ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಬೆಂಗಳೂರು ಭೇಟಿ; ಸಿದ್ದರಾಮಯ್ಯ ಹೇಳುವುದೇನು?

|
Google Oneindia Kannada News

ಬೆಂಗಳೂರು,ನವೆಂಬರ್ 10: "ಕನಕದಾಸ ಹಾಗೂ ವಾಲ್ಮೀಕಿ ಪ್ರತಿಮೆಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮಾಲಾರ್ಪಣೆ ಮಾಡುತ್ತಿರುವುದು ರಾಜಕೀಯ ಗಿಮಿಕ್" ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ ಕನಕದಾಸ, ವಾಲ್ಮೀಕಿ, ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಕಾರ್ಯಕ್ರಮಗಳ ಆಯೋಜನೆ ವಿಚಾರವಾಗಿ ಮಾತನಾಡಿದ ಅವರು, "ಇದೆಲ್ಲವೂ ಗಿಮಿಕ್, ವಾಲ್ಮೀಕಿ ಪ್ರತಿಮೆ ನಮ್ಮ ಸರ್ಕಾರ ಮಾಡಿದ್ದು. ಆದರೆ ಮೋದಿ ಇದೀಗ ಹೂವಿನ ಹಾರ ಹಾಕಲು ಬರುತ್ತಿದ್ದಾರೆ" ಎಂದರು.

"ವಾಲ್ಮೀಕಿ, ಕನಕದಾಸರ ಪ್ರತಿಮೆ ಮಾಡಿದವರು ನಾವು. ಹೂವಿನ ಹಾರ ಹಾಕಿದಾಕ್ಷಣ ಕನಕದಾಸ ಪರ ಇದ್ದಾರಾ ಇವರು?. ಇವೆಲ್ಲವೂ ಪೊಲಿಟಿಕಲ್ ಗಿಮಿಕ್. ಕೆಂಪೇಗೌಡರ ಜಯಂತಿ ಮಾಡಿದವರು ಯಾರು? ಕೆಂಪೇಗೌಡರ ಪ್ರಾಧಿಕಾರ ಮಾಡಿದವರು ಯಾರು?. ಏರ್‌ಪೋರ್ಟ್‌ಗೆ ಕೆಂಪೇಗೌಡರ ಹೆಸರು ಇಟ್ಟವರು ಯಾರು?" ಎಂದು ಪ್ರಶ್ನಿಸಿದರು.

Modis Garlanding To Kanakadasa, Valmiki Statues Is A Political Gimmick

"ಕೆಂಪೇಗೌಡ ಪ್ರತಿಮೆ ಮಾಡಬೇಕು ಎಂದು ನಾವು ಆಗಲೇ ತೀರ್ಮಾನ ಮಾಡಿದ್ದೆವು. ಏರ್‌ಪೋರ್ಟ್‌ಗೆ ಹೆಸರು ಇಟ್ಟ ಮೇಲೆ, ಪ್ರತಿಮೆ ಮಾಡಬೇಕು ಎಂದು ತೀರ್ಮಾನ ಮಾಡಿದ್ದೆವು. ಬಿಜೆಪಿಯವರು ಶೇ 40ರಷ್ಟು ಕಮಿಷನ್ ಬಗ್ಗೆ ಉತ್ತರ ಕೊಡಲಿ. ಅದರ ಬಗ್ಗೆ ಪತ್ರ ಸಹ ಬರೆದಿದ್ದೇನೆ. ಕೆಂಪಣ್ಣ ಹಾಗೂ ನಾನು ಪತ್ರ ಬರೆದಿದ್ದೇವೆ" ಎಂದರು.

ಗುಂಡಿ ಮುಚ್ಚಲು ಆಗಿಲ್ಲ; ರಾಜ್ಯಕ್ಕೆ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆ ಡಾಂಬರೀಕರಣ ಆಗುತ್ತಿರುವ ವಿಚಾರ ಮಾತನಾಡಿ, "ಮೋದಿ ಬಂದು ಹೋದ ಮೇಲೆ ಕಿತ್ತು ಹೋಗುತ್ತವೆ. ಈ ಹಿಂದೆ ಮೋದಿ ಬರುವಾಗ ರಸ್ತೆಗೆ ಡಾಂಬರ್ ಹಾಕಿದರು. ಅವರು ಹೋಗಿ ಒಂದು ವಾರದಲ್ಲಿ ಕಿತ್ತು ಹೋಗಿದ್ದವು" ಎಂದರು.

