ಚಕ್ರವರ್ತಿ ಸೂಲಿಬೆಲೆ ಬೆನ್ನಿಗೆ ಭುಜಕೊಡುವ ಶಕ್ತಿ ಜೀವಂತವಿದೆ: ಕಾಂಗ್ರೆಸ್‌ಗೆ ನಟ ಜಗ್ಗೇಶ್ ತಿರುಗೇಟು
ಬೆಂಗಳೂರು, ಜೂನ್ 05: ಚಿಂತಕ ಮತ್ತು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮತ್ತು ಬಿಜೆಪಿ ವಿರುದ್ಧ ಹೇಳಿಕೆ ನೀಡಿದ್ದ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಗೆ ಸಂಸದ ಮತ್ತು ನಟ ನವರಸನಾಯಕ ಜಗ್ಗೇಶ್ ಅವರು ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ಎಂ.ಬಿ.ಪಾಟೀಲ್ ವಾಗ್ದಾಳಿ ನಡೆಸಿದ್ದರು. ಈ ಕುರಿತು ಟ್ವೀಟ್ ಮಾಡಿರುವ ಸಂಸದ ಮತ್ತು ನಟ ನವರಸನಾಯಕ ಜಗ್ಗೇಶ್ ಅವರು, ಸೂಲಿಬೆಲಿ ರವರು ಯಾವ ಅಧಿಕಾರದ ಹಿಂದೆ ಹೋಗದೆ ಸಾಂಸ್ಕೃತಿಕ ತತ್ವ ವಿಚಾರ,ಕೆರೆಕಟ್ಟೆ ಪುನರ್ಜೀವನ, ಪ್ರವಚನದಂತ ಸಾತ್ವಿಕ ಚಿಂತಕರು. ಅಧಿಕಾರ ಹಿಡಿದು ತಿಂಗಳು ಕಳೆದ ಕಾಂಗ್ರೆಸ್‌ನ ಸಚಿವ ಎಂ.ಬಿ.ಪಾಟೀಲ್ ಅವರು ಜೈಲಿಗೆ ಹಾಕುವೆ ಎಂದಿದ್ದಾರೆ.

ಇಲ್ಲಿಗೆ ಗೆದ್ದು ತಿಂಗಳಿಗೆ ಈ ಮಾತು ಸಚಿವರಾದ ಎಂ.ಬಿ. ಪಾಟೀಲ್ ಬಾಯಲ್ಲಿ ಬಂದಿದೆ. ಮಾನ್ಯರೆ ಕಾನೂನು ನಿಮ್ಮ ಜೇಬಲ್ಲಿ ಇದೆಯ? ಎಂದು ಪ್ರಶ್ನಿಸಿದ್ದಾರೆ. ಚಕ್ರವರ್ತಿ ಸೂಲಿಬೆಲೆ ಅವರ ಬೆನ್ನಿಗೆ ಕೋಟಿ ಸಂಖ್ಯೆಯ ಭುಜಕೊಡುವ ಶಕ್ತಿ ಜೀವಂತವಿದೆ ಎನ್ನುವ ಮೂಲಕ ಕಾಂಗ್ರೆಸ್‌ಗೆ ಸಂಸದರು ತಿರುಗೇಟು ನೀಡಿದ್ದಾರೆ.
ಸೂಲಿಬೆಲಿ ರವರು ಯಾವ ಅಧಿಕಾರದ ಹಿಂದೆ ಹೋಗದೆ ಸಾಂಸ್ಕೃತಿಕ ತತ್ವ ವಿಚಾರ,ಕೆರೆಕಟ್ಟೆ ಪುನರ್ಜೀವನ,ಪ್ರವಚನದಂತ ಸಾತ್ವಿಕ ಚಿಂತಕ ಅವರನ್ನು ಜೈಲಿಗೆ ಹಾಕುವೆ ಎಂದರೆ ಅಲ್ಲಿಗೆ ಗೆದ್ದು ತಿಂಗಳಿಗೆ ಈ ಮಾತು ಸನ್ಮಾನ್ಯ MBಪಾಟೀಲ್ ಬಾಯಲ್ಲಿ!
— ನವರಸನಾಯಕ ಜಗ್ಗೇಶ್ (@Jaggesh2) June 5, 2023
ಮಾನ್ಯರೆ ಕಾನೂನು ನಿಮ್ಮ ಜೇಬಲ್ಲಿ ಇದೆಯ?ಕೋಟಿ ಸಂಖ್ಯೆಯ ಭುಜಕೊಡುವ ಶಕ್ತಿ ಜೀವಂತವಿದೆ ಅವರ ಬೆನ್ನಿಗೆ!
ಇತ್ತೀಚೆಗೆ ತವರು ಜಿಲ್ಲೆ ವಿಜಯಪುರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಜನರ ಭಾವನೆ ಕೆರಳಿಸುವ ಪ್ರಯತ್ನ ನಡೆಯಿತೇ ಹೊರತು, ಜನರ ಬದುಕು ಕಟ್ಟಿಕೊಡುವ ಕೆಲಸ ಆಗಲಿಲ್ಲ. ಅಭಿವೃದ್ಧಿ ಕೆಲಸವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಅಷ್ಟೇ ಅಲ್ಲದೇ ಚಕ್ರವರ್ತಿ ಸೂಲಿಬೆಲೆ ಮತ್ತು ಸಂಘ ಪರಿವಾರದವರು ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಹಿಜಾಬ್, ಹಲಾಲ್ ಕಟ್, ಆಜಾನ್ ಸೇರಿದಂತೆ ಪಠ್ಯಪುಸ್ತಕದಲ್ಲಿ ಮಾಡಿರುವ ಅನಾಹುತವನ್ನು ಸರಿಪಡಿಸವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡಲಿದೆ. ಕೋಮು ಸೌಹಾರ್ದತೆ ಕದಡಿದರೆ ಚಕ್ರವರ್ತಿ ಸೂಲಿಬೆಲೆ ಜೈಲು ಕಂಬಿ ಎಣಿಸಬೇಕಾಗುತ್ತದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.












Click it and Unblock the Notifications