ನರೇಂದ್ರ ಮೋದಿಗೆ ಟ್ವೀಟ್ ಮೂಲಕ ತಿರುಗೇಟು ಕೊಟ್ಟ ಎಚ್‌ಡಿಕೆ
Recommended Video
ಬೆಂಗಳೂರು, ಏಪ್ರಿಲ್ 18 : 'ಕರ್ನಾಟಕದಲ್ಲಿ ಒಂದು ನಾಟಕ ನಡೆಯುತ್ತಿದೆ. ಅದರಲ್ಲಿ ಭಾವನೆ, ದ್ವೇಷವಿದೆ. ಭಾವನೆ ಹೆಚ್ಚಾದಾಗ ಮುಖ್ಯಮಂತ್ರಿಗಳು ಕಣ್ಣೀರು ಹಾಕುತ್ತಾರೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಟೀಕೆ ಮಾಡಿದ್ದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬಾಗಲಕೋಟೆಯಲ್ಲಿ ವಿಜಯ ಸಂಕಲ್ಪ ಯಾತ್ರೆ ಉದ್ದೇಶಿಸಿ ಗುರುವಾರ ಮಾತನಾಡಿದ ನರೇಂದ್ರ ಮೋದಿ ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಟ್ವಿಟರ್ ಮೂಲಕ ತಿರುಗೇಟು ನೀಡಿದ್ದಾರೆ.
'ಪ್ರಧಾನಿ ನರೇಂದ್ರ ಮೋದಿ ಅವರು ಜನರ ಭಾವನೆಗಳ ಜೊತೆ ಆಟವಾಡುತ್ತಿದ್ದಾರೆ. ಭಯೋತ್ಪಾದನೆ ಮತ್ತು ಧರ್ಮದ ವಿಚಾರ ಮುಂದಿಟ್ಟುಕೊಂಡು ಅವರು ಆಟವಾಡುತ್ತಿದ್ದಾರೆ' ಎಂದು ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಕರ್ನಾಟಕ ಪ್ರವಾಸ ಕೈಗೊಂಡಿದ್ದರು. ಬಾಗಲಕೋಟೆ ಮತ್ತು ಚಿಕ್ಕೋಡಿಯಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ್ದರು. ಎರಡೂ ಕ್ಷೇತ್ರದಲ್ಲಿ ಏಪ್ರಿಲ್ 23ರಂದು ಲೋಕಸಭಾ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಮೊದಲ ಹಂತದ ಮತದಾನ ಇಂದು ಮುಗಿದಿದೆ...
|
ಟಿವಿ ಚಾನೆಲ್, ಸಿನಿಮಾ ನಿಮಗೆ ಏಕೆ?
'ನಿಮ್ಮ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಂಬಿಕೆ ಇದ್ದರೆ ಪ್ರಚಾರಕ್ಕೆ ನಿಮಗೆ ಸಿನಿಮಾ, ಟಿವಿ ಚಾನೆಲ್ ಏಕೆ ಬೇಕು ಎಂದು' ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
|
ಉತ್ತಮ ಆಡಳಿತವನ್ನು ನೀಡಿದ್ದೀರಾ?
'ಪ್ರಧಾನಿಗಳೇ ನೀವು ಉತ್ತಮ ಆಡಳಿತವನ್ನು ನೀಡಿದ್ದರೆ. ನಿರುದ್ಯೋಗ ಸಮಸ್ಯೆ 45 ವರ್ಷಗಳಲ್ಲೇ ಏಕೆ ಅಧಿಕವಾಗಿದೆ?. ನೀವು ಹೇಳಿದಂತೆ ಕಪ್ಪು ಹಣ ವಾಪಸ್ ತಂದಿರಾ?' ಎಂದು ಪ್ರಶ್ನೆ ಮಾಡಿದ್ದಾರೆ.
|
ನರೇಗಾ ಹಣ ಖರ್ಚು ಮಾಡಿದಿರಾ?
ನರೇಗಾ ಹಣವನ್ನು ನೀಡು ಖರ್ಚು ಮಾಡಿದೀರಾ?. ನಿಮ್ಮ ತವರು ರಾಜ್ಯದಲ್ಲಿಯೇ 1500 ಕೋಟಿ ಹಣ ಖರ್ಚಾಗದೇ ಬಾಕಿ ಉಳಿದಿದೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ಮೋದಿ ಟೀಕಿಸಿದ್ದರು
'ಕರ್ನಾಟಕದಲ್ಲಿ ಒಂದು ನಾಟಕ ನಡೆಯುತ್ತಿದೆ. ಅದರಲ್ಲಿ ಭಾವನೆ, ದ್ವೇಷವಿದೆ. ಭಾವನೆ ಹೆಚ್ಚಾದಾಗ ಮುಖ್ಯಮಂತ್ರಿಗಳು ಕಣ್ಣೀರು ಹಾಕುತ್ತಾರೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಟೀಕೆ ಮಾಡಿದ್ದರು.












Click it and Unblock the Notifications