ಕುಮಾರಸ್ವಾಮಿ ವಿರುದ್ದ ಅಸಮಾಧಾನಗೊಂಡು ಪಕ್ಷ ತೊರೆದ ಶಾಸಕ; 100% ಕಾಂಗ್ರೆಸ್‌ ನಿಂದ ಗೆಲ್ಲುವೆ : ಗುಬ್ಬಿ ಶ್ರೀನಿವಾಸ್‌

ಬೆಂಗಳೂರು,ಮಾರ್ಚ್27:‌ ರಾಜ್ಯ ವಿಧಾನಸಭಾ ಚುನಾವಣೆಗೆ ವೇದಿಕೆ ಸಜ್ಜಾಗಿದ್ದು, ಹಲವು ರಾಜಕೀಯ ಪಕ್ಷಗಳು ಈ ಬಾರಿ ರಾಜ್ಯದ ಅಧಿಕಾರದ ಗದ್ದುಗೆ ಏರಲು ತಯಾರಿ ನಡೆಸುತ್ತಿವೆ. ಇತ್ತ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಹಲವು ನಾಯಕರು ಚುನಾವಣೆ ಹೊತ್ತಲಿ ಪಕ್ಷಾಂತರ ಪರ್ವವನ್ನ ಆರಂಭಿಸಿದ್ದಾರೆ.

ಈಗಾಗಲೇ ತುಮಕೂರಿನ ಗುಬ್ಬಿ ಕ್ಷೇತ್ರದ ಮಾಜಿ ಸಚಿವ ಹಾಗೂ ಜೆಡಿಎಸ್ ಉಚ್ಛಾಟಿತ ಶಾಸಕ ಎಸ್ ಆರ್ ಶ್ರೀನಿವಾಸ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಾರ್ಚ್‌ 31 ಕ್ಕೆ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ ಸೇರ್ಪಡೆಗೆ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನ ಗುಬ್ಬಿ ಶ್ರೀನಿವಾಸ್‌ ಭೇಟಿಯಾಗಿ ಒಪಕ್ಷ ಸೇರ್ಪಡೆ ಕುರಿತು ದಿನಾಂಕ ನಿಗದಿಪಡಿಸಿದ್ದಾರೆ ಎನ್ನಲಾಗಿದೆ.

MLA Gubbi Srinivas Declares That He Will Join Congress On March 31

ಸೋಮವಾರ ವಿಧಾನಸೌಧದಲ್ಲಿ ಸ್ಪೀಕರ್ ಕಾಗೇರಿ ಅವರನ್ನ ಭೇಟಿಯಾಗಿ ಗುಬ್ಬಿ ಶ್ರೀನಿವಾಸ್ ರಾಜೀನಾಮೆ ಸಲ್ಲಿಸಲಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, 20 ವರ್ಷ ಜೆಡಿಎಸ್‌ ಪಕ್ಷದ ಜೊತೆ ಒಡನಾಟ ಇಟ್ಟುಕೊಂಡಿದ್ದೆ. ಈಗ ಪಕ್ಷ ಬಿಡೋಕೆ ನೋವಾಗುತ್ತಿದೆ. ನಾನು ಪಕ್ಷ ಬಿಡೋ ಯೋಚನೆ ‌ಮಾಡಿರಲಿಲ್ಲ, ಆದರೆ, 2021 ರಲ್ಲಿ ಕುಮಾರಸ್ವಾಮಿ ನನ್ನ ವಿರುದ್ದ ಅಭ್ಯರ್ಥಿ ಘೋಷಣೆ ಮಾಡಿದ್ರು ಎಂದು ಮಾಜಿ ಮುಖ್ಯಮಂತ್ರಿ ಎಸ್‌ ಡಿ ಕುಮಾರಸ್ವಾಮಿ ವಿರುದ್ದ ಅಸಮಾಧಾನ ಹೊರಹಾಕಿದರು.

