ.

ಅಶ್ವತ್ಥ ನಾರಾಯಣ್ ಒಂದು ದೇವಸ್ಥಾನನಾದ್ರೂ ಕಟ್ಟಿದ್ದಾನಾ.? ಸುಮ್ಮನೆ ನಾಟಕ ಮಾಡ್ಕೊಂಡ್ ಪ್ರಚಾರ ತೆಗೆದುಕೊಳ್ಳುತ್ತಾರೆ. ಜಿಲ್ಲೆಯನ್ನ ಕ್ಲೀನ್ ಮಾಡ್ತೀನಿ ಅಂದ್ರು, ಮಾಡಿದ್ರಾ.? ಈಗ ಚುನಾವಣೆಗೋಸ್ಕರ ಇದನ್ನೆಲ್ಲ ಮಾಡುತ್ತಿದ್ದಾರೆ. ರಾಮಮಂದಿರದ ಜೊತೆಗೆ ಅವರ ಕನಸ್ಸಿನಲ್ಲಿ ಬರೋ ಎಲ್ಲಾ ದೇವರುಗಳ ಮಂದಿರ ಕಟ್ಟಲಿ ಎಂದು ಸಚಿವ ಅಶ್ವತ್ಥ ನಾರಾಯಣ್ ಗೆ ಸಂಸದ ಡಿ.ಕೆ.ಸುರೇಶ್ ತಿರುಗೇಟು ನೀಡಿದ್ದಾರೆ.
ಯಾವ ನಂಬಿಕೆ ಮೇಲೆ ಅವರಿಗೆ ಮತ ನೀಡುತ್ತಿರಾ ಎಂಬ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿ, ಕುಮಾರಸ್ವಾಮಿ ಅವರ ಸರ್ಟಿಫಿಕೇಟ್ ನಮಗೆ ಬೇಕಾಗಿಲ್ಲ. ಜನರ ಸರ್ಟಿಫಿಕೇಟ್ ಗಾಗಿ ನಾವು ಓಡಾಟ ಮಾಡ್ತಿದ್ದೀವಿ. ಈ ಜಿಲ್ಲೆಯಲ್ಲಿ ಕುಮಾರಸ್ವಾಮಿ ಅವರಿಗೆ ಎರಡು ಬಾರಿ ಅವಕಾಶ ಕೊಟ್ಟಿದ್ದೀರಾ. ನಮಗೂ ಒಂದು ಬಾರಿ ಅವಕಾಶ ಕೊಡಿ ಅಂತ ಕೇಳ್ತಿದ್ದೀವಿ, ಜನ ತೀರ್ಮಾನ ಮಾಡ್ತಾರೆ.

ಇಡಿ ಅಧಿಕಾರಿಗಳಿಗೆ ಏನಾದ್ರೂ ಹೇಳಬೇಕು ಅಂದ್ರೆ ಕುಮಾರಸ್ವಾಮಿ ಹೇಳಲಿ. ನನಗೆ ಬಿಜೆಪಿ ಸಂಪರ್ಕ ಇಲ್ಲ, ಸಂಪರ್ಕ ಇದ್ದವರು ಹೇಳಿದ್ರೆ ಅರ್ಥ ಆಗುತ್ತೆ ಎಂದು ಹೆಚ್ಡಿಕೆಗೆ ತಿರುಗೇಟು ನೀಡಿದರು.
ಮುನಿರತ್ನ ಅವರು ಬಹಳ ದೊಡ್ಡ ನಾಯಕರು.ಮುನಿರತ್ನ ಅವರ ಮೇಲೆ ಬಿಜೆಪಿ ನಾಯಕರು ಒಂದಷ್ಟು ಆರೋಪ ಮಾಡಿದ್ದಾರೆ. ಒಂದು ಓಟರ್ ಐಡಿ ಪ್ರಕರಣ, ಇನ್ನೂ ಕೂಡ ಕೋರ್ಟ್ ನಲ್ಲಿದೆ.
ಈ ಆರೋಪ ಮಾಡಿರುವುದು ಕಾಂಗ್ರೆಸ್ ನವರಲ್ಲಾ, ಬಿಜೆಪಿ ಪಕ್ಷದ ಪರಿಷತ್ ಸದಸ್ಯರು. ಇನ್ನೊಬ್ಬರು ಬೋರ್ವೆಲ್ ಕಳ್ಳ ಅಂತ ಇಡಿ ದೂರು ಕೊಟ್ಟಿದ್ರು. ಇಡೀ ಕ್ಷೇತ್ರದಲ್ಲಿ ಇಡಿ ಅಧಿಕಾರಿಗಳು ತನಿಖೆ ಮಾಡ್ತಿದ್ದಾರೆ. ಮೊದಲು ಅದರ ಬಗ್ಗೆ ಬಿಜೆಪಿಯಲ್ಲಿ ಮಾತನಾಡಲಿ ಎಂದು ಹೇಳಿದರು.












Click it and Unblock the Notifications