ಲೋಕಸಭಾ ಚುನಾವಣೆ ಕೈ ಸಿದ್ದತೆ; ಮೂವರು ಡಿಸಿಎಂ ಆಯ್ಕೆ? : ಪ್ರಿಯಾಂಕ್ ಖರ್ಗೆ ಹೇಳಿದಿಷ್ಟು
ಕಲಬುರಗಿ, ಸೆಪ್ಟೆಂಬರ್ 16: ಲೋಕಸಭಾ ಚುನಾವಣೆ ಹಿನ್ನೆಲೆ ಹಲವು ಸಮುದಾಯದ ಮತಗಳ ಮೇಲೆ ಕಣ್ಣೀಟ್ಟಿರುವ ಕಾಂಗ್ರೆಸ್ ಪಾಳಯದಲ್ಲಿ ಮತ್ತೆ ಮೂವರು ಡಿಸಿಎಂಗಳ ನೇಮಕದ ಕುರಿತು ಸಚಿವ ಕೆ ಎನ್ ರಾಜಣ್ಣ ಅವರ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಸೃಷ್ಠಿಸಿದೆ.
ಹೌದು, ಈ ಕುರಿತು ಕಲಬುರಗಿಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರೀಯಾಂಕ್ ಖರ್ಗೆ ಮಾತನಾಡಿ, ಮೂವರು ಡಿಸಿಎಂ ಆಯ್ಕೆ ವಿಚಾರ ಹೈಕಮಾಂಡ್ ಮುಂದೆ ಇಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ರಾಜಣ್ಣ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಎಲ್ಲರಿಗೂ ಹೈಕಮಾಂಡ್ ಮುಂದೆ ತಮ್ಮ ಅಭಿಪ್ರಾಯ ಹೇಳಲು ಸ್ವಾತಂತ್ರ್ಯವಿದೆ. ಹೀಗಾಗಿ, ಮೂವರು ಡಿಸಿಎಂ ಅಂತಾದರೂ ಹೇಳಲಿ ಐವರು ಡಿಸಿಎಂ ಅಂತಾದರೂ ಹೇಳಲಿ, ಅದು ಅವರಿಗೆ ಬಿಟ್ಟದ್ದು.ಆದರೆ ನನಗೆ ಗೊತ್ತಿರುವ ಮಾಹಿತಿಯ ಪ್ರಕಾರ ಹೈಕಮಾಂಡ್ ಮುಂದೆ ಇಂತಹ ಯಾವುದೇ ಪ್ರಸ್ತಾವನೆ ಇಲ್ಲ ಎಂದು ತಿಳಿಸಿದ್ದಾರೆ.
ಪ್ರಿಯಾಂಕ ಖರ್ಗೆ ಸೂಪರ್ ಸಿಎಂ ರೀತಿ ವರ್ತಿಸುತ್ತಿದ್ದಾರೆ ಎನ್ನುವ ಭಾಸ್ಕರ್ ರಾವ್ ಹೇಳಿಕೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಭಾಸ್ಕರ ರಾವ್ ನಮ್ಮಲ್ಲೂ ಟಿಕೆಟ್ ಕೇಳಿದ್ರು.. ಆಮ್ ಆದ್ಮಿಗೆ ಹೋದ್ರು.. ಈಗ ಬಿಜೆಪಿ ಸೇರಿದ್ದಾರೆ. ಭಾಷ್ಕರರಾವ್ ಅವರಿಗೆ ಬಿಜೆಪಿಗೆ ಹೋದ ಮೇಲೆ ಸಂವಿಧಾನ ಮರೆತು ಹೋಗಿದೆ. ಸಿನಿಯರ್ ಐಪಿಎಸ್ ಅಧಿಕಾರಿ ಇದ್ದವರು ಅವರು ಸಾಮಾನ್ಯ ಪ್ರಜ್ಞೆ ಇಲ್ಲದ ಅಧಿಕಾರಿ ನಮ್ಮಲ್ಲಿ ಇದ್ರಾ ? ಅನ್ನಿಸುತ್ತಿದೆ ಎಂದು ತಿರುಗೇಟು ನೀಡಿದರು.
ಚೈತ್ರಾ ಕುಂದಾಪುರ ಗ್ಯಾಂಗ್ ಬಂಧನ ಪ್ರಕರಣದ ಕುರಿತು ಮಾತನಾಡಿ, ಎಲ್ಲಾರು ಯಾಕೆ ಕುಮಾರ ಕೃಪಾದಿಂದಲೇ ಆಪರೇಟ್ ಆಗಿರೋದು ? ಇದೇ ಚೈತ್ರಾ ಕುಂದಾಪುರ ಅರಗ ಜ್ಞಾನೇಂದ್ರ ಅವರ ಕ್ಷೇತ್ರದಲ್ಲಿ ಅಬ್ಬರದ ಭಾಷಣ ಮಾಡಿದರು. ಚುನಾವಣೆಯಲ್ಲಿ ಸ್ಟಾರ್ ಕ್ಯಾಂಪೇನರ್ ಆಗಿದ್ದರು ಎಂದು ಬಿಜೆಪಿ ನಾಯಕರ ಕುರಿತು ವ್ಯಂಗ್ಯವಾಡಿದರು.
