ಎಂಕೆ ಗಣಪತಿ ಆತ್ಮಹತ್ಯೆ : ಸದನದಲ್ಲಿ ಯಾರು, ಏನು ಹೇಳಿದರು?

Posted By:
Subscribe to Oneindia Kannada

ಬೆಂಗಳೂರು, ಜುಲೈ 12 : ಮಂಗಳೂರು ಐಜಿ ಕಚೇರಿ (ಪಶ್ಚಿಮ ವಲಯ) ಡಿವೈಎಸ್‌ಪಿ ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣ ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಕೋಲಾಹಲ ಎಬ್ಬಿಸಿದೆ. ಸೋಮವಾರ ಪೂರ್ತಿ ಇದೇ ವಿಚಾರದ ಬಗ್ಗೆ ಚರ್ಚೆ ನಡೆದಿದ್ದು, ಮಂಗಳವಾರವೂ ಉಭಯ ಸದನಗಳಲ್ಲಿ ಈ ವಿಚಾರ ಪ್ರತಿಧ್ವನಿಸಲಿದೆ.

ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪಟ್ಟು ಹಿಡಿದಿವೆ. [ಅಧಿವೇಶನ: ಗಣಪತಿ ಆತ್ಮಹತ್ಯೆಯದ್ದೇ ಚರ್ಚೆ]

'ಆತ್ಮಹತ್ಯೆ ರೈತನದ್ದೇ ಆಗಲಿ, ಪೊಲೀಸ್ ಅಧಿಕಾರಿಯದ್ದೇ ಆಗಲಿ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರತಿಪಕ್ಷಗಳ ಸದಸ್ಯರ ಚರ್ಚೆಗೆ ಉತ್ತರ ನೀಡುತ್ತೇವೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ. [ಜಾರ್ಜ್ ವಿರುದ್ಧ FIR ದಾಖಲಿಸಿ : ಓದುಗರ ಒಕ್ಕೊರಲ ಕೂಗು]

ಸೋಮವಾರ ವಿಧಾನಸಭೆಯಲ್ಲಿ ಜಗದೀಶ್ ಶೆಟ್ಟರ್ ಅವರು ಗಣಪತಿ ಅವರ ಆತ್ಮಹತ್ಯೆ ಬಗ್ಗೆ ಮಾತನಾಡಿದ್ದಾರೆ. ಮಂಗಳವಾರ ಎಚ್.ಡಿ.ಕುಮಾರಸ್ವಾಮಿ ಅವರು ಮಾತನಾಡಲಿದ್ದಾರೆ. ಅತ್ತ ವಿಧಾನಪರಿಷತ್ತಿನಲ್ಲಿಯೂ ಚರ್ಚೆ ನಡೆಯಲಿದ್ದು, ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ವಿಷಯದ ಕುರಿತು ಮಾತನಾಡಲಿದ್ದಾರೆ. ಸೋಮವಾರ ಕಲಾಪದಲ್ಲಿ ಯಾರು ಏನು ಹೇಳಿದರು? ಇಲ್ಲಿವೆ ವಿವರಗಳು...... [ವಿಡಿಯೋ - ಡಿವೈಎಸ್ ಪಿ ಗಣಪತಿ ಕಡೇ ಸಂದರ್ಶನ]

'ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ'

'ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ'

'ಸಚಿವ ಕೆ.ಜೆ.ಜಾರ್ಜ್ ಅವರಿಗೆ ಸೂಕ್ಷ್ಮತೆ ಇದ್ದರೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಿತ್ತು. ಇಲ್ಲವೇ ಮುಖ್ಯಮಂತ್ರಿಗಳು ಅವರ ರಾಜೀನಾಮೆ ಪಡೆಯಬೇಕಿತ್ತು. ಮೂರು ತಿಂಗಳ ಗಡುವಿನಲ್ಲಿ ತನಿಖೆ ಪೂರ್ಣಗೊಳಿಸಿ ಅವರ ತಪ್ಪಿಲ್ಲ ಎಂದು ಸಾಬೀತಾದರೆ ಪುನಃ ಸಂಪುಟಕ್ಕೆ ಸೇರಿಸಿಕೊಳ್ಳಲಿ' ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದರು.

