ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯ ಮರೆಯಾಗಿ ತುಘಲಕ್ ದರ್ಬಾರ್ ಮಿತಿಮೀರಿದೆ: ಬಿಜೆಪಿ
ಬೆಂಗಳೂರು, ಅಕ್ಟೋಬರ್ 03: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸ್ವತಃ ಶಾಸಕರೇ ದಿನಕ್ಕೊಬ್ಬರಂತೆ ಬೀದಿಗಿಳಿದು ಅಸಮಾಧಾನ ಹೊರ ಹಾಕುವ ಮಟ್ಟಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಹದಗೆಟ್ಟಿದೆ ಎಂದು ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್‌ನ ಕಾಗವಾಡ ಶಾಸಕ ರಾಜು ಕಾಗೆ ಅವರು, ಮೊನ್ನೆಯಷ್ಟೇ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು. ಈ ಸಂಬಂಧ ಟ್ವೀಟ್ ಮೂಲಕ ಕರ್ನಾಟಕ ಬಿಜೆಪಿಯು ರಾಜ್ಯ ಸರ್ಕಾರದ ಆಡಳಿತ ಕಾರ್ಯ ನಿರ್ವಹಣೆ ಬಗ್ಗೆ ವ್ಯಂಗ್ಯವಾಡಿದೆ.

ಶಾಸಕಾಂಗ ಮತ್ತು ಕಾರ್ಯಾಂಗ ನಡುವೆ ತಾಳಮೇಳವಿಲ್ಲದೆ ಹಳಿ ತಪ್ಪಿ ಅರಾಜಕತೆ ಸೃಷ್ಟಿಯಾಗಿದೆ ಎಂದು ಕಾಂಗ್ರೆಸ್ಸಿನ ಕಾಗವಾಡ ಶಾಸಕ ರಾಜು ಕಾಗೆ ಹೇಳಿರುವುದು ವಾಸ್ತವಿಕ ಸತ್ಯ. ರಾಜ್ಯದಲ್ಲಿ ಸಾಮಾಜಿಕ ನ್ಯಾಯ ಎನ್ನುವುದೇ ಮರೆಯಾಗಿದ್ದು ತುಘಲಕ್ ದರ್ಬಾರ್ ಮಿತಿಮೀರಿದೆ ಎಂದು ಬಿಜೆಪಿ ಆರೋಪಿಸಿದೆ.
ಸ್ವತಃ @INCKarnataka ಶಾಸಕರೇ ದಿನಕ್ಕೊಬ್ಬರಂತೆ ಬೀದಿಗಿಳಿದು ಅಸಮಾಧಾನ ಹೊರ ಹಾಕುವ ಮಟ್ಟಕ್ಕೆ ರಾಜ್ಯದಲ್ಲಿ @siddaramaiah ಅವರ ಸರ್ಕಾರದ ಆಡಳಿತ ವೈಖರಿ ಹದಗೆಟ್ಟಿದೆ.
— BJP Karnataka (@BJP4Karnataka) October 3, 2023
ಶಾಸಕಾಂಗ ಮತ್ತು ಕಾರ್ಯಾಂಗ ನಡುವೆ ತಾಳಮೇಳವಿಲ್ಲದೆ ಹಳಿ ತಪ್ಪಿ ಅರಾಜಕತೆ ಸೃಷ್ಟಿಯಾಗಿದೆ ಎಂದು ಕಾಂಗ್ರೆಸ್ಸಿನ ಕಾಗವಾಡ ಶಾಸಕ ರಾಜು ಕಾಗೆ ಹೇಳಿರುವುದು ವಾಸ್ತವಿಕ… pic.twitter.com/Uq89UlbNkI
ಶಾಸಕರ ಅಸಮಧಾನಕ್ಕೆ ಕಾರಣವೇನು?, ಹೇಳಿದ್ದೇನು?
ವರ್ಗಾವಣೆ ವಿಚಾರವಾಗಿ ಶಾಸಕರ ಅಸಮಾಧಾನ ಘಟನೆಯ ಬಳಿಕ ಅಂತದ್ದೆ ವಿಚಾರವಾಗಿ ಸರ್ಕಾರ ಸುದ್ದಿಯಾಗುತ್ತಿದೆ. ಇದನ್ನು ಬಲವಾಗಿ ಅಸ್ತ್ರವೆಂಬಂತೆ ಬಳಸುತ್ತಿರುವ ಬಿಜೆಪಿ ಸಿದ್ದರಾಮಯ್ಯ ಮತ್ತವರ ಸರ್ಕಾರವನ್ನು ಕಟುಕುತ್ತಲೇ ಇದೆ. ಅಷ್ಟಕ್ಕೂ ಶಾಸಕ ರಾಜು ಕಾಗೆ ಅವರು ಹೇಳಿದ್ದು ಏನು ತಿಳಿಯಿರಿ.

ಗ್ರಾಮೀಣ ಪ್ರದೇಶದಲ್ಲಿ ದಿನದ 24 ಗಂಟೆಗಳಲ್ಲಿ ಕೇವಲ ಮೂರರಿಂದ ನಾಲ್ಕು ಗಂಟೆಗಳ ಮಾತ್ರ ವಿದ್ಯುತ್ ಇರುತ್ತದೆ. ಉಳಿದ ಸಮಯ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸಂಕಷ್ಟಕ್ಕೆ ಸಿಲುಕುವವರು ಮೊದಲು ರೈತರು. ಸರ್ಕಾರ ಇವರತ್ತ ಗಮನವೇ ಹರಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಹಿರಂಗವಾಗಿಯೇ ಸರ್ಕಾರದ ಆಡಳಿತ ವಿರುದ್ಧ ಅವರು ಅಸಮಾಧಾನ ಹೊರ ಹಾಕಿದರು.
ಸರ್ಕಾರದ ವೈಫಲ್ಯಕ್ಕೆ ಕಾಗೆ ಬೇಸರ
ಸರ್ಕಾರ ಸುಲಲಿತವಾಗಿ ನಡೆಯಬೇಕಾದರೆ, ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಒಟ್ಟಿಗೆ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು. ಹೀಗಾದರೆ ಮಾತ್ರವೇ ದೇಶ ಕಟ್ಟಲು ಸಾಧ್ಯವಾಗುತ್ತದೆ. ಅತ್ತ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ನಾವು ಸರಿಯಾಗಿ ಕೆಲಸ ಮಾಡಲು ಆಗುತ್ತಿಲ್ಲ. ಇದರಲ್ಲಿ ಸರ್ಕಾರದ ಸಂಪೂರ್ಣ ವೈಫಲ್ಯ ಇದೆ ಎಂದು ಅವರು ರಾಜು ಕಾಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications