Get Updates
Get notified of breaking news, exclusive insights, and must-see stories!

Monsoon: ಕರ್ನಾಟಕದಲ್ಲಿ ಮಳೆ, ಭೂ ಕುಸಿತದ ಎಚ್ಚರಿಕೆ

ಬೆಂಗಳೂರು, ಮೇ 12: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹಿಂಗಾರು ಮಳೆ ಆರ್ಭಟಿಸುತ್ತಿದೆ. 2024ರ ಮುಂಗಾರು ಮಳೆ ಎಷ್ಟು ಸುರಿಯಲಿದೆ? ಎಂಬ ಬಗ್ಗೆ ಲೆಕ್ಕಾಚಾರಗಳು ನಡೆಯುತ್ತಿವೆ. ನೈಋತ್ಯ ಮುಂಗಾರು ಮಳೆ ಹೆಚ್ಚಾಗಿ ಸುರಿದರೆ ಅವಾಂತರಗಳು ಸಹ ನಡೆಯುವುದು ಖಚಿತ. ಆದ್ದರಿಂದ ಸರ್ಕಾರ ಸಹ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.

ರಾಜ್ಯದ ಕಂದಾಯ ಇಲಾಖೆ ಭಾರತೀಯ ಹವಾಮಾನ ಇಲಾಖೆ 2024ರ ಮುಂಗಾರು ಮಳೆ ಕುರಿತು ನೀಡಿರುವ ಮುನ್ಸೂಚನೆ ಆಧರಿಸಿ ಸುತ್ತೋಲೆಯೊಂದನ್ನು ಹೊರಡಿಸಿದೆ. ಸುತ್ತೋಲೆಯಲ್ಲಿ ಮಳೆಯಿಂದಾಗಿ ಭೂ ಕುಸಿತ ಉಂಟಾದರೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ವಿವರಣೆ ನೀಡಲಾಗಿದೆ.

Monsoon Rain 2024 Direction In The Time Of Landslides

ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಅವಧಿಯಲ್ಲಿ ಭೂ ಕುಸಿತ ಉಂಟಾಗುತ್ತದೆ. ಆಗ ಜಿಲ್ಲಾಡಳಿತ ಸೇರಿದಂತೆ ಸ್ಥಳೀಯ ಆಡಳಿತಗಳು ಹೇಗೆ ಸನ್ನದ್ಧವಾಗಿರಬೇಕು? ಎಂದು ಕಂದಾಯ ಇಲಾಖೆ ಸೂಚನೆಯನ್ನು ಕೊಟ್ಟಿದೆ.

ಭೂ ಕುಸಿತ, ಕೈಗೊಳ್ಳಬೇಕಾದ ಕ್ರಮಗಳು

* ಕಂದಾಯ ಇಲಾಖೆ ಉಪವಿಭಾಗಾಧಿಕಾರಿ, ತಹಶೀಲ್ದಾರ್. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ. ಲೋಕೋಪಯೋಗಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮುಂತಾದ ಇಲಾಖೆ, ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ.

* ಮಳೆಗಾಲದಲ್ಲಿ ಭೂ ಕುಸಿತ ಉಂಟಾಗುವ ಪ್ರದೇಶ/ ಗ್ರಾಮಗಳನ್ನು ಗುರುತಿಸಬೇಕು. ಭೂ ಕುಸಿತಕ್ಕೆ ಕಾರಣವಾಗುವ ಅಂಶಗಳನ್ನು ಗುರುತಿಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಇಂತಹ ಪ್ರದೇಶದಲ್ಲಿ ನೀರು ಸಾರಾಗವಾಗಿ ಹರಿದು ಹೋಗಲು ಕ್ರಮ ಕೈಗೊಳ್ಳಬೇಕು.

* ರಸ್ತೆ ಬದಿಯ ದುರ್ಬಲ ಮರಗಳನ್ನು, ಕೊಂಬೆಗಳನ್ನು ಕತ್ತರಿಸಬೇಕು. ಭೂ ಕುಸಿತ ಉಂಟಾಗುವ ಪ್ರದೇಶದ ರಸ್ತೆಗಳಲ್ಲಿ ತಡೆಗೋಡೆ ನಿರ್ಮಾಣ ಮಾಡಬೇಕು. ರಸ್ತೆ ಮೇಲೆ ಬಿದ್ದಿರುವ ಅವಶೇಷಗಳನ್ನು ತೆರವು ಮಾಡಲು ಜೆಸಿಬಿಗಳನ್ನು ಸಜ್ಜುಗೊಳಿಸಬೇಕು.

