Get Updates
Get notified of breaking news, exclusive insights, and must-see stories!

NEP: ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ಬಸನಗೌಡ ಯತ್ನಾಳ್

ಬೆಂಗಳೂರು, ನವೆಂಬರ್ 20: ಕರ್ನಾಟಕದಲ್ಲಿ ಆಡಳಿತಕ್ಕೆ ಬಂದ ಕಾಂಗ್ರೆಸ್ ಪಕ್ಷವು ಬಿಜೆಪಿ ಅಧಿಕಾರಾವಧಿಯಲ್ಲಿ ಜಾರಿ ಆಗಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (National Education Policy) ರದ್ದುಗೊಳಿಸುವುದಾಗಿ ಘೋಷಿಸಿತ್ತು. ಇದಕ್ಕೆ ಬಿಜೆಪಿಯು ವ್ಯಾಪಕವಾಗಿ ಖಂಡಿಸಿತ್ತು. ಇದೀಗ ಇದಕ್ಕೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಸಹ ಧ್ವನಿಗೂಡಿಸಿದ್ದಾರೆ. ರಾಜ್ಯಕ್ಕೆ ಎನ್‌ಇಪಿ ಅಗತ್ಯತೆ ಇದೆ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಸೋಮವಾರ ಸಂಜೆ ಸಾಮಾಜಿಕ ಜತಾಲಾಣ X ನಲ್ಲಿ ಟ್ವೀಟ್ ಮಾಡಿರುವ ಅವರು, NEP ಬಾಲ್ಯದ ಆರೈಕೆ ಮತ್ತು ಶಿಕ್ಷಣದ ಪ್ರಾಮುಖ್ಯತೆಯನ್ನು ಗುರುತಿಸುತ್ತದೆ. ಇದು ಅಧಿಕಾರಾವಧಿ, ಬಡ್ತಿ ಮತ್ತು ಸಂಬಳ ರಚನೆಯ ದೃಢವಾದ ಅರ್ಹತೆ ಆಧಾರಿತ ರಚನೆಯನ್ನು ಹೈಲೈಟ್ ಮಾಡುವ ಗುರಿಯನ್ನು ಹೊಂದಿದೆ ಎಂದು ನೂತನ ಶಿಕ್ಷಣ ನೀತಿಯ ಮಹತ್ವ ತಿಳಿಸಿದರು.

MLA Basanagouda Patil Yatnal Reaction About NEP ban In Karnataka

ರಾಷ್ಟ್ರೀಯ ಶಿಕ್ಷಣ ನೀತಿಯು ಶಾಲೆಗಳಲ್ಲಿ ಬೋಧನಾ ಮಾಧ್ಯಮವಾಗಿ ಸ್ಥಳೀಯ ಭಾಷೆಗಳ ಬಳಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ನೀತಿ ಅಡಿಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಆರಾಮದಾಯಕ ಮತ್ತು ಉತ್ತಮವಾಗಿ ಪಠ್ಯವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು.

ಈ NEP ಜಾರಿಯಾದ ಬಳಿಕ ಶಿಕ್ಷಣದಲ್ಲಿ ತಂತ್ರಜ್ಞಾನದ ಬಳಕೆ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ವೃತ್ತಿಪರ ಮತ್ತು ಕೌಶಲ್ಯ ಆಧಾರಿತ ತರಬೇತಿಯ ಏಕೀಕರಣಕ್ಕೆ ಆದ್ಯತೆ ನೀಡಲಾಗುತ್ತದೆ. ಹೀಗೆ ನಮ್ಮ ಪದವೀಧರರು ಹೆಚ್ಚು ಉದ್ಯೋಗಶೀಲರು ಮತ್ತು ಕೌಶಲ್ಯಪೂರ್ಣರಾಗುತ್ತಾರೆ. ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಪರಿವರ್ತಿಸಲು ಎನ್‌ಇಪಿ ಸಮಯದ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.

ಎನ್‌ಇಪಿ ನಿಷೇಧಿಸುವುದಾಗಿ ಸಿಎಂ ಹೇಳಿಕೆ

ಬಿಜೆಪಿ ವಿರೋಧ ಪಕ್ಷದ ನಾಯಕ ಆಕಾಂಕ್ಷಿಯಾಗಿದ್ದ ಶಾಸಕ ಯತ್ನಾಳ್ ಅವರಿಗೆ ನಿರಾಸೆಯಾಗಿದೆ. ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ಅವರನ್ನು ಪಕ್ಷ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ವಾರ ಕಳೆದಿದೆ. ಹೊಸ ರಾಜ್ಯಾಧ್ಯಕ್ಷರಿಗೂ ಮೊದಲು ಯತ್ನಾಳ್ ಅವರು ಎನ್ಇಪಿ ನಿಷೇಧ ಕುರಿತು, ರಾಜ್ಯದ ಮಕ್ಕಳಿಗೆ ಎನ್‌ಇಪಿ ಅಗತ್ಯತೆ ಮೇಲೆ ಮಾತನಾಡಿದ್ದಾರೆ. ಈ ಮೂಲಕ ಸರ್ಕಾರ ಎನ್‌ಇಪಿ ನಿಷೇಧ ನಿರ್ಧಾರದ ವಿರುದ್ಧ ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ತಾನು ಅಧಿಕಾರಕ್ಕೆ ಬರುತ್ತಿದ್ದಂತೆ ರಾಷ್ಟ್ರೀಯ ಶಿಕ್ಷಣ ನಿತಿಯನ್ನು ತೆಗೆಯುವುದಾಗಿ ತಿಳಿಸಿತ್ತು. ಅದರಂತೆ ಈ ನೀತಿಯನ್ನು ಶೀಘ್ರವೇ ನಿಷೇಧಿಸಲಾಗುವುದು ಎಂದು ಖುದ್ದು ಸಿಎಂ ಸಿದ್ದರಾಮಯ್ಯನವರೇ ಹೇಳಿದ್ದರು. ಇದು ಬಿಜೆಪಿ ಸಿದ್ಧಾಂತದ ಅಂಶಗಳು ಇದರಲ್ಲಿವೆ ಅಂತಲೂ ಕೆಲವರು ಆರೋಪಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+