Dengue: ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಡೆಂಗ್ಯೂ ಸೊಳ್ಳೆ: ಆತಂಕ ಹೆಚ್ಚಿಸಿದ ಝುಯಿ.... ಝುಯಿ... ಶಬ್ದ!
ಬೆಂಗಳೂರು ಜೂನ್ 28: ಈಗಿನ್ನು ಮಳೆಗಾಲ ಶುರುವಾಗಿದೆ. ಅದಾಗಲೇ ರಾಜ್ಯದಲ್ಲಿ ಡೆಂಗ್ಯೂ ಸೊಳ್ಳೆ ಹೆಚ್ಚಾಗುತ್ತಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿದೆ. ಇದರಿಂದ ಜನ ನಿದ್ದೆಗೆಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಹಿರಿಯರು ಹಾಗೂ ಮಕ್ಕಳು ಇರುವ ಮನೆಯಲ್ಲಿ ಡೆಂಗ್ಯೂ ಸೊಳ್ಳೆ ಬಗ್ಗೆ ಭಯ ಹೆಚ್ಚಾಗಿದೆ. 2022ರಲ್ಲಿ ಇಡೀ ವರ್ಷಕ್ಕೆ 2335 ಡೆಂಗ್ಯೂ ಕೇಸ್‌ಗಳು ಪತ್ತೆಯಾಗಿದ್ದವು. ಆದರೆ, 2023ರಲ್ಲಿ 11,136 ಕೇಸ್‌ಗಳು ಪತ್ತೆಯಾಗಿದ್ದವು. 2024 ಜನವರಿಯಿಂದ ಜೂನ್ ತಿಂಗಳವರೆಗೆ 1530 ಡೆಂಗ್ಯೂ ಕೇಸ್‌ಗಳು ದಾಖಲಾಗಿವೆ. ಇದರಿಂದಾಗಿ ಬೆಂಗಳೂರಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ ಸೊಳ್ಳೆಗಳು ಹೆಚ್ಚಾಗದಂತೆ ಬಿಬಿಎಂಪಿ ಕ್ರಮಕ್ಕೆ ಮುಂದಾಗಿದೆ.

ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ರಾಜಕೀಯ ಕೆಸರೆರೆಚಾಟ ಶುರುವಾಗಿದೆ. ಆರೋಗ್ಯ ಕಾಪಾಡುವ ಆರೋಗ್ಯ ಅಧಿಕಾರಿಗಳಿಗೆ ಡೆಂಗ್ಯೂ ಬಂದಿದೆ. ಸರ್ಕಾರ ನಿದ್ದೆ ಮಾಡಿದರೆ ಡೆಂಗ್ಯೂ ಸೊಳ್ಳೆ ಹೆಚ್ಚಾದೆ ಇನ್ನೇನ್ ಆಗುತ್ತದೆ ಎಂದು ವಿಪಕ್ಷ ನಾಯಕ ಅಶೋಕ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಅದನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಯೋಚನೆ ಶುರುವಾಗಿದೆ. ಈ ಬಗ್ಗೆ ನೀವು ಕೂಡ ಯೋಚನೆ ಮಾಡುತ್ತಿದ್ದರೆ ಇಲ್ಲಿದೆ ಸಲಹೆಗಳು...
ಡೆಂಗ್ಯೂ ಲಕ್ಷಣಗಳು:
ಈಗ ಮಳೆಗಾಲ ಪ್ರಾರಂಭವಾಗಿರುವುದರಿಂದ ಸೋಂಕುಗಳು ಯಾವ ಸಂದರ್ಭದಲ್ಲಿ ಸಹ ಕಾಡಬಹುದು. ಅದರಲ್ಲೂ ವಿಶೇಷವಾಗಿ ಮಾರಕ ಡೆಂಗ್ಯೂ ಜ್ವರ ಕೂಡ ಕಂಡು ಬರಬಹುದು. ಡೆಂಗ್ಯೂ ಜ್ವರ ಕಂಡುಬಂದ ವ್ಯಕ್ತಿಗೆ ನಿರ್ಲಕ್ಷ್ಯ ತೋರಿದ ಪಕ್ಷದಲ್ಲಿ ಸಾವು ಬಹುತೇಕ ಖಚಿತ. ಒಂದು ಸಣ್ಣ ಸೊಳ್ಳೆಯಿಂದ ಜೀವನವೇ ನಶಿಸಿ ಹೋಗಬಹುದು. ಹಾಗೆಂದು ಬರುವ ಜ್ವರವೆಲ್ಲ ಡೆಂಗ್ಯೂ ಜ್ವರ ಎಂದು ಹೇಳಲು ಸಾಧ್ಯವಿಲ್ಲ.

