Modi 3.0: 'ಗೆಲ್ಲಿಸಲು ಮಾತ್ರ ನಾವು ಬೇಕು: ಒಳ್ಳೆ ಖಾತೆ ನೀಡಲು ಆಗಲ್ವಾ'
ದೇಶದ ಪ್ರಧಾನಿ ಆಗಿ ಭಾನುವಾರ ಪ್ರಧಾನಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಬಾರಿ ಬಿಜೆಪಿ ಸಿಂಗಲ್ ಲಾರ್ಜೆಸ್ಟ್ ಪಾರ್ಟಿ ಆದರೂ ಸಹ, ಮ್ಯಾಜಿಕ್ ನಂಬರ್ ಏಕಾಂಗಿಯಾಗಿ ದಾಟಲು ಆಗಲಿಲ್ಲ. ಹೀಗಾಗಿ ಎನ್‌ಡಿಎ ಮೈತ್ರಿ ಕೂಟದೊಂದಿಗೆ ಸರ್ಕಾರ ರಚಿಸಿದೆ. ಈ ಸರ್ಕಾರದಲ್ಲಿ ಮೋದಿ ಸೇರಿದಂತೆ ಒಟ್ಟು 72 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಕರ್ನಾಟಕಕ್ಕೂ ಈ ಬಾರಿ ಬಂಪರ್ ಹೊಡೆದಿದೆ. ಮೂರು ಕ್ಯಾಬಿನೇಟ್ ಹಾಗೂ ಎರಡು ರಾಜ್ಯ ಖಾತೆಗಳು ರಾಜ್ಯದ ಪಾಲಾಗಿವೆ. ಧಾರವಾಡ ಲೋಕಸಭಾ ಕ್ಷೇತ್ರದಿಂದ ಜಯ ಸಾಧಿಸಿರುವ ಪ್ರಲ್ಹಾದ್ ಜೋಶಿ ಅವರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ನೀಡಲಾಗಿದೆ. ಇದರ ಜೊತೆಗೆ ನವೀಕರಿಸಬಹುದಾದ ಇಂಧನ ಇಲಾಖೆಯ ಜವಾಬ್ದಾರಿ ಸಹ ನೀಡಲಾಗಿದೆ. ಮಂಡ್ಯ ಕ್ಷೇತ್ರದಿಂದ ಜಯ ಸಾಧಿಸಿರುವ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ದೊರೆತಿದೆ. ಇನ್ನು ರಾಜ್ಯದಿಂದ ರಾಜ್ಯ ಸಭೆಗೆ ಪ್ರವೇಶಿಸುವ ನಿರ್ಮಲಾ ಸೀತಾರಾಮನ್ ಅವರಿಗೆ ಹಣಕಾಸು ಸಚಿವ ಸ್ಥಾನ ಸಿಕ್ಕಿದೆ.

