ಸಿದ್ದರಾಮಯ್ಯಗೆ ಲೋಕಸಭೆ ಟಿಕೆಟ್ ಕೊಡಿ: ಹೈಕಮಾಂಡ್‌ ಮೇಲೆ ಒತ್ತಡ

Recommended Video

      ಸಿದ್ದರಾಮಯ್ಯಗೆ ಹೈಕಮಾಂಡ್ ಕೊಡುತ್ತಾ ಭರ್ಜರಿ ಆಫರ್..! | Oneindia Kannada

      ಬೆಂಗಳೂರು, ಜನವರಿ 25: ರಾಜ್ಯ ರಾಜಕಾರಣದಲ್ಲಿ ಕಿಂಗ್ ಪಿನ್ ಆಗಿರುವ ಸಿದ್ದರಾಮಯ್ಯ ಅವರಿಗೆ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಬೇಕು ಎಂದು ಕೆಲವು ಶಾಸಕರು ಮುಖಂಡರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮೇಲೆ ಒತ್ತಡ ಹಾಕಿದ್ದಾರೆ.

      ಸಿದ್ದರಾಮಯ್ಯ ಅವರಿಗೆ ದಾವಣಗೆರೆಯಿಂದ ಟಿಕೆಟ್ ನೀಡಬೇಕೆಂದು ಕೆಲವರು ಬೇಡಿಕೆ ಇಟ್ಟಿದ್ದರೆ, ಮೈಸೂರು-ಕೊಡಗು ಕ್ಷೇತ್ರದಿಂದ ಟಿಕೆಟ್ ನೀಡಬೇಕು ಎಂದು ಇನ್ನು ಕೆಲವು ಕಾಂಗ್ರೆಸ್ ಶಾಸಕರು ನಿನ್ನೆ ನಡೆದ ಸಭೆಯಲ್ಲಿ ವೇಣುಗೋಪಾಲ್ ಬಳಿ ಮನವಿ ಮಾಡಿದ್ದಾರೆ.

      ದಾವಣಗೆರೆ ಕ್ಷೇತ್ರದಲ್ಲಿ ಕುರುಬ ಸಮುದಾಯದ ಬಹೊದೊಡ್ಡ ಮತಬ್ಯಾಂಕ್ ಇದ್ದು ಅಲ್ಲಿಂದ ಸಿದ್ದರಾಮಯ್ಯ ಅವರಿಗೆ ಟಿಕೆಟ್ ನೀಡಿದರೆ ಗೆಲುವು ಅತಿ ಸುಲಭ ಎಂದು ಕೆಲ ಶಾಸಕರು ಹೇಳಿದ್ದಾರೆ. ಅವರಲ್ಲದಿದ್ದರೆ ಅದೇ ಸಮುದಾಯದವರಾದ ಎಚ್‌.ಎಂ.ರೇವಣ್ಣ ಅವರಿಗೆ ಟಿಕೆಟ್‌ ನೀಡಿ ಎಂದು ಕೇಳಿದ್ದಾರೆ.

      ಮೈಸೂರು-ಕೊಡಗು ಭಾಗದಿಂದ ಟಿಕೆಟ್?

      ಮೈಸೂರು-ಕೊಡಗು ಭಾಗದಿಂದ ಟಿಕೆಟ್?

      ಹಳೆ ಮೈಸೂರು ಭಾಗದ ಕೆಲವು ಶಾಸಕರು, ಸಿದ್ದರಾಮಯ್ಯ ಅವರಿಗೆ ಮೈಸೂರು-ಕೊಡಗು ಭಾಗದ ಟಿಕೆಟ್ ನೀಡಿ ಎಂದು ಮನವಿ ಮಾಡಿದ್ದಾರೆ. ಆ ಕ್ಷೇತ್ರವು ಕಾಂಗ್ರೆಸ್ ಹಿಡಿತದಿಂದ ತಪ್ಪುತ್ತಿದ್ದು, ಕ್ಷೇತ್ರವನ್ನು ಮರಳಿ ಪಡೆಯಬೇಕೆಂದರೆ ಸಿದ್ದರಾಮಯ್ಯ ಅವರಿಗೆ ಅಲ್ಲಿಂದಲೇ ಟಿಕೆಟ್ ನೀಡುವುದು ಸೂಕ್ತ ಎಂದು ಕೆಲವರು ಹೇಳಿದ್ದಾರೆ.

