ಮೋದಿ ಎಂದರೆ ಏನು? ಅನುರಾಗ್ ಸಿಂಗ್ ಠಾಕೂರ್ ಕೊಟ್ಟ ಉತ್ತರವೇನು?

ಬೆಂಗಳೂರು, ಏಪ್ರಿಲ್‌ 05: ಮೋದಿ (ಎಂಒಡಿಐ) ಮಾಸ್ಟರ್ ಆಫ್ ಡಿಜಿಟಲ್ ಇನ್‍ಫರ್ಮೇಶನ್ ಅಥವಾ ಮೇಕರ್ ಆಫ್ ಡೆವಲಪ್‍ಡ್ ಇಂಡಿಯ 'ವಿಕಸಿತ ಭಾರತ' ಎಂದು ಕರೆಯಬಹುದು ಎಂದು ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಹೇಳಿದರು.

10 ವರ್ಷಗಳ ಹಿಂದೆ ಭಾರತ ಮತ್ತು ಭಾರತೀಯರು ಕಾಂಗ್ರೆಸ್ಸಿನ ಮತ್ತು ಆ ಸರಕಾರದ ಭಾಗೀದಾರ ಪಕ್ಷಗಳ ಭ್ರಷ್ಟಾಚಾರ ಹಗರಣಗಳಿಂದ ಮುಕ್ತಿ ಪಡೆಯುವುದು ಹೇಗೆ ಎಂದು ಚಿಂತಿಸುವ ಸ್ಥಿತಿ ಇತ್ತು. ಕಾಮನ್‍ವೆಲ್ತ್ ಗೇಮ್ಸ್ ಹಗರಣ, ಅಗಸ್ಟ ವೆಸ್ಟಂಡ್ ಹಗರಣ, ಕಲ್ಲಿದ್ದಲು ಹಗರಣ, ಅಂತರಿಕ್ಷ್ ದೇವಾಸ್ ಹಗರಣ ಮೊದಲಾದವುಗಳ ಬಗ್ಗೆ ಇಂದಿನ 18-22ರ ಹರೆಯದ ಯುವಜನರಿಗೆ ಅರಿವಿರಲಾರದು.

Modi Means Maker Of Developed India Says Anurag Singh Thakur

2009ರಿಂದ 2014ರ ನಡುವೆ ಒಂದಾದ ನಂತರ ಒಂದು ಹಗರಣಗಳು ನಡೆದವು. 2014ರಲ್ಲಿ ಅಭಿವೃದ್ಧಿ ಸ್ಥಗಿತವಾಗಿತ್ತು. ದೇಶದಲ್ಲಿ ಹಣದುಬ್ಬರ ಹೆಚ್ಚಾಗಿತ್ತು. ಅಸಮರ್ಪಕ ನೀತಿಯಿಂದ ದೇಶಕ್ಕೆ ಸಮಸ್ಯೆ ಉಂಟಾಗಿತ್ತು. ಆಗ ಬಿಜೆಪಿ ಪರ್ಯಾಯವಾಗಿ ಆಡಳಿತಕ್ಕೆ ಬಂತು. ಆಗ ನರೇಂದ್ರ ಮೋದಿ ಅವರ ನೇತೃತ್ವದ ಆಡಳಿತ ಆರಂಭವಾಯಿತು. ಸ್ವಚ್ಛ- ಪ್ರಾಮಾಣಿಕ ಆಡಳಿತವನ್ನು ನೀಡುವುದಾಗಿ ತಿಳಿಸಿದೆವು. ಕಳೆದ 10 ವರ್ಷಗಳಲ್ಲಿ ಮೋದಿಯವರ ವಿರುದ್ಧ ಹಾಗೂ ಅವರ ಸರಕಾರದ ಒಬ್ಬರೇ ಒಬ್ಬ ಸಚಿವರ ವಿರುದ್ಧ ಒಂದು ಪೈಸೆಯ ಭ್ರಷ್ಟಾಚಾರದ ಆರೋಪಗಳಿಲ್ಲ ಎಂದು ಗಮನ ಸೆಳೆದರು.

