Rain Alert: ಮಳೆ ಅಬ್ಬರಕ್ಕೆ ಮುಳುಗಿದ ಸೇತುವೆ, ಜನರ ಪರದಾಟ! ಶಾಲಾ & ಕಾಲೇಜಿಗೆ ರಜೆ ಘೋಷಣೆ?

ಮುಂಗಾರು ಮಳೆ ಅಬ್ಬರಿಸುತ್ತಿದೆ, ಕರ್ನಾಟಕದ ಮೂಲೆ ಮೂಲೆಯಲ್ಲಿ ಮುಂಗಾರು ಮಳೆ ತನ್ನ ಆರ್ಭಟ ತೋರಿಸುತ್ತಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೊಮ್ಮೆ ಈಗ ನೆರೆ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ, ಅಲ್ಲದೆ ಭೀಕರ ಪ್ರವಾಹ ಎದುರಾಗಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ಭಾರಿ ಮಳೆ ಬೀಳುತ್ತಿರುವ ಪರಿಣಾಮ ನದಿಗಳು ಉಕ್ಕಿ ಹರಿಯುತ್ತಿದ್ದು, ಕರ್ನಾಟಕದ ಸೇತುವೆಗಳು ಮುಳುಗಡೆ ಆಗಿವೆ. ಹೀಗಾಗಿ ಶಾಲಾ & ಕಾಲೇಜಿಗೆ ರಜೆ ನೀಡುವ ಸ್ಥಿತಿ ನಿರ್ಮಾಣ ಆಗಿದೆ.

ಹೌದು, ಮಹಾರಾಷ್ಟ್ರ ರಾಜ್ಯ ಪದೇ ಪದೇ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಲೇ ಬಂದಿದೆ. ತನ್ನ ಬಳಿ ನೀರು ಇದ್ದರೂ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿಗೆ ಕೂಡ ಆಟ ಆಡಿಸುವ ಮಹಾರಾಷ್ಟ್ರ ರಾಜ್ಯ, ಮಳೆ ಶುರುವಾದ ತಕ್ಷಣ ಬೆಚ್ಚಿಬಿದ್ದು ತನ್ನ ಡ್ಯಾಂಗಳಿಂದ ನೀರನ್ನು ಹೊರಗೆ ಬಿಡುತ್ತದೆ. ಯಾಕಂದ್ರೆ ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಮುಂಗಾರು ಮಳೆಯ ಅಬ್ಬರ ಬಲು ಜೋರಾಗಿ ಇರುತ್ತೆ, ಹೀಗಾಗಿ ಅಲ್ಲಿನ ಡ್ಯಾಂಗಳು ಬೇಗ ತುಂಬಿಕೊಳ್ಳುತ್ತವೆ. ಈ ಕಾರಣಕ್ಕೆ ಕರ್ನಾಟಕ ಹಲವು ಬಾರಿ ಮನವಿ ಮಾಡಿದರೂ ಮತ್ತೆ ಮತ್ತೆ ಅದೇ ಕೃತ್ಯ ಎಸಗಿ ವಿಕೃತಿ ಮೆರೆಯುತ್ತಿರುವ ಮಹಾರಾಷ್ಟ್ರ ರಾಜಕಾರಣಿಗಳು ಈಗ ಮತ್ತೆ ಅದನ್ನೇ ಮಾಡಿದ್ದಾರೆ.

Monsoon Rain Is Created Flood In These Areas Of Karnataka State

ಮುಳುಗಿ ಹೋಗುತ್ತಿವೆ ಸೇತುವೆಗಳು!

ಅಷ್ಟಕ್ಕೂ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವ ಪರಿಣಾಮ ಮತ್ತು ಮಹಾರಾಷ್ಟ್ರ ಜಲಾಶಯಗಳಿಂದ ಭಾರಿ ಪ್ರಮಾಣದ ನೀರನ್ನ ಹೊರಗೆ ಬಿಡುತ್ತಿರುವ ಕಾರಣ ಇದೀಗ ಕೃಷ್ಣ ನದಿ ನೀರಿನ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡಿದ್ದು ಕರ್ನಾಟಕದ ಎರಡು ಸೇತುವೆ ಮುಳುಗಡೆ ಆಗಿವೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮಾಂಜರಿ & ಬಾವನ ಸೌದತ್ತಿಯಲ್ಲಿ ಎರಡು ಹಳೆಯ ಸೇತುವೆ ಮುಳುಗಡೆ ಆಗಿವೆ. ಈಗಾಗಲೇ ಕೃಷ್ಣ ನದಿ ನೀರಿನ ಒಳ ಹರಿವಿನಲ್ಲಿ ಭಾರಿ ಪ್ರಮಾಣದ ಹೆಚ್ಚಳವಾಗಿದ್ದು, ಬರದ ಬವಣೆಗೆ ಬೇಸತ್ತ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ ಮಹಾರಾಷ್ಟ್ರದ ಎಡವಟ್ಟು ಈಗ ಪ್ರವಾಹ ಸೃಷ್ಟಿಸುವ ಭಯವೂ ಕಾಡ್ತಾ ಇದೆ.