* ಮಳೆಗಾಲಕ್ಕೆ ಮುಂಚಿತವಾಗಿ ಮಳೆ ನೀರು ಸರಾಗಿವಾಗಿ ಹರಿದು ಹೋಗಲು ಕಾಲುವೆ/ ಚರಂಡಿ/ ಸೇತುವೆಗಳ ಕೆಳಗೆ ಇರುವ ಹೂಳು ತೆಗೆದು ಸ್ವಚ್ಛಗೊಳಿಸಬೇಕು. ನದಿ/ ನೀರಾವರಿ ಕೆರೆ/ ಕಾಲುವೆಗಳ ದಂಡೆಗಳ ಹತ್ತಿರ ಇರುವ ನೆರೆ ಪೀಡಿತ ಪ್ರದೇಶಗಳನ್ನು ಗುರುತಿಸಬೇಕು.

* ಚರಂಡಿಗಳ ಮೇಲೆ ಹೊದೆಸಿರುವ ಕಲ್ಲು ಚಪ್ಪಡಿ ಕಾಂಕ್ರೀಟ್ ಸ್ಲಾಬ್‌ಗಳನ್ನು ಯಾವುದೇ ಅಂತರವಿಲ್ಲದೇ ಸಮರ್ಪಕವಾಗಿ ಮುಚ್ಚಲು ಕ್ರಮ ಕೈಗೊಳ್ಳುವುದು. ಪ್ರವಾಹಕ್ಕೆ ತುತ್ತಾಗುವ ಪ್ರದೇಶಗಳಲ್ಲಿ ಮಳೆಗಾಲಕ್ಕೆ ಮುಂಚಿತವಾಗಿಯೇ ಪ್ರವಾಹ ಉಪ ಶಮನ ಕ್ರಮಗಳನ್ನು ಕೈಗೊಳ್ಳುವುದು.

* ಅವಶ್ಯವಿದ್ದಲ್ಲಿ ಸಾಕಷ್ಟು ಮರಳು ಚೀಲಗಳನ್ನು ದಾಸ್ತಾನು ಮಾಡಿಕೊಳ್ಳಲು ಕ್ರಮ ವಹಿಸುವುದು. ನಗರ/ ಗ್ರಾಮಗಳಲ್ಲಿ ಪ್ರವಾಹದಿಂದ ತಗ್ಗು ಪ್ರದೇಶದಲ್ಲಿ ನಿಂತ ನೀರನ್ನು ಹೊರ ಹಾಕಲು ಪಂಪ್‌ಸೆಟ್‌ಗಳನ್ನು ಸಜ್ಜುಗೊಳಿಸುವುದು.

* ಆಗಾಗ ವಿಪತ್ತುಗಳಿಗೆ ತುತ್ತಾಗುವಂತಹ ಹಳ್ಳಿಗಳಲ್ಲಿನ ಜನಸಂಖ್ಯೆಗೆ ಅನುಸಾರ ನೀರು, ಶೌಚಾಲಯ ಹೊಂದಿರುವ ಆಶ್ರಯ ತಾಣ/ ಕಾಳಜಿ ಕೇಂದ್ರಗಳನ್ನು ಗುರುತಿಸುವುದು. ಸ್ಥಳೀಯ ಮಟ್ಟದಲ್ಲಿ ಲಭ್ಯವಿಲ್ಲದಿದ್ದಲ್ಲಿ ಹತ್ತಿರದ ಊರುಗಳಲ್ಲಿ ಗುರುತಿಸುವುದು.

* ಸ್ಥಳಾಂತರ ಮಾಡಬೇಕಾದ ಅವಶ್ಯಕತೆ ಇದ್ದಲ್ಲಿ ಪರ್ಯಾಯ ಮಾರ್ಗ ಗುರುತಿಸಿ ಸಾರಿಗೆ ವ್ಯವಸ್ಥೆಯನ್ನು ಮಾಡುವುದು. ಕಾಳಜಿ ಕೇಂದ್ರಗಳಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವುದು. ಸರ್ಕಾರದ ಆದೇಶದಲ್ಲಿ ನಿಗದಿಪಡಿಸಿರುವಂತೆ ಉಪಹಾರ, ಮಧ್ಯಾಹ್ನ ಊಟ ಮತ್ತು ರಾತ್ರಿ ಊಟವನ್ನು ನೀಡುವುದು.

* SDRF ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಆರ್ಥಿಕ ನೆರವು ನೀಡುವುದು. ಪುನರ್ ವಸತಿ ಕೇಂದ್ರ/ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯುವ ಸಂತ್ರಸ್ತರ ದತ್ತಾಂಶ ಸಂಗ್ರಹ ಮಾಡುವುದು. ಅಗತ್ಯ ಆಹಾರ ದಿನಸಿಗಳಾದ ಬೇಳೆಕಾಳು, ಎಣ್ಣೆ, ಅಕ್ಕಿ ಇತ್ಯಾದಿಗಳನ್ನು ಡಿಪೋಗಳಲ್ಲಿ ಸಮರ್ಪಕವಾಗಿ ದಾಸ್ತಾನು ಮಾಡಲು ಕ್ರಮ ವಹಿಸುವುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+