ಬಿಜೆಪಿ ನಾಯಕರಿಗೆ 8 ಪ್ರಶ್ನೆ ಕೇಳಿದ ಸಚಿವ ಪ್ರಿಯಾಂಕ್ ಖರ್ಗೆ!
ಕರ್ನಾಟಕ ಸರ್ಕಾರದ ಬೆಲೆ ಏರಿಕೆಯನ್ನು ವಿರೋಧಿಸಿ ಕರ್ನಾಟಕ ಬಿಜೆಪಿಯು ಜನಾಕ್ರೋಶ ಯಾತ್ರೆಯನ್ನು ಮಾಡುತ್ತಿದೆ. ರಾಜ್ಯದಾದ್ಯಂತ ಜನಾಕ್ರೋಶ ಯಾತ್ರೆಯನ್ನು ನಡೆಸುತ್ತಿದ್ದು ಇದೀಗ ಇದರ ಭಾಗವಾಗಿ ಬಿಜೆಪಿ ನಾಯಕರು ಕಲಬುರಗಿಗೆ ಭೇಟಿ ನೀಡಿದ್ದು. ಸ್ಥಳೀಯರಿಂದ ಬಿಜೆಪಿ ನಾಯಕರ ಮೇಲೆ ಆಕ್ರೋಶ ವ್ಯಕ್ತವಾಗಿದೆ ಎನ್ನಲಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರ ನಡುವೆ ಬಿಜೆಪಿ ನಾಯಕರಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಕಲಬುರಗಗಿಗೆ ಆಗಮಿಸಿದ ಬಿಜೆಪಿ ನಾಯಕರಿಗೆ ಸುಸ್ವಾಗತ.

ಈ ಹಿಂದೆ ತಾವು ಕಲಬುರಗಿಗೆ ಬಂದಾಗ, ನಿಮ್ಮ ಆರೋಪಗಳ ಸ್ಯಾಂಪಲ್ ಇಂತಿವೆ ಎಂದು ಅವರು ಲಿಸ್ಟ್ ಕೊಟ್ಟಿದ್ದಾರೆ.
* ಪ್ರಿಯಾಂಕ್ ಖರ್ಗೆ ಬಿಜೆಪಿ ಅಭ್ಯರ್ಥಿ ಮಣಿಕಾಂಠ ರಾಥೋಡ್ ಕೊಲ್ಲಲು ಪ್ರಯತ್ನಿಸಿದರು. ಈ ಆರೋಪದ ಕತೆ ಏನಾಯಿತು?
* ಪ್ರಿಯಾಂಕ್ ಖರ್ಗೆ ಸಚಿನ್ ಪಾಂಚಾಲ್ ಸಾವಿಗೆ ಕಾರಣರು. ದಯವಿಟ್ಟು ಈ ಪ್ರಕರಣದ ತನಿಖೆಯ ಬಗ್ಗೆ ಜನರಿಗೆ ವಿವರಿಸಿ.
* ಈಗ ಹೊಸ ಆರೋಪವಾಗಿ ಅಕ್ರಮ ಮರಳು ಗಣಿಗಾರಿಕೆಯಿಂದ ಯುವಕನೊಬ್ಬ ಸಾವನ್ನಪ್ಪಿದ್ದಾನೆ ಎಂದು ಹೇಳುತ್ತಿದೀರಿ, ಇದು ಕೂಡ ಸುಳ್ಳು ಎಂದು ಸಾಬೀತಾಗುತ್ತದೆ.
* ಬಿಜೆಪಿಯವರ ಹಿಂದಿನ ಎಲ್ಲಾ ಆರೋಪಗಳು ಹೂರಣವಿಲ್ಲದ ಹೊಳಿಗೆಯಂತೆ ಕಳೆದುಹೋದವು ಎಂದು ಹೇಳಿರುವ ಅವರು ಆದರೆ,
ಬಿಜೆಪಿ ನಾಯಕರು ಉತ್ತರಿಸಲೇಬೇಕಾದ ಕೆಲವು ಪ್ರಶ್ನೆಗಳಿವೆ ಎಂದು ಹೇಳಿದ್ದಾರೆ. ಮುಂದುವರಿದು ಇನ್ನಷ್ಟು ಪ್ರಶ್ನೆಗಳನ್ನು ಬಿಜೆಪಿಗೆ ಕೇಳಿದ್ದಾರೆ.