ಐಟಿ ಎಂದರೆ ಕೇವಲ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಅಲ್ಲ; ಅದನ್ನು ಇಂಡಿಯ ಟುಮಾರೊ (ಭವಿಷ್ಯದ ಭಾರತ) ಎಂದೂ ಅರ್ಥೈಸಬಹುದು. 2047ರ ವೇಳೆಗೆ ಅಭಿವೃದ್ಧಿ ಹೊಂದಿದ 'ವಿಕಸಿತ ಭಾರತ'ದ ಸಂಕಲ್ಪ

ಐಟಿ ಕುರಿತು ಮಾತನಾಡುವಾಗ ಇನ್‍ಫ್ರಾ (ಮೂಲಸೌಕರ್ಯ) ಮತ್ತು ಟೆಕ್ನಾಲಜಿ (ತಂತ್ರಜ್ಞಾನ) ಕುರಿತು ಮಾತನಾಡಬೇಕಾಗುತ್ತದೆ. ಸಾರ್ವಜನಿಕ ಮೂಲಸೌಕರ್ಯ, ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯ ಅಭಿವೃದ್ಧಿಗೆ ಕಳೆದ ವರ್ಷ 10 ಲಕ್ಷ ಕೋಟಿ ವ್ಯಯಿಸಿದ್ದರೆ, ಈ ವರ್ಷ 11 ಲಕ್ಷ ಕೋಟಿಗೂ ಹೆಚ್ಚು ವೆಚ್ಚ ಮಾಡುತ್ತಿದ್ದೇವೆ. ಐಟಿ ಎಂದರೆ ಇಂಡಿಯನ್ ಟ್ಯಾಲೆಂಟ್ ನಮ್ಮ ಜೊತೆಗಿದೆ. ಕೌಶಲ್ಯ ವೃದ್ಧಿ ಮೂಲಕ ಅದರ ಸಮರ್ಥ ಬಳಕೆ ಮಾಡುತ್ತಿದ್ದೇವೆ. ಇಂಡಿಯನ್ ಟ್ಯಾಲೆಂಟ್ ಭಾರತಕ್ಕೆ ಮಿಲಿಯಗಟ್ಟಲೆ ಹಣ, ಮಿಲಿಯಗಟ್ಟಲೆ ಉದ್ಯೋಗವನ್ನು ತರಬಲ್ಲದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಐಟಿ ಎಂದರೆ ಇಂಡಿಯನ್ ಟೂರಿಸಂಗೆ ಹೆಚ್ಚಿನ ಒತ್ತು ಕೊಡಲಾಗುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷವು ಇನ್‍ಕಂ ಟ್ಯಾಕ್ಸ್ ಕುರಿತು ಮಾತನಾಡುತ್ತಿದೆ ಎಂದು ನಗುತ್ತ ನುಡಿದರು. ಹಳೆಯ ರಾಜಕೀಯ ಪಕ್ಷವಾದ ಕಾಂಗ್ರೆಸ್ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿಲ್ಲ. ನೀವು ರಿಟರ್ನ್ ಫೈಲ್ ಮಾಡದೆ ಇದ್ದರೆ ನೋಟಿಸ್ ಸಿಗುತ್ತದೆ. ನಾವು ಕಾಂಗ್ರೆಸ್ ಪಕ್ಷವನ್ನು ಕಾನೂನಿನಿಂದ ಅತೀತ ಎಂದು ಭಾವಿಸಬೇಕೇ ಎಂದು ಅನುರಾಗ್ ಸಿಂಗ್ ಠಾಕೂರ್ ಅವರು ಪ್ರಶ್ನಿಸಿದರು.

ಆದಾಯ ತೆರಿಗೆ ಇಲಾಖೆಯ ನೋಟಿಸ್ ಮೇಲೆ ನೋಟಿಸ್‍ಗೆ ಕಾಂಗ್ರೆಸ್ ಪಕ್ಷ ಉತ್ತರ ಕೊಡಲಿಲ್ಲ. ಅವರ ದುರಹಂಕಾರಕ್ಕೆ ಇದೇ ಉದಾಹರಣೆ. ಅವರು ಕೋರ್ಟಿನಲ್ಲಿ ಸೋತರು. ಆದರೆ, ಭಾರತವು ಐಟಿ (ಆದಾಯ ತೆರಿಗೆ) ವಿಭಾಗದಲ್ಲಿ ಗೆದ್ದಿದೆ. ದೇಶದ ಆದಾಯ ತೆರಿಗೆ ಸಂಗ್ರಹ ಹೆಚ್ಚುತ್ತ ಸಾಗಿದೆ ಎಂದು ವಿವರ ನೀಡಿದರು.

