ಜೆಡಿಎಸ್ ಸಮಾವೇಶ, ಜಮೀರ್ ಫೋಟೋ ನಾಪತ್ತೆ!

ಬೆಂಗಳೂರು, ಜ. 24 : ಸದಸ್ಯತ್ವ ಅಭಿಯಾನವನ್ನು ಆರಂಭಿಸಲಿರುವ ಜೆಡಿಎಸ್ ಅದರ ಅಂಗವಾಗಿ ಅರಮನೆ ಮೈದಾನದಲ್ಲಿ ಶನಿವಾರ ಬೃಹತ್ ಸಮಾವೇಶ ಏರ್ಪಡಿಸಿದೆ. ಆದರೆ, ಬೆಂಗಳೂರಿನ ಚಾಮರಾಜ ಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಭಾವ ಚಿತ್ರ ಸಮಾವೇಶನ ನಡೆಯುವ ಸ್ಥಳದಲ್ಲಿನ ಯಾವ ಫ್ಲೆಕ್ಸ್‌ನಲ್ಲಿಯೂ ಇಲ್ಲ.

ಹಿಂದಿನ ಸುದ್ದಿ : ಜೆಡಿಎಸ್ ಪಕ್ಷದಲ್ಲಿರುವ ಭಿನ್ನಾಭಿಪ್ರಾಯ ಮತ್ತೊಮ್ಮೆ ಬಹಿರಂಗವಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜೆಡಿಎಸ್ ಸಮಾವೇಶದಿಂದ ಶಾಸಕ ಜಮೀರ್ ಅಹ್ಮದ್ ಖಾನ್ ದೂರವುಳಿದಿದ್ದಾರೆ.

rally

ಸದಸ್ಯತ್ವ ಅಭಿಯಾನವನ್ನು ಆರಂಭಿಸಲಿರುವ ಜೆಡಿಎಸ್ ಅದರ ಅಂಗವಾಗಿ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಏರ್ಪಡಿಸಿದೆ. ಆದರೆ, ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಸಮಾವೇಶದಿಂದ ದೂರವುಳಿದಿದ್ದು, ಪಕ್ಷದ ನಾಯಕರ ವಿರುದ್ಧದ ಅಸಮಾಧಾನ ಹೊರಹಾಕಿದ್ದಾರೆ. [ಶಾಸಕಾಂಗ ಸಭೆಗೆ ಶಾಸಕ ಜಮೀರ್ ಗೈರು]

Zameer Ahmed Khan

'ರಾಜ್ಯಾಧ್ಯಕ್ಷರಾಗಲಿ, ಪಕ್ಷದ ಯಾವುದೇ ನಾಯಕರಾಗಲಿ ಸಮಾವೇಶಕ್ಕೆ ಬರುವಂತೆ ನನಗೆ ಆಹ್ವಾನ ನೀಡಿಲ್ಲ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ನಾನು ತೊಡಗಿಕೊಂಡಿದ್ದು, ಅರಮನೆ ಮೈದಾನಕ್ಕೆ ಹೋಗುವುದಿಲ್ಲ' ಎಂದು ಜಮೀರ್ ಅಹ್ಮದ್ ಖಾನ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. [50 ಲಕ್ಷ ಸದಸ್ಯರ ನೋಂದಣಿ ಜೆಡಿಎಸ್ ಟಾರ್ಗೆಟ್]

2014ರ ಸೆಪ್ಟೆಂಬರ್ 3ರಂದು ನಡೆದ ಶಾಸಕಾಂಗ ಪಕ್ಷದ ಸಭೆಗೂ ಜಮೀರ್ ಅಹ್ಮದ್ ಖಾನ್ ಗೈರು ಹಾಜರಾಗಿದ್ದರು. ಕುಮಾರಸ್ವಾಮಿ ಮತ್ತು ಜಮೀರ್ ಅಹ್ಮದ್ ನಡುವೆ ಭಿನ್ನಾಭಿಪ್ರಾಯವಿದ್ದು, ಅದು ಬಗೆಹರಿದಿಲ್ಲ. ಪಕ್ಷದ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಜಮೀರ್ ಕೆಲವು ದಿನಗಳ ಹಿಂದೆ ಹೇಳಿದ್ದರು. ಅದರಂತೆ ಇಂದು ಸಮಾವೇಶಕ್ಕೆ ಗೈರು ಹಾಜರಾಗಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ರಾಜ್ಯದಲ್ಲಿ ಸದಸ್ಯತ್ವ ಅಭಿಯಾನವನ್ನು ಆರಂಭಿಸಿವೆ. ಜೆಡಿಎಸ್ ಸಹ ಪಕ್ಷವನ್ನು ಗಟ್ಟಿಗೊಳಿಸಲು ಸದಸ್ಯತ್ವ ಅಭಿಯಾನವನ್ನು ಆರಂಭಿಸಲಿದ್ದು, ಕನಿಷ್ಠ 50 ಲಕ್ಷ ಸದಸ್ಯರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಿದೆ. ಈ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಅರಮನೆ ಮೈದಾನದಲ್ಲಿ ಇಂದು ಚಾಲನೆ ದೊರೆಯಲಿದೆ. ಅದಕ್ಕಾಗಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+