ನಾಯಿ-ನರಿಗಳಂತೆ ಕಾಂಗ್ರೆಸ್ ನಾಯಕರು ಕಚ್ಚಾಡುತ್ತಿದ್ದಾರೆ ಎಂವ ಬಿಎಸ್ ವೈ: ಆರ್ ಬಿ ತಿಮ್ಮಾಪೂರ ಹೇಳಿದ್ದೇನು?

ಬಾಗಲಕೋಟೆ, ನವೆಂಬರ್‌ 04: ಕಾಂಗ್ರೆಸ್ ನವರು ನಾಯಿ-ನರಿಗಳಂತೆ ಕಚ್ಚಾಡ್ತಾರೆ ಎಂದು ಮಾಜಿ ಯಡಿಯೂರಪ್ಪ ಹೇಳಿಕೆ ಸಚಿವ ಆರ್‌ ಬಿ ತಿಮ್ಮಾಪೂರ ಅವರು ತಿರುಗೇಟು ನೀಡಿದ್ದಾರೆ. ತಮ್ಮ ಪಕ್ಷದಲ್ಲಿ ಇದ್ದನ್ನು ಗಮನಿಸಿ ನಮ್ಮ ಬಗ್ಗೆ ಹೇಳಲಿ, ಪಾಪ ವಿಪಕ್ಷದ ನಾಯಕನನ್ನು ಆಯ್ಕೆ‌ ಮಾಡಲು ಆಗ್ತಿಲ್ಲ ,ಅಲ್ಲೆಷ್ಟು ಕಚ್ಚಾಟ ಇರಬೇಕು ಲೆಕ್ಕ ಹಾಕಿ ಎಂದು ಟಾಂಗ್ ನೀಡಿದ್ದಾರೆ.

ಈ ಕುರಿತು ಬಾಗಲಕೋಟೆಯಲ್ಲಿ ಮುಖ್ಯಮಂತ್ರಿ ಸ್ಥಾನದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯನವರು ಸಿಎಂ ಇದಾರೆ, ಹಾಗಾಗಿ ಹೇಳಿದ್ದಾರೆ.ಈಗ ಸಿಎಂ ಇದ್ದಾರೆ, ಮತ್ತೆ ಬೇರೆಯವರು ಸಿಎಂ ಆಗ್ತಾರಾ? ಎಂದು‌ ಅಬಕಾರಿ ಸಚಿವರಾದ ಆರ್ ಬಿ ತಿಮ್ಮಾಪೂರ ಪ್ರಶ್ನಿಸಿದ್ದಾರೆ.

Minister RB Thimmapura Fierce Attack Against BJP Leader

ಶಾಸಕಾಂಗ ಪಕ್ಷದ ನಾಯಕರಾಗಿ ಮುಖ್ಯಮಂತ್ರಿ ಆಗಿದ್ದಾರೆ.ಅವರು ಹೋಗುವವರೆಗೂ ಅವರೇ ಸಿಎಂ ಎಂದು ಹೇಳಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರನ್ನ ತೆಗೆಯಬೇಕಂತಿದಾರೆ ಅದೂ ಆಗ್ತಿಲ್ಲ, ಬಿಜೆಪಿಗರು ಬಿಎಸ್ ವೈ ಅವರನ್ನು ಮೂಲೆಗುಂಪು ಮಾಡಿದ್ದಾರೆ. ಏನಾದ್ರು ಮಾತಾಡಿ ಮೇಲೆ ಬರಬೇಕಂತಿದಾರೆ, ಮಾತನಾಡಲಿ ಅವರ ವಯಸ್ಸಿನಲ್ಲಿ ಹೀಗೆ ಮಾತನಾಡಬಾರದು ಎಂದು ಯಡಿಯೂರಪ್ಪ ವಿರುದ್ಧ ಹರಿಹಾಯ್ದರು.

ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲ್ಲ ಎಂಬ ಬಿಎಸ್ ವೈ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನ ಜೈಲಿಗೆ ಕಳುಹಿಸಿದವರು ಯಾರು? ಎಂದು ಪ್ರಶ್ನಿಸಿದ ಅವರು, ಸಿಎಂ ಸ್ಥಾನದಿಂದ ಕೆಳಗಿಳಿಸಿದವರು ಯಾರು? ಈ ಪಾಪದ ಬಗ್ಗೆ ಯಡಿಯೂರಪ್ಪ ಹೇಳಲಿ ಎಂದು ತಿರುಗೇಟು ‌ನೀಡಿದರು.

ಬಿಎಸ್ ವೈ ಝೆಡ್ ಪ್ಲಸ್ ಸೆಕ್ಯುರಿಟಿ ನಿರಾಕರಿಸಿರುವ ವಿಚಾರ ಬಗ್ಗೆ ಮಾತನಾಡಿ ಸಚಿವರು,ಯಡಿಯೂರಪ್ಪ ನವರ ಮೇಲೆ ಇಡಿ ಯವರು, ತೂಗುಗತ್ತಿ ಇಟ್ಕೊಂಡು ಕೂತಿದ್ದಾರೆ. ಬಿಜೆಪಿಯಲ್ಲಿ ಬಿಎಸ್ವೈ ಬಹಳ ಹೈರಾಣಾಗಿದ್ದಾರೆ. ಅವರೊಬ್ಬ ಪರಿಶ್ರಮಪಟ್ಟ ನಾಯಕ, ಮೂಲೆಗುಂಪು ಮಾಡಲು ಬಿಜೆಪಿಯಲ್ಲಿಯೇ ಷಡ್ಯಂತ್ರ ಈಗಲೂ ನಡಿತಿದೆ. ಹಿಂದೆಯೂ ನಡೆದಿದೆ, ಮುಂದೆಯೂ ನಡೆಯುತ್ತದೆ ಎಂದು ಹೇಳಿದರು.

ನೀವೇ ಐದು ವರ್ಷ ಮಂತ್ರಿ ಆಗಿರ್ತೀರಾ ಎಂಬ ಪ್ರಶ್ನೆಗೆ ,ನಾನು ಸಚಿವಗಿರಿಗೆ ಎಂದೂ ಪ್ರಯತ್ನ ಮಾಡಿಲ್ಲ. ಸಚಿವ ಸ್ಥಾನ ಕೊಟ್ಟಿದ್ದಾರೆ, ಒಳ್ಳೆಯ ಕೆಲಸ ಮಾಡೋಣ,ನಾನು ಸಚಿವನಾಗಲೇಬೇಕು. ಸಿದ್ದರಾಮಯ್ಯ ಇದ್ದಾಗಲೇ ಸಚಿವ ಆಗಬೇಕು ಅಂತೇನಿಲ್ಲ. ಕುಮಾರಸ್ವಾಮಿ ಸಿಎಂ ಇದ್ದಾಗಲೂ ಮಂತ್ರಿ ಆಗಿದ್ದೀನಿ. ಪರಮೇಶ್ವರ ಸಿಎಂ ಆಗಬೇಕು ಎಂದು ರಾಜಣ್ಣ ಹೇಳಿಕೆ ವಿಚಾರ ಬಗ್ಗೆ ಮಾತನಾಡಿದ ಸಚಿವರು,ಅದು ಅವರ ಅಭಿಪ್ರಾಯ, ನಮ್ಮಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ.ಅವರವರ ಅಭಿಪ್ರಾಯ ಹೇಳಿದ್ದಾರೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+