Pratap Simha: 17 ಮತಗಳಿವೆ ಎಂದ ಯುವಕನಿಗೆ ನೀನು ಮಹಮ್ಮದ್ದಾ ಎಂದು ಪ್ರಶ್ನಿಸಿದ ಸಂಸದ ಪ್ರತಾಪ್ ಸಿಂಹ?
ನಮ್ಮ ಮನೆಯಲ್ಲಿ 17 ಮತಗಳಿವೆ ನಾವು ಸಿದ್ದರಾಮಯ್ಯ ಅವರಿಗೆ ಮತ ಹಾಕ್ತೀವಿ ಎಂದು ಟ್ವೀಟ್ ಮಾಡಿದ್ದ ಯುವಕನಿಗೆ ಪ್ರತಾಪ್ ಸಿಂಹ್ ನೀನು ಮೋಹನ್‌ನಾ ಅಥವಾ ಮಹಮ್ಮದ್ದಾ ಎಂದು ಪ್ರಶ್ನಿಸುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಏಪ್ರಿಲ್ 19ರಂದು ಸಂಸದ ಪ್ರತಾಪ್ ಸಿಂಹ ಟ್ವಿಟರ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದರು, ಇದಕ್ಕೆ ಯುವಕನೊಬ್ಬ ಪ್ರತಿಕ್ರಿಯೆ ನೀಡಿ, ಪ್ರತಾಪ್ ಅಣ್ಣ ನಮ್ಮ ಮನೆಯಲ್ಲಿ 17 ವೋಟು ಎಲ್ಲ ಸಿದ್ದರಾಮಣ್ಣಗೆ ಎಂದು ಹೇಳಿದ್ದರು.
ಪ್ರತಾಪ್ ಸಿಂಹ ಅವರೇ, ನಿಮಗೆ ಅರ್ಹತೆ ಇದೆಯೋ ಇಲ್ಲವೋ ಅಂತೂ ನೀವು ಸಂಸದರಾಗಿದ್ದೀರಿ. ಕಡೇ ಪಕ್ಷ ಆ ಜವಾಬ್ದಾರಿ ಅರಿತು ಮಾತನಾಡಿ.
— Karnataka Congress (@INCKarnataka) April 20, 2023
ಮಾತೆತ್ತಿದರೆ ಸಂಸ್ಕೃತಿ ಸಂಸ್ಕಾರದ ಪಾಠ ಮಾಡುವ ನಿಮಗೆ ಹಿಂದೂ 'ಅವಿಭಕ್ತ' ಕುಟುಂಬಗಳ ಪರಿಚಯ ಇಲ್ಲದಿರುವುದು ಆಶ್ಚರ್ಯವೇ ಸರಿ. ಅವಿಭಕ್ತ ಕುಟುಂಬಗಳು ನಿಮ್ಮ ಪ್ರಕಾರ ಹಿಂದೂಗಳಲ್ಲವೇ? @mepratap pic.twitter.com/1yM6YUudvg
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಂಸದ ಪ್ರತಾಪ್ ಸಿಂಹ 17 ವೋಟು? ಅಣ್ಣತಮ್ಮಾ ನಿನ್ನ ಹೆಸರು ಮೋಹನ್ನಾ ಅಥವಾ ಮಹಮ್ಮದ್ದಾ? ಎಂದು ಪ್ರಶ್ನೆ ಮಾಡಿದ್ದಾರೆ. ಪ್ರತಾಪ್ ಸಿಂಹ ನೀಡಿರುವ ಪ್ರತಿಕ್ರಿಯೆಗೆ ಹಲವು ಟ್ವಿಟರ್ ಬಳಕೆದಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನನಾಯಕನಾಗಿ ಪ್ರತಾಪ್ ಸಿಂಹ ತಮ್ಮ ಘನತೆಗೆ ತಕ್ಕಂತೆ ಮಾತನಾಡಲಿ ಎಂದು ಹೇಳಿದ್ದಾರೆ.

ಸಿದ್ಧರಾಮಯ್ಯ ಸ್ಪರ್ಧೆ ಮಾಡುತ್ತಿರುವ ವರುಣಾ ಕ್ಷೇತ್ರದಲ್ಲಿ ಬಿಜೆಪಿ ವಿ. ಸೋಮಣ್ಣ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಮತಯಾಚನೆಗೆ ಹೋಗಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದರು, ಈ ವಿಡಿಯೋವನ್ನು ಕರ್ನಾಟಕ ಕಾಂಗ್ರೆಸ್ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು, ಬಿಜೆಪಿಗೆ ಹೋದಕಡೆಯಲ್ಲಿ ಜನಾಕ್ರೋಶ ವ್ಯಕ್ತವಾಗುತ್ತಿದೆ ಎಂದು ಹೇಳಿತ್ತು.