*ಡೆಂಗ್ಯೂ ಸೋಂಕು ಎದುರಾದ ಸಾಕಷ್ಟು ರೋಗಿಗಳು ಕೆಲ ವೊಮ್ಮೆ ಯಾವುದೇ ತರಹದ ರೋಗ ಲಕ್ಷಣ ಗಳನ್ನು ಎದುರಿ ಸುವುದಿಲ್ಲ. ಹಾಗೂ ಒಂದು ವೇಳೆ ರೋಗ ಲಕ್ಷಣಗಳು ಕಂಡು ಬಂದರೆ ಅದನ್ನು ಬೇರೆ ಕಾಯಿಲೆ ಇರಬಹುದು ಎಂದು ಕೊಳ್ಳುತ್ತಾರೆ.
*ಸೊಳ್ಳೆ ಕಚ್ಚಿದ ನಾಲ್ಕರಿಂದ ಹತ್ತು ದಿನಗಳ ಒಳಗೆ ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಡೆಂಗ್ಯೂ ಜ್ವರ ಇದ್ದರೆ ವಿಪರೀತವಾಗಿ ದೇಹದ ತಾಪಮಾನ ಹೆಚ್ಚಾಗುತ್ತದೆ. ಇದರ ಜೊತೆಗೆ ಈ ಕೆಳಗಿನ ರೋಗ ಲಕ್ಷಣಗಳು ಸಹ ಕಾಣಿಸಿಕೊಳ್ಳ ಬಹುದು.
*ಕಣ್ಣುಗಳ ಹಿಂಭಾಗದಲ್ಲಿ ನೋವು
*ಊದಿಕೊಂಡಿರುವ ಗ್ರಂಥಿಗಳು
*ಚರ್ಮದ ಭಾಗದಲ್ಲಿ ದದ್ದುಗಳು
*ತಲೆನೋವು
*ಮೈಕೈ ನೋವು ಅಥವಾ ಕೀಲು ನೋವು
*ವಾಕರಿಕೆ
ತಡೆಗಟ್ಟುವ ಕ್ರಮಗಳು:-
*ಡೆಂಗೆ ತಡೆಗಟ್ಟಲು ಸೊಳ್ಳೆಗಳನ್ನು ನಿಯಂತ್ರಿಸಬೇಕು
*ಶುದ್ಧ ಹಾಗೂ ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಉತ್ತಮ
*ನೀರು ಶೇಖರಣಾ ತೊಟ್ಟಿ, ಟ್ಯಾಂಕ್‌ಗಳ ಮುಚ್ಚಳವನ್ನು ಭದ್ರವಾಗಿ ಮುಚ್ಚಿಡಿ
*ಪಾತ್ರೆ ಹಾಗೂ ಬಿಂದಿಗೆಗಳಲ್ಲಿ ಹೆಚ್ಚು ದಿನ ನೀರು ಸಂಗ್ರಹಿಸಿಡಬೇಡಿ
*ಮನೆಯ ಸುತ್ತಲು ಹಾಗೂ ತಾರಸಿಯ ಮೇಲೆ ನೀರು ನಿಲ್ಲದಂತೆ ಎಚ್ಚರವಹಿಸಿ
*ಹಗಲಿನಲ್ಲಿ ಸೊಳ್ಳೆ ಕಚ್ಚದಂತೆ ಎಚ್ಚರವಹಿಸಿ
* ಸೀನುವಾಗ, ಕೆಮ್ಮುವಾಗ ಕರವಸ್ತ್ರಗಳನ್ನು ಅಡ್ಡಲಾಗಿ ಇಟ್ಟುಕೊಳ್ಳಿ.
*ಸೊಳ್ಳೆಗಳನ್ನು ತಡೆಯಲು ಕಿಟಕಿ ಬಾಗಿಲುಗಳಿಗೆ ಮೆಶ್ ಹಾಕಿ ಅಥವಾ ಸೊಳ್ಳೆ ನಾಶಕ ಔಷಧಗಳನ್ನು ಬಳಸಿ.
*ಹಳ್ಳಿಗಳಲ್ಲಾದರೆ ಸೊಳ್ಳೆಗಳನ್ನು ನಿಯಂತ್ರಿಸಲು ಬೇವಿನ ಸೊಪ್ಪಿನ ಹೊಗೆ ಹಾಕುವುದು ಒಳಿತು.
*ತೆಂಗಿನ ಚಿಪ್ಪು, ಟಯರ್ ನಂತಹ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ.
*ತೊಟ್ಟಿ, ಬಿಂದಿಗೆ, ಡ್ರಮ್‌ಗಳಲ್ಲಿ 2-3 ದಿನಕ್ಕೊಮ್ಮೆ ನೀರು ಬದಲಿಸಿ ಸ್ವಚ್ಛಗೊಳಿಸಿ.












Click it and Unblock the Notifications