ತಾಯಿಯ ಜೀವಕ್ಕೆ ಕುತ್ತಾದ ವಿಚಿತ್ರ ಮಗುವಿನ ಜನನ!

Posted By:
Subscribe to Oneindia Kannada

ಚಾಮರಾಜನಗರ, ಜುಲೈ 15 : ಮೂಗು ಬಾಯಿ ಸೇರಿದಂತೆ ಒಂದೇ ನಾಳ ಹೊಂದಿದ್ದ ವಿಚಿತ್ರ ಮಗುವಿಗೆ ಜನ್ಮನೀಡಿದ್ದ ತಾಯಿ ಅದನ್ನು ನೋಡಿ ಆಘಾತದಿಂದ ಸಾವನ್ನಪ್ಪಿದ ಘಟನೆ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟ ತಪ್ಪಲಿನ ಸೋಲಿಗರ ಹಾಡಿಯಲ್ಲಿ ಮಂಗಳವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅಲ್ಲಿನ ಭೂತಾಣಿ ಪೋಡಿನ ಸೋಲಿಗ ಮಹಿಳೆ ಮಾದಮ್ಮ ಎಂಬಾಕೆಯೇ ವಿಚಿತ್ರ ಮಗುವಿನಗೆ ಜನ್ಮ ನೀಡಿ ಕೊನೆಯುಸಿರೆಳದೆ ದುರ್ದೈವಿ ತಾಯಿ.[ಚಾಮರಾಜನಗರ : ವಾಕಿಂಗ್ ಹೊರಟವರಿಗೆ ಸಾವು ತಂದ ವಾಹನ]

Mother dies after giving birth to child with deformity

ಮಾದಮ್ಮಳ ವಿವಾಹ ರಕ್ತಸಂಬಂಧದಲ್ಲೇ ರಂಗೇಗೌಡ ಅಲಿಯಾಸ್ ರಾಜಕುಮಾರ್ ಎಂಬಾತನ ಜತೆ ಕಳೆದ 28 ವರ್ಷಗಳ ಹಿಂದೆ ಮದುವೆಯಾಗಿತ್ತು. ಈ ದಂಪತಿಗೆ ಇಬ್ಬರು ಹೆಣ್ಣು ಮತ್ತು ಇಬ್ಬರು ಗಂಡುಮಕ್ಕಳಿದ್ದು, ಮೊದಲ ಮಗು ಕಾಲು ಸ್ವಾಧೀನ ಕಳೆದುಕೊಂಡಿದೆ.

ಕೂಲಿ ಕೆಲಸ ಮಾಡಿ ಬದುಕುವ ಈ ಕುಟುಂಬಗಳಿಗೆ ಸದಾ ಕಷ್ಟದ ಬದುಕು. ಆದರೆ ಅರಣ್ಯದ ನಡುವೆ ಇರುವ ಪೋಡಿಗೆ ಯಾರೂ ಭೇಟಿ ನೀಡಿ ಅರಿವು ಮೂಡಿಸದ ಕಾರಣ ಜನನ ನಿಯಂತ್ರಣ ಶಸ್ತ್ರಚಿಕಿತ್ಸೆ ಮಾಡದೆ ಮತ್ತೆ ಮಾದಮ್ಮ ಐದನೇ ಬಾರಿಗೆ ಗರ್ಭ ಧರಿಸಿದ್ದಳು. ಜುಲೈಗೆ ತಿಂಗಳು ತುಂಬಿತ್ತು. ಅದು ಹೆರಿಗೆಯ ಸಮಯ ಆದರೆ ರಂಗಮ್ಮ ಎಂಬಾಕೆ ಹೊರತು ಪಡಿಸಿದರೆ ಮತ್ತೆ ಯಾರೂ ಮನೆಯಲ್ಲಿ ಇರಲಿಲ್ಲ.[ಚಾಮರಾಜನಗರದಲ್ಲಿ ಸಿನಿಮೀಯ ರೀತಿಯಲ್ಲಿ ಕೊಲೆ ಯತ್ನ]

Mother dies after giving birth to child with deformity

ಮಂಗಳವಾರ ಮಧ್ಯಾಹ್ನ 12 ಗಂಟೆ ವೇಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಹೆರಿಗೆಯೂ ಆಗಿದೆ. ಆದರೆ ಮಗು ವಿಚಿತ್ರವಾಗಿ ಹುಟ್ಟಿದ್ದು ಅದನ್ನು ನೋಡಿದ ತಾಯಿ ಮಾದಮ್ಮನಿಗೆ, ಅಯ್ಯೋ ಇಂಥ ಮಗು ಹುಟ್ಟಿ ಬಿಡ್ತಲ್ಲ ಏನು ಮಾಡೋದು ಎಂಬ ಆಘಾತವಾಗಿದ್ದು, ಆ ನೋವಲ್ಲೇ ಹೃದಯಾಘಾತವಾಗಿ ಪ್ರಾಣವೂ ಹೋಗಿದೆ.[ಮಲೆಮಹದೇಶ್ವರ ಬೆಟ್ಟದಲ್ಲಿ ಅಕ್ರಮ ಟ್ರೆಕ್ಕಿಂಗ್, ನಾಲ್ವರ ಬಂಧನ]

ಸದ್ಯ ಮಗು ಜೀವಂತವಾಗಿದ್ದು, ತಾಯಿಯಿಲ್ಲದೆ ಅನಾಥವಾಗಿದೆ. ಉಳಿದ ಮಕ್ಕಳು ಕೂಡ ಅನಾಥವಾಗಿದ್ದಾರೆ. ಸಂಬಂಧಿಕರಿಗೆ ಈ ವಿಚಿತ್ರ ಮಗುವನ್ನು ಹೇಗೆ ಸಾಕುವುದು ಎಂಬ ಚಿಂತೆ ಕಾಡತೊಡಗಿದೆ. ಸಂಬಂಧಿಸಿದವರು ಇತ್ತ ಗಮನಹರಿಸುವುದು ಅಗತ್ಯವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A mother died with shock after giving birth to her 5th child with deformity. Child's Esophagus and Trachea both are same. Woman had married to a person in relation only. She already has four kids.
Please Wait while comments are loading...