ಬೆಂಗಳೂರು ಉತ್ತರ ಭಾಗದಲ್ಲಿ ಗೆದ್ದ ಶೋಭಾ ಕರಂದ್ಲಾಜೆ ಹಾಗೂ ತುಮಕೂರ ಕ್ಷೇತ್ರದಿಂದ ಆಯ್ಕೆ ಆಗಿರುವ ವಿ ಸೋಮಣ್ಣ ಅವರಿಗೆ ರಾಜ್ಯ ಖಾತೆಗಳನ್ನು ನೀಡಲಾಗಿದೆ. ಆದರೆ ಮೋದಿ ಸರ್ಕಾರದ ಈ ನಡೆಯ ವಿರುದ್ಧ ಈಗ ಈ ಸಮುದಾಯ ತೀವ್ರ ಬೇಸರಗೊಂಡಿದೆ. ಅಲ್ಲದೆ ಮತ ಹಾಕಿ ಗೆಲ್ಲಿಸಲು ನಾವು ಬೇಕು, ನಮ್ಮ ಜನಾಂಗದ ನಾಯಕರಿಗೆ ಕ್ಯಾಬಿನೇಟ್ ದರ್ಜೆಯ ಖಾತೆಯನ್ನು ನೀಡಲು ಆಗಲಿಲ್ಲ ಎಂದು ತಮ್ಮ ಬೇಸರವನ್ನು ವ್ಯಕ್ತ ಪಡಿಸುತ್ತಿವೆ.
'ಕೆಲಸಕ್ಕೆ ನಾವು ಬೇಕು'
ಬಿಜೆಪಿ ರಾಜ್ಯದಲ್ಲಿ ಈ ಬಾರಿ ಕಳೆದ ಬಾರಿಯಂತಹ ಸಾಧನೆಯನ್ನು ಮಾಡದೇ ಇದ್ದರೂ ಸಹ, ಸ್ಥಿರ ಪ್ರದರ್ಶನ ನೀಡಿ 17 ಸ್ಥಾನಗಳನ್ನು ಗೆದ್ದು ಕೊಂಡಿದೆ. ಇನ್ನು ಮೈತ್ರಿ ಪಕ್ಷ ಜೆಡಿಎಸ್ 2 ಸಂಸದರನ್ನು ಸೇರಿಸಿದರೆ ಒಟ್ಟು 19 ಜನರನ್ನು ರಾಜ್ಯ ಆಯ್ಕೆ ಮಾಡಿದೆ. ಆದರೆ ಈ ಸಮುದಾಯವನ್ನು ಕಡೆಗಣಿಸಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.

ಕ್ಯಾಬಿನೇಟ್ ಸಚಿವರಾಗಿ ನಿರ್ಮಲಾ ಸೀತಾರಮನ್ ಹಾಗೂ ಪ್ರಲ್ಹಾದ್ ಜೋಶಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಲಿಂಗಾಯತ ಸಮುದಾಯಕ್ಕೆ ಕೇವಲ ಒಂದು ಸಚಿವ ಸ್ಥಾನವನ್ನು ನೀಡಲಾಗಿದೆ. ಮೋದಿ ಸರ್ಕಾರದಲ್ಲಿ ಲಿಂಗಾಯತರನ್ನು ಕಡೆಗಣನೆ ಮಾಡಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಕೆಲಸಕ್ಕೆ ಮಾತ್ರ ಲಿಂಗಾಯತರು ಬೇಕು ಎಂದು ನಾಯಕರು ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ.
ಮೋದಿ ಸರ್ಕಾರದ ವಿರುದ್ಧ ಅಸಮಾಧಾನ
ಮೋದಿ ಸರ್ಕಾರ ತಮ್ಮ ಸಮುದಾಯವನ್ನು ಹೀಗೆ ಕಡೆಗಣನೆ ಮಾಡಿದ್ದೆ ಆದಲ್ಲಿ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ಸಮುದಾಯದ ಮುಖಂಡರು ತಿಳಿಸಿದ್ದಾರೆ. ಈ ಬಾರಿ ಸಂಸತ್‌ಗೆ ಅನುಭವಿ ಲಿಂಗಾಯತ ಸಮುದಾಯದ ನಾಯಕರು ಕಾಲಿಟ್ಟಿದ್ದಾರೆ. ಅಲ್ಲದೆ ಇಬ್ಬರು ರಾಜ್ಯದ ಮುಖ್ಯಮಂತ್ರಿಗಾಳಿ ಕಾರ್ಯವನ್ನು ನಿರ್ವಹಿಸಿದ ಅನುಭವ ಇದೆ. ಹೀಗಾಗಿ ಯಾರಿಗಾದರೂ ಒಬ್ಬರಿಗೆ ಈ ಅವಕಾಶವನ್ನು ನೀಡಬಹುದಿತ್ತು. ಅಲ್ಲದೆ ಹೊಸ ಬರಿಗೆ ಮಣೆ ಹಾಕುವ ಆಶಯ ಇದ್ದಿದ್ದರೆ, ಬೇರೆ ಮುಖಗಳತ್ತ ನೋಡಬಹುದಿತ್ತು ಎಂದು ಮುಖಂಡರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.












Click it and Unblock the Notifications