* ಚಿತ್ತಾಪುರ ಕ್ಷೇತ್ರದ ನಿಮ್ಮ ಘನ ಅಭ್ಯರ್ಥಿ ಬಡವರ ಅಕ್ಕಿ ಕದಿಯುವ ಕಸುಬು ಮುಂದುವರೆಸಿರುವುದೇಕೆ?
* ಕಾಳಗಿಯಲ್ಲಿರುವ ಭೋವಿ ನಿಗಮದ ಹಗರಣದಲ್ಲಿ ಭಾಗಿಯಾಗಿರುವ ಎ2 ಆರೋಪಿ ಯಾರು ಎನ್ನುವುದನ್ನು ವಿವರಿಸುವಿರಾ?
* ಕೋಲಿ ಸಮುದಾಯಕ್ಕೆ ಎಸ್ ಟಿ ಸ್ಥಾನಮಾನ ನೀಡುವ ಪ್ರಸ್ತಾವನೆಗೆ ನಿಮ್ಮ ಮೋದಿಯವರು ಮನ್ನಣೆ ನೀಡದೆ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ವಾಪಸ್ ಕಳಿಸಿದ್ದೇಕೆ ಎನ್ನುವುದನ್ನು ಹೇಳುವಿರಾ ಎಂದು ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.
ಗುಲಾಮಗಿರಿಗೆ ತಳ್ಳುವುದು ಸಂವಿಧಾನದ ಮೇಲಿನ ದಾಳಿಯ ಹಿಂದಿನ ಅಜೆಂಡಾ !
ಗುಲಾಮಗಿರಿಗೆ ತಳ್ಳುವುದು ಸಂವಿಧಾನದ ಮೇಲಿನ ದಾಳಿಯ ಹಿಂದಿನ ಅಜೆಂಡಾ ಎಂದು ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ. ಶೋಷಿತ ಸಮುದಾಯಗಳಿಗೆ ಅಂಬೇಡ್ಕರ್ ಅಂದರೆ ಸಂಭ್ರಮ, ಸಡಗರ, ಏಕೆಂದರೆ ಶೋಷಿತರಿಗೆ ಸ್ವಾಭಿಮಾನದ ಬದುಕು ನೀಡಿದ್ದೇ ಬಾಬಾ ಸಾಹೇಬರು, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಸಮ ಸಮಾಜದ ಭಾಗಿದಾರರಾಗಬೇಕು ಎಂದರೆ ಸಂವಿಧಾನ ಎಂಬ ಸೂರಿನ ಕೆಳಗೆ ಎಲ್ಲರೂ ಒಂದಾಗಿ ನಿಲ್ಲಬೇಕು ಎಂದು ಹೇಳಿದ್ದಾರೆ.
ಬಂಜಾರ ಮಹಾಸಭಾ ವತಿಯಿಂದ ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ .ಆರ್ ಅಂಬೇಡ್ಕರ್ ಅವರ ಜಯಂತಿಯ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರರ ಬಗ್ಗೆ, ಸಂತ ಸೇವಾಲಾಲರ ಬಗ್ಗೆ ನಾವೆಲ್ಲರೂ ತಿಳಿದುಕೊಳ್ಳಬೇಕು. ಬಾಬಾ ಸಾಹೇಬರ ಆಶಯ ಹಾಗೂ ಸಂತ ಸೇವಾಲಾಲರ ತತ್ವ ಎರಡೂ ಒಂದೇ ಆಗಿವೆ ಎಂದಿದ್ದಾರೆ.
ಇಂದು ಅಂಬೇಡ್ಕರ್ ಅವರು ಹಾಗೂ ಅವರ ಸಂವಿಧಾನದ ಮೇಲಿನ ಮೂಲಭೂತವಾದಿಗಳ ದಾಳಿ ಹೆಚ್ಚಿದೆ, ಶೋಷಿತರನ್ನು ಮತ್ತೆ ಪೂರ್ವ ಕಾಲದ ವರ್ಣಾಶ್ರಮದಂತೆ ಮತ್ತೆ ಗುಲಾಮಗಿರಿಗೆ ತಳ್ಳುವುದು ಸಂವಿಧಾನದ ಮೇಲಿನ ದಾಳಿಯ ಹಿಂದಿನ ಅಜೆಂಡಾ. ಇದಕ್ಕೆ ನಾವು ಅವಕಾಶ ನೀಡಬಾರದು ಎಂದು ಅವರು ಹೇಳಿದ್ದಾರೆ.












Click it and Unblock the Notifications