ಎಲ್ಲೆಲ್ಲಿ ಮಳೆಯ ಅಬ್ಬರ?

ಮುಂಗಾರು ಮಳೆ ಕರ್ನಾಟಕದ ಮೂಲೆ ಮೂಲೆಯಲ್ಲೂ ಅಬ್ಬರಿಸುತ್ತಿದ್ದು ಕನ್ನಡ ನಾಡು ಈಗ ಸಂಪೂರ್ಣ ಹಸಿರು ಹಸಿರಾಗಿ ಕಂಗೊಳಿಸುತ್ತಿದೆ. ಅದ್ರಲ್ಲೂ ಬೆಟ್ಟ, ಪರ್ವತಗಳ ನಾಡು ಎಂದು ಗುರುತಿಸಿಕೊಂಡ ಕನ್ನಡ ನಾಡಿನ ಮಲೆನಾಡು ಭಾಗ ಪಶ್ಚಿಮ ಘಟ್ಟದಲ್ಲಿ ಸ್ವರ್ಗ ಈಗ ನಿರ್ಮಾಣ ಆಗಿದೆ. ಕರಾವಳಿ ಕರ್ನಾಟಕವು ಸೇರಿ ಮಲೆನಾಡು, ಉತ್ತರ ಕರ್ನಾಟಕ & ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆ ಬೀಳುತ್ತಿದೆ.

ಹೀಗಾಗಿ, ಕರಾವಳಿ ಕರ್ನಾಟಕ ಭಾಗದಲ್ಲಿ ಮುಂದಿನ 48 ಗಂಟೆ ಭರ್ಜರಿ ಮಳೆ ಆಗುವ ಎಚ್ಚರಿಕೆ ಸಂದೇಶ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆ ಕರಾವಳಿ ಭಾಗಗಳಲ್ಲಿ ಎಚ್ಚರಿಕೆ ವಹಿಸಲಾಗಿದೆ. ಈಗಾಗಲೇ ಕಳೆದ ಹಲವು ದಿನಗಳಿಂದಲೂ ಈ ಭಾಗದಲ್ಲಿ ಭಾರಿ ಮಳೆ ಆಗುತ್ತಿದೆ. ಹೀಗಿದ್ದಾಗ ಮತ್ತೆ ಮಳೆರಾಯ ಅಬ್ಬರಿಸುತ್ತಿದ್ದಾನೆ. ಹಾಗೇ ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿ ಮಳೆ ಆರ್ಭಟಿಸುವ ಮುನ್ಸೂಚನೆಯು ಸಿಗುತ್ತಿದೆ.

ಮಳೆ.. ಮಳೆ.. ಭರ್ಜರಿ ಮಳೆ!

ಹವಾಮಾನ ಇಲಾಖೆ ಈಗ ಕರಾವಳಿ ಕರ್ನಾಟಕ ಸೇರಿದಂತೆ ಮಲೆನಾಡು, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆ ಬೀಳಲಿದೆ ಎಂಬ ಮುನ್ಸೂಚನೆ ನೀಡಿದೆ. ಒಂದಲ್ಲ.. ಎರಡಲ್ಲ ಬರೋಬ್ಬರಿ 7 ದಿನ ನಿರಂತರವಾಗಿ ಕರಾವಳಿ & ಮಲೆನಾಡು ಭಾಗದಲ್ಲಿ ಮಳೆ ಆಗಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈ ಸಮಯದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಮುಂದಿನ 1 ವಾರ ಇಲ್ಲೆಲ್ಲಾ ಭಾರಿ ಮಳೆ ಬೀಳುವ ಎಚ್ಚರಕೆ ನೀಡಲಾಗಿದೆ.

ನೀರಿನ ಕೊರತೆಗೆ ಸಿಕ್ಕಿತಾ ಮುಕ್ತಿ?

ರಾಜಧಾನಿ ಬೆಂಗಳೂರು ಸೇರಿದಂತೆ ವಿಜಯಪುರ & ಕಲಬುರಗಿ, ರಾಯಚೂರು, ಯಾದಗಿರಿ, ಬೀದರ್, ಬಾಗಲಕೋಟೆ, ಬೆಳಗಾವಿ & ಬಳ್ಳಾರಿ, ಕೊಪ್ಪಳ, ಧಾರವಾಡ, ಗದಗ ಜಿಲ್ಲೆಗಳಲ್ಲೂ ಮಳೆ ಅಬ್ಬರಿಸಲಿದೆ. ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು ಸೇರಿ ಉಡುಪಿ, ಚಾಮರಾಜನಗರ, ಮಂಡ್ಯ, ಮಂಗಳೂರು, ಉತ್ತರ ಕನ್ನಡ, ತುಮಕೂರು, ಹಾಸನ ಜಿಲ್ಲೆಯ ಬಹುತೇಕ ಭಾಗದಲ್ಲಿ ಭರ್ಜರಿ ಮಳೆ ಆಗಲಿದೆ. ಈ ಮೂಲಕ ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ಇದೀಗ ನೀರಿನ ಕೊರತೆ ನೀಗುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+