      ಮುಂಚೆಯೂ ಈ ಚರ್ಚೆ ಆಗಿತ್ತು

      ಮುಂಚೆಯೂ ಈ ಚರ್ಚೆ ಆಗಿತ್ತು

      ಈ ಮುಂಚೆಯೂ ಸಹ ಸಿದ್ದರಾಮಯ್ಯ ಅವರಿಗೆ ಲೋಕಸಭೆ ಟಿಕೆಟ್ ನೀಡುವ ಬಗ್ಗೆ ಚರ್ಚೆಗಳಾಗಿತ್ತು. ದೇವೇಗೌಡರು ಸಹ ಸಿದ್ದರಾಮಯ್ಯ ಅವರು ಲೋಕಸಭೆ ಚುನಾವಣೆಗೆ ನಿಲ್ಲುವುದಾದರೆ ಜೆಡಿಎಸ್ ಬೆಂಬಲ ನೀಡುತ್ತದೆ ಎಂದು ಘೋಷಿಸಿದ್ದರು.

      ಲೋಕಸಭೆ ಚುನಾವಣೆಗೆ ಸ್ಪರ್ಧಿಸಲ್ಲ ಎಂದಿದ್ದರು ಸಿದ್ದರಾಮಯ್ಯ

      ಲೋಕಸಭೆ ಚುನಾವಣೆಗೆ ಸ್ಪರ್ಧಿಸಲ್ಲ ಎಂದಿದ್ದರು ಸಿದ್ದರಾಮಯ್ಯ

      ಸಿದ್ದರಾಮಯ್ಯ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮೊದಲೇ ಸ್ಪಷ್ಟಪಡಿಸಿದ್ದರು. ರಾಜ್ಯ ರಾಜಕಾರಣದಲ್ಲಿ ಈಗಲೂ ಸೂಪರ್ ಸಿಎಂ ಸ್ಥಾನದಲ್ಲಿರುವ ಸಿದ್ದರಾಮಯ್ಯ ಅವರು ರಾಜ್ಯ ರಾಜಕರಾಣ ಬಿಟ್ಟು ಹೊರ ಹೋಗುವ ಇರಾದೆಯನ್ನು ಎಂದೂ ವ್ಯಕ್ತಪಡಿಸಿಲ್ಲ.

      ಹೈಕಮಾಂಡ್ ಒತ್ತಡ ಹೇರಿದರೆ ಆಯ್ಕೆ ಇಲ್ಲ

      ಹೈಕಮಾಂಡ್ ಒತ್ತಡ ಹೇರಿದರೆ ಆಯ್ಕೆ ಇಲ್ಲ

      ಲೋಕಸಭೆ ಚುನಾವಣೆಗೆ ಸ್ಪರ್ಧಿಸಲೇ ಬೇಕು ಎಂದು ಹೈಕಮಾಂಡ್ ಒತ್ತಡ ಹೇರಿದರೆ ಸಿದ್ದರಾಮಯ್ಯ ಅವರಿಗೆ ಆಯ್ಕೆ ಇಲ್ಲದಾಗುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಅವರೇನಾದರೂ ಲೋಕಸಭೆಗೆ ಹೊರಟರೆ ಕಾಂಗ್ರೆಸ್‌ನಲ್ಲಿನ ಸಿದ್ದರಾಮಯ್ಯ ವಿರೋಧಿ ಬಣ ಬಲಶಾಲಿಯಾಗುತ್ತದೆ. ಜೆಡಿಎಸ್‌ ಪಕ್ಷಕ್ಕೆ ಮೂಗುದಾರವಾಗಿರುವ ಸಿದ್ದರಾಮಯ್ಯ ಲೋಕಸಭೆಗೆ ಹೋಗುವುದು ಜೆಡಿಎಸ್‌ಗೆ ಸಹ ಬೇಕಾಗಿದೆ. ಆದರೆ ಇದು ಸಿದ್ದರಾಮಯ್ಯ ಅವರಿಗೆ ಮತ್ತು ಅವರ ಬೆಂಬಲಿಗರಿಗೆ ಇಷ್ಟವಿಲ್ಲ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+