ಯಾದಗಿರಿ: ನಾಪತ್ತೆಯಾಗಿದ್ದ ಮಗು ತಿಪ್ಪೆಗುಂಡಿಯಲ್ಲಿ ಶವವಾಗಿ ಪತ್ತೆ
ಯಾದಗಿರಿ, ಸೆಪ್ಟೆಂಬರ್ 27 : ಕಳೆದ ನಾಲ್ಕು ದಿನಗಳಿಂದ ಕಾಣೆಯಾಗಿದ್ದ ಮಗುವಿನ ಮೃತ ದೇಹ ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಹಯ್ಯಾಳ(ಬಿ) ಗ್ರಾಮದ ಮನೆವೊಂದರ ಹಿಂಬದಿಯ ತಿಪ್ಪೆಗುಂಡಿಯಲ್ಲಿ ಪತ್ತೆಯಾಗಿದೆ.
ಭೀಮರಾಯ ಎಂಬುವರ ಪುತ್ರ ಎರಡು ವರ್ಷದ ಆದರ್ಶ ಮನೆಯಿಂದ ಕಾಣೆಯಾಗೆ ನಾಲ್ಕು ದಿನಗಳು ಕಳೆದಿದ್ದವು. ಪಾಲಕರು ಹಾಗೂ ಕುಟುಂಬಸ್ಥರು ಎಲ್ಲಾ ಕಡೆ ಹುಡಿಕಿದರೂ ಮಗು ಕಂಡು ಬರಲಿಲ್ಲ.

ಈ ಬಗ್ಗೆ ಪೋಷಕರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಿದ್ದರು. ಆದರೆ ಮಂಗಳವಾರ ಮಗು ಮನೆ ಹಿಂದಿನ ತಿಪ್ಪಿಗುಂಡಿಯ ನಿಂತ ನೀರಲ್ಲಿ ಬಿದ್ದು ಸಾವನ್ನಪ್ಪಿರುವುದು ಕಂಡು ಬಂದಿದೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಶಹಾಪೂರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.












Click it and Unblock the Notifications