'ಸರ್ಕಾರ ಗಂಭೀರವಾಗಿ ಪರಿಗಣಿಸಿದೆ'

'ಸರ್ಕಾರ ಗಂಭೀರವಾಗಿ ಪರಿಗಣಿಸಿದೆ'

'ರೈತ ಅಥವ ಪೊಲೀಸ್ ಅಧಿಕಾರಿ ಯಾವುದೇ ಪ್ರಕರಣವಾಗಲಿ ಸರ್ಕಾರ ಲಘುವಾಗಿ ಅದನ್ನು ಪರಿಗಣಿಸುವುದಿಲ್ಲ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರತಿಪಕ್ಷಗಳ ಸದಸ್ಯರ ಚರ್ಚೆಗೆ ಉತ್ತರ ನೀಡುತ್ತೇವೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

'ಹೇಳಿಕೆ ಪಡೆಯುವಲ್ಲಿ ಸಾಕಷ್ಟು ಡ್ರಾಮಾ ನಡೆದಿದೆ'

'ಹೇಳಿಕೆ ಪಡೆಯುವಲ್ಲಿ ಸಾಕಷ್ಟು ಡ್ರಾಮಾ ನಡೆದಿದೆ'

'ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಪತ್ನಿ ಅಥವ ಮಕ್ಕಳಿಂದ ಅಧಿಕೃತವಾಗಿ ಹೇಳಿಕೆ ಪಡೆಯಬೇಕು. ಆದರೆ, ಗಣಪತಿ ವಿಚಾರದಲ್ಲಿ ಸಾಕಷ್ಟು ಡ್ರಾಮಾ ನಡೆದಿದೆ. ಯಾವುದೇ ಸರ್ಕಾರಕ್ಕೆ ಇದು ಗೌರವ ತರುವ ವಿಚಾರವಲ್ಲ' ಎಂದು ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ಹೇಳಿದರು.

'ಇದು ಜಾರ್ಜ್ ಪರ ಸರ್ಕಾರ'

'ಇದು ಜಾರ್ಜ್ ಪರ ಸರ್ಕಾರ'

'ಕರ್ನಾಟಕ ಸರ್ಕಾರ ಜನಪರವಾದದ್ದಲ್ಲ, ಜಾರ್ಜ್ ಪರವಾದದ್ದು. ಸಾಕಷ್ಟು ಹೋರಾಟ ಮಾಡಿ ಸಚಿವ ಸ್ಥಾನ ಪಡೆದ ಪರಮೇಶ್ವರ ಅವರು ನ್ಯಾಯದ ಪರ ನಿಲ್ಲುವುದು ಬಿಟ್ಟು, ಜಾರ್ಜ್ ರಕ್ಷಣೆಗೆ ಮುಂದಾಗಿದ್ದಾರೆ, ಆ ಮೂಲಕ ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸುವ ಪ್ರಯತ್ನ ಮಾಡುತ್ತಿದ್ದಾರೆ' ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಟೀಕಿಸಿದರು.

ಕುಟುಂಬದಲ್ಲೇ ಜಗಳ ತಂದಿಡುತ್ತೀರಾ?

ಕುಟುಂಬದಲ್ಲೇ ಜಗಳ ತಂದಿಡುತ್ತೀರಾ?

'ಗಣಪತಿ ಅವರ ಜೊತೆ ಪತ್ನಿ 20 ವರ್ಷ ಸಂಸಾರ ಮಾಡಿದ್ದಾರೆ. ಆದರೆ, ಅವರ ತಂದೆ ನೀಡಿದ ಹೇಳಿಕೆ ಆಧರಿಸಿ ಆಕೆ ಗಂಡನೊಂದಿಗೆ ಚೆನ್ನಾಗಿರಲಿಲ್ಲ ಎಂದು ಉತ್ತರ ಹೇಳುತ್ತೀರಲ್ಲ?, ಕುಶಾಲಪ್ಪ ಅವರ ಹೇಳಿಕೆಯನ್ನು ವಿಡಿಯೋ ರೆಕಾರ್ಡ್ ಮಾಡಲಾಗಿದೆಯೇ?' ಎಂದು ವಿರಾಜಪೇಟೆ ಶಾಸಕ (ಬಿಜೆಪಿ) ಕೆ.ಜೆ.ಬೋಪಯ್ಯ ಪ್ರಶ್ನಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP and JDS criticise the Congress government over the death of DySP MK Ganapathi in assembly session on Monday, July 11, 2016. Who said what about MK Ganapathi suicide?.
Please Wait while comments are loading...