ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಾದ್ಯಂತ ಮುಂಗಾರು ಆರ್ಭಟ, ಕರಾವಳಿಯಲ್ಲಿ ಭಾರೀ ಮಳೆ

By Madhusoodhan
|
Google Oneindia Kannada News

ಬೆಂಗಳೂರು, ಜೂನ್ , 23: ರಾಜ್ಯದಾದ್ಯಂತ ಮುಂಗಾರು ಆರ್ಭಟ ಆರಂಭಿಸಿದೆ. ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಎರಡು ದಿನದಿಂದ ವ್ಯಾಪಕ ಮಳೆಯಾಗುತ್ತಿದೆ.

ಉಡುಪಿ ಮತ್ತು ಹೊನ್ನಾವರದಲ್ಲಿ 11 ಸೆಂ ಮೀ ಮಳೆಯಾಗಿದೆ. ಉಳಿದಂತೆ ಕೋಟಾ, ಕುಮಟಾ, ಹುಲಿಕಲ್, ಆಗುಂಬೆಯಲ್ಲಿ 10 ಸೆಂ ಮೀ ಮಳೆಯಾಗಿದೆ. ಮೂಡಬಿದಿರೆ, ಗೇರುಸೊಪ್ಪ, ಬೆಳ್ತಂಗಡಿ, ಕಾರ್ಕಳ ಮತ್ತು ಬೀದರ್ ನಲ್ಲಿ 7 ಸೆಂ ಮೀ ಮಳೆಯಾಗಿದೆ.[ಕೊಂಚ ತಡವಾದ ಮುಂಗಾರು, ಅನ್ನದಾತನ ಮುಖದಲ್ಲಿ ಮಂದಹಾಸ]

rain

ಮುಲ್ಕಿ, ಕುಂದಾಪುರ, ಮಾಣಿ, ಕೊಲ್ಲುರು, ಕೊಟ್ಟಿಗೆಹಾರ, ಬಂಡ್ವಾಳ, ಶಿರಾಲಿ, ಪಣಂಬೂರು, ಮಂಚಿಕೇರಿ, ಬಾಗಮಂಡಲ, ಲಿಂಗನಮಕ್ಕಿ, ತಾಳಗುಪ್ಪ, ಲೋಕಾಪುರ್, ರಾಯಚೂರು, ನರಗುಂದ, ತೊಂಸೆಬಾವಿ, ಯಲ್ಲಾಪುರ, ಮಡಿಕೇರಿ, ಚಿಕ್ಕನಾಯಕನಹಳ್ಳಿ, ಯಲಹಂಕ, ಸೈದಾಪುರ, ಪಾವಗಡ, ಶಿವಮೊಗ್ಗ, ಸಾಗರ, ಹೊಸನಗರ ಸೇರಿದಂತೆ ರಾಜ್ಯದ ಹಲವು ಕಡೆ ಮಳೆಯಾಗಿದೆ.[ಕೊಚ್ಚಿಗೆ ಬಂದ ಮಳೆರಾಯನಿಗೆ ಯುವತಿಯರ ಸ್ವಾಗತ]

ಬೆಂಗಳೂರಲ್ಲಿ ಬುಧವಾರ ಮಳೆ ಆರ್ಭಟ
ಬೆಂಗಳೂರಲ್ಲಿ ಬುಧವಾರ ಮಳೆ ಆರ್ಭಟಿಸಿದೆ. ಕೆನರಾ ಬ್ಯಾಂಕ್‌ ಕಾಲೊನಿಯ ಮಾರುತಿ ಮಂದಿರ ಹಾಗೂ ಕೋರಮಂಗಲ, ವಿಜಯಾ ಬ್ಯಾಂಕ್‌ ಕಾಲೊನಿಯ ಬಿಳಿಕಳ್ಳಿ ಬಳಿ 5ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು ಮರಗಳು ಧರೆಗುರುಳಿವೆ ಎಂದು ಬಿಬಿಎಂಪಿ ತಿಳಿಸಿದೆ.

ಮಾರತ್ತಹಳ್ಳಿ, ಯಶವಂತಪುರ, ಸ್ಯಾಂಕಿ ರಸ್ತೆ, ಮೈಸೂರು ರಸ್ತೆ, ತುಮಕೂರು ರಸ್ತೆ, ಯಶವಂತಪುರ- ಮಲ್ಲೇಶ್ವರ ರಸ್ತೆಗಳಲ್ಲಿ ಭಾರೀ ಮಳೆ ಪರಿಣಾಮ ಸಂಚಾರ ದಟ್ಟಣೆ ಉಂಟಾಗಿತ್ತು. ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇದ್ದು ಸಂಜೆ ವೇಳೆ ಆರಂಭವಾದ ಮಳೆ ಮಧ್ಯರಾತ್ರಿವರೆಗೂ ಸುರಿಯಿತು.[ಮುಂಗಾರು ಮಳೆ ಎದುರಿಸಲು ನಮ್ಮ ಬೆಂಗಳೂರು ಸಿದ್ಧವೇ?]

ಗುರುವಾರದ ವಾತಾವರಣ
ಗುರುವಾರ ಸಹ ಬೆಳಗಿನಿಂದಲೇ ಮೋಡ ಕವಿದ ವಾತಾವಣ ಬೆಂಗಳೂರಿನಲ್ಲಿ ಇದೆ. ಒಮ್ಮೊಮ್ಮೆ ಕಾಣಿಸಿಕೊಳ್ಳುವ ಬಿಸಿಲು ವಾತಾವರಣದ ಏರುಪೇರಿಗೆ ಕಾರಣವಾಗುತ್ತಿದೆ. ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳ ಕುರಿತು ತಿಳಿಸಿದ್ದು ಶುದ್ಧ ನೀರು ಬಳಕೆ ಮಾಡಬೇಕು ಎಂದು ಹೇಳಿದೆ.

English summary
Weather Report: Rainfall occurred at most places over Coastal Karnataka & North Interior Karnataka and at many places over South Interior Karnataka. Udupi and Honavar received 11 cm rain fall, Kota (Udupi dt), Kumta (Uttara Kannada dt), Hulikal ARG (Shivamogga dt), Agumbe received 10 cm rainfall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X