ಚುರುಕಾದ ಮುಂಗಾರು, ಕಲಬುರಗಿಯಲ್ಲಿ ಪ್ರವಾಹ
ಬೆಂಗಳೂರು, ಜುಲೈ, 21: ಹವಾಮಾನ ಇಲಾಖೆ ಹೇಳಿದಂತೆ ರಾಜ್ಯದಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದೆ. ರಾಜ್ಯದ ಕರಾವಳಿ, ಮಲೆನಾಡು ಮತ್ತು ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಮಳೆಯಾಗಿದೆ.
ಮಳೆ ಕೊರತೆ ಎದುರಿಸುತ್ತಿದ್ದ ಕೋಲಾರ, ರಾಮನಗರ, ಚಾಮರಾಜನಗರ ಜಿಲ್ಲೆಗಳಲ್ಲಿಯೂ ಮಳೆಯಾಗಿರುವುದು ಸಂತಸ ತಂದಿದೆ. ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಸುರಿದಿದೆ.

ಕಲಬುರಗಿ ಜಿಲ್ಲೆಯ ಚಿಂಚೋಳಿ ಮತ್ತು ಸುಲ್ತಾನ್ ಪೇಟ್ ನಲ್ಲಿ ಅತಿ ಹೆಚ್ಚು ಅಂದರೆ 7 ಸೆಂ ಮೀ ಮಳೆ ದಾಖಲಾಗಿದೆ. ಉಳಿದಂತೆ ಕೊಲ್ಲೂರು, ಜೇವರ್ಗಿ, ಹುಲಿಕಲ್, ಕಾರವಾರ, ಗೇರುಸೊಪ್ಪಾ, ಭೀಮರಾಯನಗುಡಿ, ಆಗುಂಬೆ, ಹುನಗುಂದ, ಕುಂದರಗಿ, ಲಿಂಗನಮಕ್ಕಿ, ಕಾರ್ಕಳ, ಪುತ್ತೂರು, ಬೀದರ್, ಕುಣಿಗಲ್ ಸೇರಿದಂತೆ ರಾಜ್ಯದ ಎಲ್ಲ ಕಡೆ ಮಳೆರಾಯ ಕರುಣೆ ತೋರಿಸಿದ್ದಾನೆ.[ಆಲಮಟ್ಟಿ ಜಲಾಶಯ ಭರ್ತಿ]

ಮಳಖೇಡದಲ್ಲಿ ಪ್ರವಾಹ
ಕಲಬುರಗಿ ಜಿಲ್ಲೆಯಲ್ಲಿ ಮಳೆ ಆರ್ಭಟ ಜೋರಾಗಿದೆ. ಮಳಖೇಡದ ಕಾಗಿನ ನದಿಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಗುರುವಾರ ಬೆಳಿಗ್ಗೆ ಸಹ ಮಳೆ ಮುಂದುವರಿದಿದೆ.[ರಾಜ್ಯದಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಮುನ್ನೆಚ್ಚರಿಕೆ]

ಮುಂದಿನ 24 ಗಂಟೆ ಅವಧಿಯಲ್ಲಿ ರಾಜ್ಯದ ಕರಾವಳಿಯಲ್ಲಿ ಭಾರೀ ಮಳೆ ಸುರಿಯಲಿದ್ದು, ದಕ್ಷಿಣ ಒಳನಾಡಲ್ಲಿ ಸಾಧಾರಣ ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿಯೂ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜುಲೈ 21 ರಿಂದ 23ರ ವರೆಗೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ, ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಯಚೂರಲ್ಲಿ ಪ್ರವಾಹ ವಿಡಿಯೋ ನೋಡಿ












Click it and Unblock the Notifications