ಸುಳ್ಳು ಸುದ್ದಿಗೆ ಕಡಿವಾಣ ಹಾಕೋದಕ್ಕೆ ಮಾಧ್ಯಗಳು ಸ್ವಾಗತ ಮಾಡುತ್ತಿವೆ. ಆದರೆ ಬಿಜೆಪಿಗೆ ಯಾಕೆ ಆತಂಕ ಕಾಡುತ್ತಿದೆ ? ಬಿಜೆಪಿಯವರ ಬಳಿ ಸುಳ್ಳಿನ ಸುದ್ದಿಯ ಫ್ಯಾಕ್ಟರಿ ಇದೆಯಾ ? ನಾವು ರಾತ್ರೋ ರಾತ್ರಿ ಕಾನೂನು ತರ್ತಿಲ್ಲ.. ಎಲ್ಲರ ಸಲಹೆ ಸಹ ಕೇಳಿದ್ದಿವಿ. ಸಾಮಾಜಿಕ ತಾಣದಲ್ಲಿ ಸುಳ್ಳಿನ ಕಂತೆಗಳು ಹರಿದಾಡಬಾರದು ಎಂದು ಕಾನೂನು ತರಲು ಯೋಚಿಸಿದ್ದೇವೆ.
ನಾವೇನು ಮೋದಿ ಅಮಿತ್ ಶಾ ತರಹ ರಾತ್ರೋ ರಾತ್ರಿ ಕದ್ದು ಮುಚ್ಚಿ ಜಾರಿಗೆ ತರ್ತಿಲ್ಲ. ಇದರಿಂದ ಬಿಜೆಪಿಯವರು ವಾಕ್ ಸ್ವಾತಂತ್ರ್ಯ ಹೋಗುತ್ತೆ ಅಂತಿದಾರೆ. ಬಿಜೆಪಿಯವರಿಗೆ ಯಾಕೆ ಆತಂಕ ಆಗ್ತಿದೆಯೋ? ನಿಮ್ಮವರು ಯಾರಾದ್ರೂ ಜೈಲಿಗೆ ಹೋಗ್ತಾರೆ ಅಂತ ಭಯಾನಾ ? ಎಂದು ಪ್ರಶ್ನಿಸಿದರು.
ಕೇಂದ್ರಿಯ ವಿವಿಯಲ್ಲಿ ವಿವೇಕಾನಂದರಿಗೆ ಅವಮಾನ ವಿಚಾರ ಕುರಿತು ಮಾಧ್ಯಮಗಳ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರಿಯ ವಿವಿ ವಿದ್ಯಾಭ್ಯಾಸ ಬಿಟ್ಟು ಎಲ್ಲಾ ಮಾಡ್ತಿದೆ. ನಾನು ಆದಷ್ಟು ಬೇಗ ವಿವಿಗೆ ಬೇಟಿ ನೀಡ್ತೇನೆ. ಸೆಂಟ್ರಲ್ ವಿವಿಯಲ್ಲಿ ಕಲಬುರಗಿಗಿಂತ ಹೆಚ್ಚು ರಾಜಕೀಯ ನಡೆದಿದೆ. ವಿವಿಯವರು ಕೇಂದ್ರಕ್ಕೆ ಸಂಬಂಧ ಇದ್ದಿವಿ ಎಂದು ಅಂದು ಕೊಂಡಿರಬಹುದು, ಆದರೆ ರಾಜ್ಯ ಸರ್ಕಾರ ಅದಕ್ಕೆ ಸಾಕಷ್ಟು ಸೌಲಭ್ಯಗಳನ್ನು ಕೊಟ್ಟಿದೆ.
ಸೆಂಟ್ರಲ್ ವಿವಿಯಲ್ಲಿ ಆರ್ ಎಸ್ ಎಸ್ ಕಚೇರಿ ತೆರಯೋದಕ್ಕೆ ಬಿಡೋದಿಲ್ಲ. ನಮ್ಮ ಮಕ್ಕಳಿಗೆ ಒಳ್ಳೆ ವಿದ್ಯಾಭ್ಯಾಸ ಕೊಡೊದಕ್ಕೆ ವಿವಿ ತರಿಸಿರೋದು ಹೊರತು ಆರ್ ಎಸ್ ಎಸ್ ಕಚೇರಿ ಸಲುವಾಗಿ ಅಲ್ಲ. ಯಾವ್ಯಾವ ಉದ್ದೇಶಗಳಿಗೆ ಸಂಸ್ಥೆ ತೆರದಿದೆ. ಅದನ್ನು ಪಾಲನೆ ಮಾಡಲಿ.ಪೊಲೀಸ್ ಠಾಣೆಯಲ್ಲಿ ಕೇಸರಿ ಶಾಲು ಹಾಕಿಕೊಂಡಿದ್ದಾರೆ.
ಶಾಖೆಗಳು ಕಳೆದ ಒಂಭತ್ತು ವರ್ಷಗಳಲ್ಲಿ ಬಹಳಷ್ಟು ತೆರೆದಿದೆ.ಆರ್ ಎಸ್ ತತ್ವ ನಂಬಿ ಯಾರು ಉದ್ದಾರ ಆಗಿದ್ದಾರೆ? ಆರ್ ಎಸ್ ಎಸ್ ತತ್ವದ ಬಗ್ಗೆ ಮಾತಾಡೋದಕ್ಕೆ ನಾನೇನು ಹೇದರೋದಿಲ್ಲ. ಆರ್ ಎಸ್ ಎಸ್ ತತ್ವ ದಿಂದ ದೇಶ ಉದ್ದಾರ ಆಗೋದಿಲ್ಲ. ಆರ್ ಎಸ್ ಎಸ್ ನಲ್ಲಿ ಆರ್ಥಿಕ ಸಮಾನತೆ ಇಲ್ಲ , ದೇಶಭಕ್ತರಿಗೆ ಇತಿಹಾಸವೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.












Click it and Unblock the Notifications