ಅಕ್ಟೋಬರ್ 28ರವರೆಗೆ ಬೆಂಗಳೂರು, ದಕ್ಷಿಣ ಒಳನಾಡಿನಲ್ಲಿ ಮಳೆ
ಬೆಂಗಳೂರು, ಅಕ್ಟೋಬರ್ 23: ಮಳೆ ನಾಪತ್ತೆಯಾಗಿದ್ದ ಉದ್ಯಾನನಗರಿಯಲ್ಲಿ ಮತ್ತೆ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಮುನ್ಸೂಚನೆ ನೀಡುವ 'ಸ್ಕೈಮೆಟ್ ವೆದರ್' ವೆಬ್ಸೈಟ್ ವರದಿ ಮಾಡಿದೆ.
ಕಳೆದ ಮೂರು ನಾಲ್ಕು ದಿನಗಳಿಂದ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಮಳೆ ನಾಪತ್ತೆಯಾಗಿದೆ.

ಆದರೆ ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಬೀಸಲು ಆರಂಭಿಸಿದ್ದು ಕರ್ನಾಟಕಕ್ಕೆ ಮಳೆ ಹೊತ್ತು ತರುವ ಸಾಧ್ಯತೆ ಇದೆ. ಅಕ್ಟೋಬರ್ 25 ಅಥವಾ 26ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಆರಂಭವಾಗಬಹುದು ಎಂದು ಸ್ಕೈಮೆಟ್ ವೆದರ್ ಹೇಳಿದೆ.
ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಅಕ್ಟೋಬರ್ 28ರವರೆಗೆ ಹಗುರವಾಗಿ ಮಳೆ ಬೀಳಲಿದೆ. ಉತ್ತರ ಒಳನಾಡು ಕರ್ನಾಟಕದಲ್ಲಿಯೂ ತುಂತುರು ಮಳೆ ಬೀಳಬಹುದು ಎಂದು ವೆಬ್ಸೈಟ್ ವರದಿ ಮಾಡಿದೆ.












Click it and Unblock the Notifications