Budget 2024: ಮೋದಿ ಸರ್ಕಾರಕ್ಕೆ ಬಂತಾ ಬುದ್ಧಿ? ಉದ್ಯೋಗ ಸೃಷ್ಟಿಗೆ ಕೊನೆಗೂ ಆದ್ಯತೆ!
ನರೇಂದ್ರ ಮೋದಿ ಅವರ ಸರ್ಕಾರ ಸತತವಾಗಿ 3ನೇ ಬಾರಿಗೆ ಸರ್ಕಾರ ರಚನೆ ಮಾಡಿ ಹ್ಯಾಟ್ರಿಕ್ ಸಾಧನೆ ಮಾಡಿದೆ. ಹೀಗೆ 3ನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ಸರ್ಕಾರಕ್ಕೆ ಈ ಬಾರಿ ಬಹುಮತ ಸಿಕ್ಕಿಲ್ಲ. ಹೀಗಾಗಿ, ತನ್ನ ತಪ್ಪುಗಳನ್ನು ಸರಿ ಮಾಡಿಕೊಳ್ಳಲು ಮೋದಿ ಅವರ ಸರ್ಕಾರ ಮುಂದಾದಂತೆ ಕಾಣುತ್ತಿದ್ದು, ಕೊನೆಗೂ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೆ ಮುಂದಾಗಿದೆ! ಹಾಗಾದ್ರೆ ಬಜೆಟ್-2024ರ ಮೂಲಕ ಘೋಷಣೆ ಮಾಡಲಾಗಿರುವ ಹೊಸ ಹೊಸ ಉದ್ಯೋಗ ಸ್ನೇಹಿ ಯೋಜನೆಗಳು ಯಾವುವು?
2024ರ ಬಜೆಟ್ ಮಂಡನೆ ಮಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಿ, ಹಲವು ಯೋಜನೆ ಘೋಷಣೆ ಮಾಡಿದ್ದಾರೆ. ಹೀಗೆ ಭಾರತದ ಯುವಕರ ಭವಿಷ್ಯಕ್ಕೆ ಬೆಂಬಲ ನೀಡಲು ಮೋದಿ ಸರ್ಕಾರ ಮುಂದಾಗಿದೆ. ಭಾರತವು ಅಭಿವೃದ್ಧಿ ಕಡೆಗೆ ದಾಪುಗಾಲು ಇಡುತ್ತಿದ್ದು, ಇದಕ್ಕೆ ಪೂರಕವಾಗಿ ಭಾರತ ಯುವಕರಿಗೆ ಕೋಟಿ ಕೋಟಿ ಉದ್ಯೋಗಗಳ ಅಗತ್ಯತೆ ಇದೆ. ಹೀಗಾಗಿ ಮೋದಿ ಅವರ ಸರ್ಕಾರ ಈ ಬಾರಿ ಈ ಕೆಳಗಿನ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದೆ.

ಉದ್ಯೋಗ ಸೃಷ್ಟಿಗೆ ಮೊದಲ ಆದ್ಯತೆ
ಪ್ರಮುಖವಾಗಿ ಉತ್ಪಾದನಾ ವಲಯದಲ್ಲಿ ಉದ್ಯೋಗ ಸೃಷ್ಟಿ ಮಾಡಲು, ಇದೀಗ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಪ್ರಮುಖ ಯೋಜನೆ ಕೈಗೊಂಡಿದೆ. ಈ ಕುರಿತು ಮಾಹಿತಿ ನೀಡಿರುವ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು, ಯೋಜನೆ ಉತ್ಪಾದನಾ ವಲಯದಲ್ಲಿ ಹೆಚ್ಚುವರಿ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುತ್ತೆ. ಉದ್ಯೋಗದ ಮೊದಲ 4 ವರ್ಷದಲ್ಲಿ EPFO ಕೊಡುಗೆಯು ಉದ್ಯೋಗಕ್ಕೆ ಪ್ರವೇಶಿಸುವ 30 ಲಕ್ಷ ಯುವಕರು ಸೇರಿದಂತೆ ಅವರ ಉದ್ಯೋಗದಾತರಿಗೆ ಪ್ರಯೋಜನ ನೀಡಲಿದೆ ಎಂದು ತಿಳಿಸಿದ್ದಾರೆ. ಇದರ ಜೊತೆ ಇನ್ನೂ ಒಂದು ಮಹತ್ವದ ಯೋಜನೆ ಘೋಷಿಸಿದ್ದಾರೆ ಕೇಂದ್ರ ಹಣಕಾಸು ಸಚಿವರು.
ಲೋಕಸಭೆ ಸೋಲಿನಿಂದ ಸರ್ಕಾರಕ್ಕೆ ಪಾಠ?
ಪ್ರಧಾನ ಮಂತ್ರಿ ಪ್ಯಾಕೇಜ್ ಅಡಿಯಲ್ಲಿ, ಕೌಶಲ್ಯ & ರಾಜ್ಯ ಸರ್ಕಾರಗಳು ಹಾಗೂ ಉದ್ಯಮದೊಂದಿಗೆ ಸಹಯೋಗಕ್ಕಾಗಿ ಹೊಸ ಯೋಜನೆಯು ಜಾರಿಗೆ ಬರಲಿದ್ದು, 5 ವರ್ಷ ಅವಧಿಯಲ್ಲಿ ಒಂದು ಸಾವಿರ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನ ಮೇಲ್ದರ್ಜೆಗೆ ಏರಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಜೊತೆಯಲ್ಲಿ ಸುಮಾರು 20 ಲಕ್ಷ ಯುವಕರಿಗೆ ಪ್ರಯೋಜನ ಆಗಲಿದೆ. ಹಾಗೇ ಬಜೆಟ್‌ನಲ್ಲಿ ಇದೀಗ ಘೋಷಣೆ ಮಾಡಿರುವ ಹೊಸ ಉದ್ಯೋಗ ಯೋಜನೆಗಳ ಮೂಲಕ ಕೋಟ್ಯಂತರ ಯುವಕರಿಗೆ ಭವಿಷ್ಯದಲ್ಲಿ ಉದ್ಯೋಗ ಸಿಗುವುದು ಗ್ಯಾರಂಟಿ ಆಗಿದೆ. ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆಗೆ ಕಾರಣವಾದ ಅಂಶಗಳನ್ನು ಸರಿ ಮಾಡಲು ಇದೀಗ ಮೋದಿ ಅವರ ಸರ್ಕಾರ ಮುಂದಾದಂತೆ ಕಾಣುತ್ತಿದೆ.












Click it and Unblock the Notifications