ನನ್ನ ವಿರುದ್ದ ಅಭ್ಯರ್ಥಿ ಘೋಷಣೆ ಮಾಡಿದ್ರೂ, ಹೀಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ರಾಜೀನಾಮೆಯನ್ನ ಸ್ಪೀಕರ್ ಪರಿಶೀಲನೆ ಮಾಡ್ತೀನಿ ಅಂತ ಹೇಳಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಜೊತೆ ಉತ್ತಮ ಸಂಬಂಧ ಇತ್ತು. ಅಣ್ಣ ತಮ್ಮನ ರೀತಿ ಇದ್ದೆವು, ಯಾರು ಏನ್ ಹೇಳಿದರೋ ಗೊತ್ತಿಲ್ಲ. ನನ್ನ ವಿರುದ್ಧ ಅಭ್ಯರ್ಥಿ ಘೋಷಣೆ ಮಾಡಿದ್ರು.
ವಿಧಿ ಇಲ್ಲದೆ ರಾಜೀನಾಮೆ ಕೊಟ್ಟಿದೇನೆ ಎಂದು ಬೇಸರ ವ್ಯಕ್ತಪಡಿಸಿದರು.

MLA Gubbi Srinivas Declares That He Will Join Congress On March 31

ಗುಬ್ಬಿಯಲ್ಲಿ ನಾನು ಇದ್ದ ದಿನವೇ ಕುಮಾರಸ್ವಾಮಿ ಅಭ್ಯರ್ಥಿ ಘೋಷಣೆ ಮಾಡಿದರು, ಪಕ್ಷದಲ್ಲಿ ಮಾನ್ಯತೆ ಇಲ್ಲದೆ ಹೋದರೆ ಹೇಗೆ ಇರುವುದು. ಭಾರದ ಮನಸ್ಸಿನಿಂದ ರಾಜೀನಾಮೆ ಕೊಟ್ಟಿದ್ದೇನೆ. ಕಾಂಗ್ರೆಸ್ ‌ಸೇರ್ಪಡೆ ಆಗ್ತೀನಿ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡುತ್ತೇನೆ. ಮಾರ್ಚ್ 31 ರಂದು ಕಾಂಗ್ರೆಸ್ ‌ಪಕ್ಷವನ್ನ ಸೇರ್ಪಡೆ ಆಗುತ್ತೇನೆ. ನನ್ನ ಕಾರ್ಯಕರ್ತರು ನನ್ನ ಜೊತೆ ಇದ್ದಾರೆ. 100% ಕಾಂಗ್ರೆಸ್ ನಿಂದ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಚಿವರು ಹಾಗೂ ಜೆಡಿಎಸ್‌ ನಾಯಕರಾದ ಜಿಡಿ ದೇವೇಗೌಡರ ವಿರುದ್ದ ಕುಮಾರಸ್ವಾಮಿ ಅಷ್ಟೆಲ್ಲ ಮಾತನಾಡಿದರು. ಅಮೇಲೆ ದೇವೇಗೌಡ, ಕುಮಾರಸ್ವಾಮಿ ರಾಜೀ ಮಾಡಿದ್ರು, ನಾನು ಪಕ್ಷ ಬಿಡಲ್ಲ ಅಂದ್ರು ಯಾರು ಬಂದು ನನ್ನ ಬಳಿ ಮಾತಾಡಲಿಲ್ಲ, ನನ್ನನ್ನ ಯಾರು ಕರೆದು ಮಾತಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

MLA Gubbi Srinivas Declares That He Will Join Congress On March 31

ದೇವೇಗೌಡರು ನನಗೆ ಮಗನ ತರ ನೋಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಸಮದ್ಯೆ ಇದ್ದರೂ ಸಂಘಟನೆಯ ವಿಚಾರದಲ್ಲಿ ರಾಜಿ ಮಾಡಿಸ್ತಿದ್ರು. ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ 31ಕ್ಕೆ ಸೇರ್ಪಡೆ ಯಾಗುತ್ತೇನೆ. ಕಾಂಗ್ರೆಸ್ ನ ಎಲ್ಲ ವರಿಷ್ಠರೊಂದಿಗೆ ಮಾತುಕತೆ ಮಾಡ್ತೇನೆ ಎಂದು ಹೇಳಿದರು.

ಇನ್ನೂ ನಾನು ಅಡ್ಡ ಮತದಾನ ಮಾಡಿದ್ದೀನಿ ಅಂತ ಕುಮಾರಸ್ವಾಮಿ ಯಾವ ಆಧಾರದಲ್ಲಿ ಹೇಳಿದ್ರೋ ಗೊತ್ತಿಲ್ಲ. ಅವರೇ ಅಡ್ಡ ಮತದಾನ ಮಾಡಿಸಿ ನನ್ನ ತಲೆಗೆ ಕಟ್ಟಿದ್ರು ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಗುಬ್ಬಿ ಶ್ರೀನಿವಾಸ್ ವಾಗ್ದಾಳಿ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+