Janardhana Reddy: ಗ್ಯಾರಂಟಿ ಘೋಷಣೆಗಳ ಅನುಷ್ಠಾನದ ಬಗ್ಗೆ ಜನಾರ್ದನ ರೆಡ್ಡಿ ಹೇಳಿದ್ದೇನು?

ಕೊಪ್ಪಳ,ಜೂನ್‌ 01: ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸಿದ ತಕ್ಷಣ ಗ್ಯಾರಂಟಿ ಯೋಜನೆ ಜಾರಿಯಾಗುತ್ತೆ ಅಂದುಕೊಂಡಿದ್ದೇವು. ಅದು ಆಗಲಿಲ್ಲ, ಇನ್ನೂ ಬಹಳಷ್ಟು ತೊಂದರೆಗಳಿವೆ. ನಾವು ಕಾದು ನೋಡುತ್ತೇವೆ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹೇಳಿದರು.

ಈ ಕುರಿತು ಗುರುವಾರ ಗಂಗಾವತಿಯಲ್ಲಿ ಶಾಲಾ ಮಕ್ಕಳಿಗೆ ಪುಸ್ತಕ ಹಾಗು ಸಮವಸ್ತ್ರ ವಿತರಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಘೋಷಣೆಗಳು ಜೂನ್ 1 ರಂದು ಜಾರಿಗೆ ಆಗುತ್ತೆ ಅಂತ ಹೇಳಿದ್ರು. ಇದೀಗ ಗ್ಯಾರಂಟಿ ಯೋಜನೆ ಜಾರಿ ಮಾಡಲು ಮುಂದೂಡಲಾಗುತ್ತಿದೆ. ಸಿಎಂ ಸಭೆ ಮೇಲೆ ಸಭೆ ಮಾಡ್ತಾ ಇದ್ದಾರೆ. ನಾವು ಕಾದು ನೋಡುತ್ತೇವೆ ಎಂದು ತಿಳಿಸಿದರು.

MLA Janardhana Reddy

ಸಿದ್ದರಾಮಯ್ಯ ಸಾಮಾನ್ಯ ಮುಖ್ಯಮಂತ್ರಿ ಅಲ್ಲ. ಅವರು ಹಣಕಾಸು ಖಾತೆಯನ್ನು ನಿರ್ವಹಿಸಿದವರು. ಈಗ ಗ್ಯಾರಂಟಿ ಘೋಷಣೆಗಳ ಅನುಷ್ಠಾನ ಹಾಗು ಅಭಿವೃದ್ದಿಗೆ ಯಾವ ರೀತಿಯಾಗಿ ಅನುಷ್ಠಾನಗೊಳಿಸುತ್ತಾರೆ ಎಂಬುವದನ್ನು ಕಾದು ನೋಡೋಣ. ಅದು ಹೇಗೆ ಜಾರಿ ಮಾಡ್ತಾರೆ ಅಂತಾ ನೋಡುತ್ತೇವೆ. ಕೊಟ್ಟ ಮಾತು ಉಳಿಸಿಕೊಳ್ತಾರೆ ಅನ್ನೋದನ್ನು ನಾನು ಕಾದು ನೋಡುತ್ತೇವೆ ಎಂದರು.

ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೇಶದಲ್ಲಿ ಉತ್ತಮ ಬಜೆಟ್ ಕೊಟ್ಟ ರಾಜಕಾರಣಿ. ಅವರಿಗೆ ಎಲ್ಲಾ ತಿಳುವಳಿಕೆ ಇದೆ. ಅವರು ರಾಜ್ಯದ ಅಭಿವೃದ್ಧಿ ಮತ್ತು ಗ್ಯಾರಂಟಿ ಯೋಜನೆಗಳನ್ನು ಕೊಡುತ್ತಿನಿ ಅಂತ ಹೇಳಿದ್ದಾರೆ. ಅದಕ್ಕಾಗಿ ಅವರಿಗೆ ಸಮಯ ಕೊಡೋಣ. ಆ ಮೇಲೆ ಗ್ಯಾರಂಟಿ ಯೋಜನೆ ಬಗ್ಗೆ ಪ್ರತಿಕ್ರಿಯೆ ಕೊಡುತ್ತೇನೆ ಎಂದು ತಿಳಿಸಿದರು.

MLA Janardhana Reddy

ಇತ್ತ ಗ್ಯಾರಂಟಿ ಯೋಜನೆಯಲ್ಲಿ ಒಂದಾಗಿರುವ ಅನ್ನ ಭಾಗ್ಯ ಯೋಜನೆಯಡಿ ಸರ್ಕಾರ 10 ಕೆ ಜಿ ಅಕ್ಕಿ ನೀಡುವುದಾಗಿ ಹೇಳಿದೆ. ಹೀಗಾಗಿ ಕರ್ನಾಟಕಕ್ಕೆ ಅಕ್ಕಿಯನ್ನು ಪೂರೈಕೆ ಮಾಡುವ ಶಕ್ತಿ ಗಂಗಾವತಿಗೆ ಇದೆ. ಗಂಗಾವತಿಯಿಂದಲೇ ಅಕ್ಕಿ ಖರೀದಿಯನ್ನು ಸರ್ಕಾರ ಮಾಡುತ್ತೆ ಎನ್ನುವ ನಂಬಿಕೆ ಇದೆ. ನಾನು ಸರ್ಕಾರಕ್ಕೆ ಒತ್ತಾಯ‌ ಮಾಡುತ್ತೇನೆ. ಬೇರೆ ರಾಜ್ಯದಿಂದ ಅಕ್ಕಿ ಖರೀದಿ ಮಾಡೋದು ಬೇಡ ನಮ್ಮ ಗಂಗಾವತಿಯಿಂದಲೇ ಅಕ್ಕಿ ಸಿಗುತ್ತೆ ಎಂದ ಜನಾರ್ದನ ರೆಡ್ಡಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+