ಗಣಪತಿ ಆತ್ಮಹತ್ಯೆ: ಪ್ರಣಬ್ ಮೊಹಾಂತಿಗೆ ಸಿಐಡಿ 120 ಪ್ರಶ್ನೆ

Written By:
Subscribe to Oneindia Kannada

ಬೆಂಗಳೂರು, ಆಗಸ್ಟ್, 27: ಡಿವೈಎಸ್ ಪಿ ಎಂಕೆ ಗಣಪತಿ ಆತ್ಮಹತ್ಯೆ ಸಂಬಂಧ ಸಿಐಡಿ ಅಧಿಕಾರಿಗಳು ಐಪಿಎಸ್ ಅಧಿಕಾರಿ ಪ್ರಣಬ್ ಮೊಹಾಂತಿ ಅವರನ್ನು ಶನಿವಾರ ವಿಚಾರಣೆ ಮಾಡಿದ್ದಾರೆ.

ಮೊಹಾಂತಿ ಅವರಿಗೆ ಸಿಐಡಿ ಅಧಿಕಾರಿಗಳು 120 ಕ್ಕೂ ಅಧಿಕ ಪ್ರಶ್ನೆಗಳನ್ನು ಕೇಳಿದ್ದಾರೆ, ಮೊಹಾಂತಿ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದ್ದಾರೆ ಎನ್ನಲಾಗಿದೆ.[ಸಿಐಡಿ ಅಧಿಕಾರಿಗಳು ಜಾರ್ಜ್‌ಗೆ ಕೇಳಿದ ಪ್ರಶ್ನೆಗಳೇನು?]

ips

ನೀವು ಗಣಪತಿ ಅವರನ್ನು ಎಷ್ಟು ಸಾರಿ ಭೇಟಿ ಮಾಡಿದ್ರಿ? ಯಾವ ಯಾವ ಸಂದರ್ಭ ಅವರನ್ನು ಕರೆಸಿಕೊಂಡಿದ್ರಿ? ಇಲಾಖೆಗೆ ಸಂಬಂಧಿಸಿದ ಒತ್ತಡವನ್ನು ಅವರ ಮೇಲೆ ಹೇರಿಕೆ ಮಾಡಿದ್ರಾ? ಎಂಬ ಹಲವಾರು ಪ್ರಶ್ನೆಗಳನ್ನು ಸಿಐಡಿ ಅಧಿಕಾರಿಗಳು ಕೇಳಿದ್ದಾರೆ.

ಸುಮಾರು ಮೂರು ಗಂಟೆಗೂ ಅಧಿಕ ಕಾಲ ಮೊಹಾಂತಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ನಿನ್ನೆ ಅಂದರೆ ಶುಕ್ರವಾರ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಅಧಿಕಾರಿಗಳು ಮಾಜಿ ಸಚಿವ ಕೆ ಜೆ ಜಾರ್ಜ್ ಅವರ ವಿಚಾರಣೆ ನಡೆಸಿತ್ತು.[ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದ Timeline]

ಕೇಂದ್ರ ಸೇವೆಗೆ ತೆರಳಿದ್ದ ಮೊಹಾಂತಿ
ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಐಪಿಎಸ್ ಅಧಿಕಾರಿ ಪ್ರಣಬ್ ಮೊಹಾಂತಿ ಅವರ ಲೋಕಾಯುಕ್ತ ಐಜಿಪಿ ಹುದ್ದೆಯಿಂದ ಕೇಂದ್ರದ ಸೇವೆಗೆ ತೆರಳಿದ್ದು. ಗಣಪತಿ ತಮ್ಮ ಸಾವಿಗೂ ಮುನ್ನ ನೀಡಿರುವ ಮಾಧ್ಯಮ ಸಂದರ್ಶನದಲ್ಲಿ ಮಾಜಿ ಸಚಿವ ಕೆ ಜೆ ಜಾರ್ಜ್, ಲೋಕಾಯುಕ್ತ ಐಜಿಪಿಯಾಗಿದ್ದ ಪ್ರಣಬ್ ಮೊಹಾಂತಿ, ಗುಪ್ತಚರ ವಿಭಾಗದ ಎಡಿಜಿಪಿಯಾಗಿದ್ದ ಎ.ಎಂ.ಪ್ರಸಾದ್ ಅವರ ಹೆಸರನ್ನು ಉಲ್ಲೇಖ ಮಾಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
CID investigators questioned Deputy director-general of Aadhaar IPS officer Pranab Mohanty on Saturday over Mangaluru DySP Ganapathy's suicide case. CID DySP Shridhar questioned Pranab Mohanty at the CID headquarters in Bengaluru in connection with Ganapathy's suicide.
Please Wait while comments are loading...