Modis Garlanding To Kanakadasa, Valmiki Statues Is A Political Gimmick

"ಗುಂಡಿಗಳನ್ನು ಮುಚ್ಚಬೇಕು, ಮೋದಿಗಾಗಿ ರಸ್ತೆಗಳನ್ನು ಚೆನ್ನಾಗಿ ಮಾಡುವುದಲ್ಲ. ಮೋದಿಯವರು ಬರ್ತಾರೆ ಅಂತ ಮಾಡುತ್ತಿದ್ದಾರೆ ನಾನು ಬೇಡ ಎನ್ನಲ್ಲ, ಆದರೆ ಕಳಪೆ ಕೆಲಸ ಮಾಡಿ ಮತ್ತೆ ಕಿತ್ತು ಹೋದರೆ ಏನು ಮಾಡೋಣ. ಗುಣಮಟ್ಟದ ಕೆಲಸ ಮಾಡಲ್ಲ, ಇವರ ಯೋಗ್ಯತೆಗೆ ಬೆಂಗಳೂರು ಹಾಗೂ ಅನೇಕ ನಗರಗಳಲ್ಲಿ ಗುಂಡಿ ಮುಚ್ಚಲು ಆಗಿಲ್ಲ. ಕೋರ್ಟ್‌ನವರು ಛೀಮಾರಿ ಹಾಕಿದ್ದಾರೆ" ಎಂದು ಸರ್ಕಾರದ ವಿರುದ್ದ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಇದೇ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿವಾದದ ಬಗ್ಗೆ ಮಾತನಾಡಿ, "ಸತೀಶ್ ಈಗಾಗಲೇ ವಿಷಾದ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ. ನಾನು ಅಶ್ಲೀಲ ಎಂಬ ಪದ ವಾಪಸ್ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ" ಎಂದರು.

ಸಿದ್ದರಾಮಯ್ಯಗೆ ವರುಣ ಕ್ಷೇತ್ರ ಬೆಟರ್ : ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು? ಎಂಬ ವಿಚಾರವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರ ಭೇಟಿ ಬಳಿಕ ಮಾಜಿ ಶಾಸಕ ಕೆ.ಎನ್ ರಾಜಣ್ಣ ಮಾತನಾಡಿದರು.

"ಸಿದ್ದರಾಮಯ್ಯಗೆ ವರುಣ ಕ್ಷೇತ್ರ ಬೆಟರ್. ಬೇಕಾದರೆ ನನ್ನ ಕ್ಷೇತ್ರ ಮಧುಗಿರಿಯನ್ನು ಬಿಟ್ಟು ಕೊಡುತ್ತೇನೆ. ನಮ್ಮಲ್ಲಿ ಸ್ಪರ್ಧೆ ಮಾಡಿದರೆ ದೊಡ್ಡ ಅಂತರದಿಂದ ಗೆಲ್ಲುತ್ತಾರೆ, ಮಧುಗಿರಿ ಕ್ಷೇತ್ರಕ್ಕೆ ಬಹಳ ಸಂತೋಷದಿಂದ ಆಹ್ವಾನ ಮಾಡುತ್ತೇನೆ. ಆದರೆ ಅವರ ಅಭಿಮಾನಿ, ಹಿತೈಷಿಯಾಗಿ ನಾನು ಹೇಳುತ್ತಿದ್ದೇನೆ. ಅವರು ವರುಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿ, ಅದು ಸೇಫ್. ಕಳೆದ ಚುನಾವಣೆಯಲ್ಲೇ ಹೇಳಿದ್ದೆ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಬೇಡ ಎಂದು ಆದರೆ ಅವರು ಅತಿಯಾದ ವಿಶ್ವಾಸವನ್ನು ಚಾಮುಂಡೇಶ್ವರಿ ಜನರ ಮೇಲೆ ಇಟ್ಟುಕೊಂಡಿದ್ದರು" ಎಂದರು.

Modis Garlanding To Kanakadasa, Valmiki Statues Is A Political Gimmick

"ಸಿದ್ದರಾಮಯ್ಯ ಅವರಿಗೆ ಕೋಲಾರ ಮಾತ್ರ ಅಲ್ಲ ಹಲವು ಕ್ಷೇತ್ರದಲ್ಲಿ ಆಹ್ವಾನ ಇದೆ. ಆದರೆ ವರುಣದಲ್ಲಿ ನಿಲ್ಲುವುದರಿಂದ ಅವರಿಗೆ ರಾಜ್ಯಾದ್ಯಂತ ಗಮನ ಕೊಡಲು ಅನುಕೂಲವಾಗುತ್ತದೆ. ನಾಯಕನಿಗೆ ಪಕ್ಷದ ಒಳಗೂ ಹೊರಗೂ ಕಾಲೆಳೆಯುವವರು ಇರ್ತಾರೆ.

ಅದನ್ನು ಎದುರಿಸಿ ಚುನಾವಣೆಯಲ್ಲಿ ಗೆದ್ದು ಬರಬೇಕು. ರಾಜಕಾರಣಿಗಳಿಗೆ ಬೆಳೆಯುತ್ತಿದ್ದಂತೆ ಪರ ವಿರೋಧ ಸಹಜ, ಸಿದ್ದರಾಮಯ್ಯ ಹಿಂದೆ ಮುಕುಡಪ್ಪ ಎಗಡೈ ಬಲಗೈ ಆಗಿದ್ದರು. ಆದರೆ ಇವಾಗ ಏನು ವ್ಯತ್ಯಾಸ ಆಗಿದೆ ಗೊತ್ತಿಲ್ಲ. ದೂರ‌ ಹೋದ ಬಳಿಕ ಅವಹೇಳನ ಮಾಡಬಾರದು,
ರಾಜಕಾರಣದಲ್ಲಿ ಷಡ್ಯಂತ್ರ ಸಹಜ" ಎಂದು ಹೇಳಿದರು.

English summary
Prime Minister Narendra Modi garlanding to Kanakadasa and Valmiki statue is a political gimmick said leader of opposition Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X