ಐಟಿ ಕ್ಷೇತ್ರದಲ್ಲಿ ಪ್ರಸ್ತುತ ಎ ಎಂದರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್. ಬಿ ಎಂದರೆ ಭೀಮ್ ಯುಪಿಐ. ಇದು ವಿಶ್ವದ ಅತಿ ದೊಡ್ಡ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು. ಸಿ ಎಂದರೆ ಚಿಪ್. ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದಾಗ ಸೆಮಿ ಕಂಡಕ್ಟರ್ ಕ್ಷೇತ್ರಕ್ಕೆ ಆದ್ಯತೆ ಕೊಡುತ್ತಿದ್ದರೆ ನಾವು ತೈವಾನ್‍ನಂಥ ದೇಶದ ಮೇಲೆ ಅವಲಂಬನೆ ಮಾಡುವ ಅಗತ್ಯ ಇರಲಿಲ್ಲ. ಆದರೆ, ಭಾರತವು ಶೀಘ್ರವೇ ಸೆಮಿ ಕಂಡಕ್ಟರ್ ಕ್ಷೇತ್ರದಲ್ಲಿ ಆತ್ಮನಿರ್ಭರವಾಗಲಿದೆ.

3 ಸೆಮಿ ಕಂಡಕ್ಟರ್ ಘಟಕಗಳನ್ನು 1.14 ಲಕ್ಷ ಕೋಟಿ ವೆಚ್ಚದಲ್ಲಿ ಆರಂಭಿಸಲಿದೆ ಎಂದು ಅವರು ಹೇಳಿದರು. ಡಿ ಎಂದರೆ ಡೆವಲಪ್‍ಮೆಂಟ್ ಮತ್ತು ಡೇಟಾ ಎಂದು ಅವರು ನುಡಿದರು. ಭಾರತವು ವಿವಿಧ ಕ್ಷೇತ್ರಗಳಲ್ಲಿ ನಾಯಕನಾಗಿ ಹೊರಹೊಮ್ಮುತ್ತಿದೆ ಎಂದು ತಿಳಿಸಿದರು.

ಕ್ರೀಡೆಯಿಂದ ಬಾಹ್ಯಾಕಾಶ, ವಿಜ್ಞಾನದಿಂದ ಸ್ಟಾರ್ಟಪ್ ಕ್ಷೇತ್ರಗಳಲ್ಲಿ ಇದು ಭಾರತದ ಯುಗ. ವಿವಿಧ ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಭಾರತದ ಸಾಧನೆಯನ್ನು ವಿವರಿಸಿದ ಅವರು, ಚಂದ್ರಯಾನದ ಸಾಧನೆ, ಕೋವಿಡ್ ಲಸಿಕೆ ಉತ್ಪಾದನೆಯನ್ನು ಉದಾಹರಣೆ ನೀಡಿದರು. ಅಖಿಲೇಶ್ ಯಾದವ್, ಲಾಲೂ ಯಾದವ್, ರಾಹುಲ್ ಗಾಂಧಿಯವರು ಭಾರತ ಉತ್ಪಾದಿಸಿದ ಕೋವಿಡ್ ಲಸಿಕೆ ಬಳಸಬೇಡಿ ಎಂದಿದ್ದರು. ಆದರೆ, ನಾವು 2 ಹೊಸ ಲಸಿಕೆ ಸಂಶೋಧನೆ ಮಾಡಿ 220 ಕೋಟಿ ಲಸಿಕೆಗಳನ್ನು ನೀಡಿದೆವು ಎಂದು ವಿವರ ನೀಡಿದರು. ಇದಲ್ಲದೆ ನಾವು 100ಕ್ಕೂ ಹೆಚ್ಚು ದೇಶಗಳಿಗೆ ಲಸಿಕೆ ರಫ್ತು ಮಾಡಿದ್ದಾಗಿ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+