ಜನವರಿಗೆ ಕಾಂಗ್ರೆಸ್‌ ಸರ್ಕಾರ ಪತನ, ಬಿಜೆಪಿ ಅಧಿಕಾರಕ್ಕೆ: ಯತ್ನಾಳ್ ಭವಿಷ್ಯ

ಹುಬ್ಬಳ್ಳಿ, ಸೆಪ್ಟಂಬರ್ 17: ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದು 100 ದಿನ ಕಳೆದರೂ ಸಹಿತ ಬಿಜೆಪಿಯಲ್ಲಿ ವಿಪಕ್ಷ ನಾಯಕನ ಆಯ್ಕೆ ಏಕೆ ಆಗಿಲ್ಲ ಎಂಬುದಕ್ಕೆ ಕಾರಣ ನೀಡುವ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೊಸ ಸರ್ಕಾರದ ಬಾಂಬ್ ಸಿಡಿಸಿದ್ದಾರೆ.

ಹೌದು, ಬಿಜೆಪಿ ವಿರೋಧ ಪಕ್ಷ ನಾಯಕ ಆಯ್ಕೆ ಆಗಿಲ್ಲ. ಹೇಗಿದ್ದರೂ ಈ ಸರ್ಕಾರ ಜನವರಿ ಹೊತ್ತಿಗೆ ಬೀಳಲಿದೆ. ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ನಾವು ವಿರೋಧ ಪಕ್ಷ ನಾಯಕನ ಆಯ್ಕೆ ಮಾಡಿಲ್ಲ ಎಂದು ಅವರು ಭವಿಷ್ಯ ನುಡಿದರು.

MLA Basanagouda Patil Yatnal Predicts State congress Govt Fall Down, slams on CM And DCM

ಭಾನುವಾರ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಜನವರಿ ಹೊತ್ತಿಗೆ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ. ಅವರ ಪಕ್ಷದವರೇ ಸರ್ಕಾರ ಬೀಳಿಸಲಿದ್ದಾರೆ. ಆಗ ನಾವೇ ನೇರವಾಗಿ ಮುಖ್ಯಮಂತ್ರಿಗಳಾಗಬಹುದು. ನಮ್ಮ ಪಕ್ಷದವರೆ ಸಿಎಂ ಯಾಕಾಗಬಾರದು ಎಂದು ಅವರು ಹೊಸ ಬಾಂಬ್ ಸಿಡಿಸಿದರು.

ಸಿದ್ದರಾಮಯ್ಯರನ್ನು ಕೆಳಗಿಸಲು ತಂತ್ರ

ಇನ್ನೂ ಮುಖ್ಯಮಂತ್ರಿ ಸಿದ್ದರಾಯ್ಯನವರ ವಿರುದ್ಧ ಅವರ ಪಕ್ಷದವರೇ ಆದ ಬಿಕೆ ಹರಿಪ್ರಸಾದ್ ಅವರು ಯಾರ ಕುಮ್ಮಕ್ಕಿನಿಂದ ಮಾತನಾಡುತ್ತಾರೆ. ಸಿಎಂ ಅನ್ನು ಕೆಳಗಿಳಿಸಲು ತಂತ್ರ ನಡೆಸಿದ್ದಾರೆ. ವೇಟಿಂಗ್ ಸಿಎಂ ವಿರುದ್ಧ ಬಿಕೆ ಹರಿಪ್ರಸಾದ್ ಅಸಮಾಧಾನಗೊಂಡಿದ್ದಾರೆ. ಸರ್ಕಾರ ಬೀಳುವುದು ಖಚಿತವಾಗಿದ್ದು, ಕಾಂಗ್ರೆಸ್‌ ಸುಮಾರು 40ಕ್ಕೂ ಅಧಿಕ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಕುಟುಕಿದರು.

ಮುಂಬರಲಿರುವ ಲೋಕಸಭಾ ಚುನಾವಣೆ ಮಹತ್ವ ಹೊಂದಿದೆ. ಕಳೆದ ಬಾರಿ 28 ಸ್ಥಾನಗಳ ಪೈಕಿ 25 ಸ್ಥಾನವನ್ನು ಬಿಜೆಪಿ ಪಡೆದಿದೆ. ಈ ಬಾರಿ ಎಲ್ಲ ಸ್ಥಾನ ಪಡೆಯುತ್ತೇವೆ. ಸರ್ಕಾರ ಹೊಡೆಯುತ್ತೇವೆ ಎಂದು ಟಿವಿ ನೈನ್ ವರದಿ ಮಾಡಿದೆ.

MLA Basanagouda Patil Yatnal Predicts State congress Govt Fall Down, slams on CM And DCM

ಸರ್ಕಾರ ತಾನಾಗಿಯೇ ಬೀಳಲಿದೆ

ಇನ್ನೂ ಬಸವರಾಜ ರಾಯರೆಡ್ಡಿ ಅವರು ಅಸಮಾಧಾನ ಹೊರ ಹಾಕಿದ್ದು, ನಾವು ನೀವು ಕೂಡಿಯೇ ಎಂಪಿ ಆಗೋಣ ಎಂದಿದ್ದಾರೆ. ಕಾಂಗ್ರೆಸ್‌ನಲ್ಲಿ ಅಸಮಾಧಾನ ಹೆಚ್ಚಾಗಿದೆ. ಸರ್ಕಾರ ತಾನಾಗಿಯೇ ಬೀಳಲಿದೆ. ಹೀಗಿದ್ದರೂ ಬಿಜೆಪಿಗರನ್ನು ಸೆಳೆಯಲು ಕಾಂಗ್ರೆಸ್ ನೋಡುತ್ತಿದೆ ಎಂದು ವ್ಯಂಗ್ಯವಾಡಿದರು.

ಇನ್ನೂ ಬಿಜೆಪಿ-ಜೆಡಿಎಸ್ ಮೈತ್ರಿ ದೆಹಲಿ ಹೈಕಮಾಂಡ್ ಗೆ ಬಿಟ್ಟ ವಿಚಾರ. ನಾವು ರಾಜ್ಯ ರಾಜಕಾರಣ ಬಗ್ಗೆ ತಲೆ ಕೆಡಿಸಿಕೊಳ್ಳುತ್ತೇವೆ. ಮೈತ್ರಿ ಬಗ್ಗೆ ಅಂತಿಮ ತೀರ್ಮಾನ ಕೇಂದ್ರ ನಾಯಕರು ಮಾಡಲಿದ್ದಾರೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+