ಕಾಂಗ್ರೆಸ್‌ನ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದ ಪ್ರತಾಪ್ ಸಿಂಹ, "ಕಾಂಗಿಗಳೇ, ಯಾರೂ ತರಾಟೆಗೆ ತೆಗೆದುಕೊಂಡಿಲ್ಲ, ಕೆಲವು ಯುವಕರು ಪ್ರಬಲ ಜಾತಿ ಭವನಕ್ಕೆ 3 ಕೋಟಿ ಕೊಟ್ಟಿದ್ದೀರಾ, ದಲಿತರ ಭವನಕ್ಕೆ ಯಾಕೆ ದುಡ್ಡು ಕೊಟ್ಟಿಲ್ಲ" ಎಂದರು. 15 ವರ್ಷಗಳಿಂದ ಶಾಸಕನಾಗಿದ್ದು ಸಿದ್ದರಾಮಯ್ಯ ಮತ್ತು ಮಗ. ಈ ಸಲ ಸೋಮಣ್ಣರನ್ನು ಗೆಲ್ಲಿಸಿ, ಅಂಬೇಡ್ಕರ್ ಭವನ ಕಟ್ಟಿಸಿಕೊಡುತ್ತೇವೆ ಎಂದು ಉತ್ತರಕೊಟ್ಟಾಗ, ಅಯ್ತು ಎಂದು ಒಪ್ಪಿಕೊಂಡರು. ಎಂದು ಟ್ವೀಟ್ ಮಾಡಿದ್ದರು.
ಪ್ರತಾಪ್ ಸಿಂಹ ಹೇಳಿಕೆ ಕಿಡಿ ಕಾರಿದ ಕಾಂಗ್ರೆಸ್
ಸಾಮಾನ್ಯ ಮತದಾರನಿಗೆ ಪ್ರತಾಪ್ ಸಿಂಹ ಉತ್ತರ ಕೊಟ್ಟಿರುವ ಫೋಟೋ ಹಂಚಿಕೊಂಡಿರುವ ಕರ್ನಾಟಕ ಕಾಂಗ್ರೆಸ್, "ಪ್ರತಾಪ್ ಸಿಂಹ ಅವರೇ, ನಿಮಗೆ ಅರ್ಹತೆ ಇದೆಯೋ ಇಲ್ಲವೋ ಅಂತೂ ನೀವು ಸಂಸದರಾಗಿದ್ದೀರಿ, ಕಡೇ ಪಕ್ಷ ಆ ಜವಾಬ್ದಾರಿ ಅರಿತು ಮಾತನಾಡಿ. ಮಾತೆತ್ತಿದರೆ ಸಂಸ್ಕೃತಿ ಸಂಸ್ಕಾರದ ಪಾಠ ಮಾಡುವ ನಿಮಗೆ ಹಿಂದೂ 'ಅವಿಭಕ್ತ' ಕುಟುಂಬಗಳ ಪರಿಚಯ ಇಲ್ಲದಿರುವುದು ಆಶ್ಚರ್ಯವೇ ಸರಿ. ಅವಿಭಕ್ತ ಕುಟುಂಬಗಳು ನಿಮ್ಮ ಪ್ರಕಾರ ಹಿಂದೂಗಳಲ್ಲವೇ?" ಎಂದು ಪ್ರಶ್ನೆ ಮಾಡಿದೆ.
ಹಿಂದೂ ಧರ್ಮದಲ್ಲಿ ಅವಿಭಕ್ತ ಕುಟುಂಬಗಳಿವೆ, ನಮ್ಮ ಮನೆಯಲ್ಲಿ ಕೂಡ 24 ಜನ ಇದ್ದಾರೆ. ನಿಮ್ಮಂತಹ ವ್ಯಕ್ತಿಗಳು ಹಿಂದೂ ಧರ್ಮಕ್ಕೆ ಕಪ್ಪುಚುಕ್ಕೆ ಎಂದು ಟ್ವಿಟರ್ ಬಳಕೆದಾರರು ಸಂಸದ ಪ್ರತಾಪ್ ಸಿಂಹ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ. ಪ್ರಶ್ನೆ ಕೇಳಿದ ಯುವಕ ನಂತರ ಟ್ವೀಟ್ ಡಿಲೀಟ್ ಮಾಡಿದ್ದರೂ, ಅದರ ಸ್ಕ್ರೀನ್‌ಶಾಟ್ ಈಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.












Click it and Unblock the Notifications